ದಾಳಿ ನಡೆದ ವೇಳೆ ತೇಜಸ್ವಿ ಸೂರ್ಯ ಪಕ್ಕದಲ್ಲೇ ಇದ್ದ ವಿಲನ್ | ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ? - Mahanayaka
1:08 PM Thursday 13 - November 2025

ದಾಳಿ ನಡೆದ ವೇಳೆ ತೇಜಸ್ವಿ ಸೂರ್ಯ ಪಕ್ಕದಲ್ಲೇ ಇದ್ದ ವಿಲನ್ | ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ?

sathish reddy
06/05/2021

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿರುವ ಬೆಡ್ ಬ್ಲಾಕಿಂಗ್ ದಂಧೆಗೆ ಹೊಸ ತಿರುವು ಸಿಕ್ಕಿದ್ದು, ಸಂಸದ ತೇಜಸ್ವಿ ಸೂರ್ಯ ಜೊತೆಗೆ ದಾಳಿ ನಡೆಸಲು ಹೋಗಿದ್ದ ಸತೀಶ್ ರೆಡ್ಡಿಯೇ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೊಮ್ಮನಹಳ್ಳಿ ವಲಯದ ವಾರ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸತೀಶ್ ರೆಡ್ಡಿ ಹಾಗೂ ಆತನ ಸಹಚಾರರು ಧಮ್ಕಿ ಹಾಕಿ  ತಮಗೆ ಬೇಕಾದವರಿಗೆ ಹಾಸಿಗೆ ಕೊಡಿಸುತ್ತಿದ್ದರು ಎಂದು ಹೇಳಲಾಗಿದೆ.

ಸತೀಶ್ ರೆಡ್ಡಿ ಅವರು ಶಿಫಾರಸು ಮಾಡಿದವರಿಗೆ ಹಾಸಿಗೆಗಳನ್ನು ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದು,  ಹಾಸಿಗೆಗಳನ್ನ ಹಣಕ್ಕಾಗಿ ಮಾರಾಟ ಮಾಡುವಲ್ಲಿ ಸತೀಶ್ ರೆಡ್ಡಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರು ಎನ್ನುವ ಆರೋಪಗಳು ಕೇಳಿ ಬಂದಿದೆ.

ಪಕ್ಕದಲ್ಲಿಯೇ ವಿಲನ್  ಇದ್ದರೂ ಸಂಸದ ತೇಜಸ್ವಿ ಸೂರ್ಯ ಆಸ್ಪತ್ರೆಯ ಅಮಾಯಕ ಸಿಬ್ಬಂದಿಯ ಜೊತೆಗೆ ಕೂಗಾಡಿದ್ದೇ ಅಲ್ಲದೇ, ಅಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಮ್ ಧರ್ಮದ ಕಾರ್ಮಿಕರ ಹೆಸರನ್ನು ಮಾತ್ರವೇ ಬಳಸಿದ್ದು, ಇದು ಮದ್ರಸನಾ? ಇಲ್ಲ ವಾರ್ ರೂಮಾ? ಎಂದು ಪ್ರಶ್ನಿಸಿದ್ದರು.

ಸತೀಶ್ ರೆಡ್ಡಿ ವಿರುದ್ಧ ಇದೀಗ ವ್ಯಾಪಕ ಆರೋಪಗಳು ಕೇಳಿ ಬಂದಿದೆ. ಆದರೆ, ಈ ಬಗ್ಗೆ ಕೆಲವೇ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸತೀಶ್ ರೆಡ್ಡಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದರೆ, ಸರ್ಕಾರ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತದೆ ಎನ್ನುವ ಚರ್ಚೆಗಳು ಕೂಡ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ