ಏರ್ಪೋರ್ಟ್ ಗೆ ನುಗ್ಗಿ ವಿಮಾನ ಕದ್ದ ಕಳ್ಳರು! - Mahanayaka

ಏರ್ಪೋರ್ಟ್ ಗೆ ನುಗ್ಗಿ ವಿಮಾನ ಕದ್ದ ಕಳ್ಳರು!

07/01/2021

ಅರಿಜೋನಾ: ಏರ್ಪೋರ್ಟ್ ಗೆ ನುಗ್ಗಿ ವಿಮಾನವನ್ನೇ ಕದ್ದ ಘಟನೆ ಅರಿಜೋನಾದಲ್ಲಿ ನಡೆದಿದೆ. ಈ ವಿಚಾರವನ್ನು ಸ್ವತಃ ಪೊಲೀಸರೇ ಬಹಿರಂಗಪಡಿಸಿದ್ದು, ಕಳ್ಳರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಬೈಕ್, ಕಾರು ಕಳವು ಮಾಡುವುದನ್ನು ಕೇಳಿದ್ದೇವೆ. ಆದರೆ ಕಾಟನ್ವುಡ್ ವಿಮಾನ ನಿಲ್ದಾಣದ ಮುಖ್ಯದ್ವಾರವನ್ನು ನಿಷ್ಕ್ರಿಯಗೊಳಿಸಿ ಒಳ ಪ್ರವೇಶಿಸಿದ್ದ ಕಳ್ಳರು ಒಂದು ವಿಮಾನವನ್ನೇ ಕದ್ದಿದ್ದಾರೆ.

ಡಿಸೆಂಬರ್ 31ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಡವಾಗಿ ಫೇಸ್ ಬುಕ್ ಪೇಜ್ ನಲ್ಲಿ  ಪೋಸ್ಟ್ ಮಾಡಿದ್ದಾರೆ.  ಕಳ್ಳರು ಬಾಕ್ಸ್ ಟ್ರೇಲರ್ ನ್ನು ಕದ್ದಿದ್ದಾರೆ. ಜೊತೆಗೆ ವಿಮಾನದ ಬಿಡಿಭಾಗಗಳು ಕೂಡ ಕಳ್ಳರ ಪಾಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಕಳ್ಳರು ವಿಮಾನವನ್ನೇ ಕಳವು ಮಾಡಿದಾಗ ಪೊಲೀಸರು, ಎಲ್ಲಿದ್ದರು, ಎಂದ ಸಾಮಾಜಿಕ ಜಾಲತಾಣಗಳಲ್ಲಿ ಜನ ಟ್ರೋಲ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ