ಎಳೆನೀರು ಕುಡಿಯಲು ತಂಪು, ರೇಟ್ ಕೇಳಿದ್ರೆ ತಲೆಬಿಸಿಯಾಗುತ್ತದೆ!
ಬೆಂಗಳೂರು: ತಂಪಾಗಲು ಜನರು ಎಳೆನೀರು ಕುಡಿಯುತ್ತಾರೆ. ಆದ್ರೆ ಎಳೆನೀರು ರೇಟ್ ಕೇಳಿದ್ರೆ ತಲೆಬಿಸಿಯಾಗುತ್ತದೆ. ಯಾಕೆಂದ್ರೆ, ಜನರ ಆದಾಯ ಹೆಚ್ಚಾಗದಿದ್ದರೂ, ಬೆಲೆ ಏರಿಕೆ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ.
30—35 ರೂಪಾಯಿಗೆ ಸಿಗುತ್ತಿದ್ದ ಎಳೆನೀರಿನ ಬೆಲೆ ಇದೀಗ 60ರ ಗಡಿದಾಟಿದೆ. ಕೆಲವೊಂದು ಪ್ರದೇಶಗಳಲ್ಲಿ ಮಾರಾಟಗಾರರು ಹೇಳಿದ್ದೇ ದರ ಎನ್ನುವಂತಾಗಿದೆ. ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ಎಳೆನೀರಿಗೆ ಭರ್ಜರಿ ಬೇಡಿಕೆ ಕೂಡ ಇದೆ. ಹೀಗಾಗಿ ಎಳೆನೀರಿಗೆ ಈಗಲೇ 60 ಇದೆ, ಮುಂದಿನ ದಿನಗಳಲ್ಲಿ ಎಳೆನೀರು ಕುಡಿಯಲು ಸಾಧ್ಯವೇ? ಅಂತ ಜನ ತಲೆಕೆರೆದುಕೊಳ್ಳುವಂತಾಗಿದೆ.
ಅಂದ ಹಾಗೆ, ಎಳೆನೀರಿಗೆ 60 ರೂಪಾಯಿ ದರ ಇದ್ದರೂ, ಇದರಿಂದ ರೈತರಿಗೇನೂ ಉಪಯೋಗವಿಲ್ಲ. ಯಾಕಂದ್ರೆ ಇದ್ರಿಂದ ಲಾಭ ಮಾಡಿಕೊಳ್ಳುವವರು ಮಧ್ಯವರ್ತಿಗಳೇ ಆಗಿದ್ದಾರಂತೆ.
ಅಂಗಡಿಯವರು ಏನು ಹೇಳುತ್ತಾರೆ?
ಎಳೆನೀರಿನ ಬೆಲೆ ಏರಿಕೆಗೆ ಅಂಗಡಿಯವರು ಹೇಳುತ್ತಿರೋದು ಇಷ್ಟೆ, ಈಗ ಸಾಕಷ್ಟು ಪ್ರಮಾಣದಲ್ಲಿ ಎಳೆನೀರು ಬರುತ್ತಿಲ್ವಂತೆ. ಮೊದಲಿನಂತೆ ಗಂಜಿ, ದಪ್ಪ ಗಂಜಿ ಎಂದೆಲ್ಲಾ ವೆರೈಟಿ ಸಿಗುವುದು ಕಷ್ಟವಾಗಿದೆ. ವಾರಕ್ಕೆ ಎರಡು ಮೂರು ದಿನ ಲೋಡ್ ಬರ್ತಾ ಇತ್ತು. ಆದರೆ ಈಗ ಕಾಯಿ ಬರೋದೇ ಕಡಿಮೆಯಾಗಿದೆ. ಅದಕ್ಕೇ ದರ ಏರಿಕೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: