ಹಕ್ಕಿ ಜ್ವರದ ಎಫೆಕ್ಟ್: ಕೋಳಿ ಮಾಂಸಕ್ಕೆ ಕೇವಲ 15 ರೂಪಾಯಿ - Mahanayaka
9:47 PM Wednesday 11 - September 2024

ಹಕ್ಕಿ ಜ್ವರದ ಎಫೆಕ್ಟ್: ಕೋಳಿ ಮಾಂಸಕ್ಕೆ ಕೇವಲ 15 ರೂಪಾಯಿ

07/01/2021

ದೆಹಲಿ: ಕೊರೊನಾದಿಂದ ದೇಶ ತತ್ತರಿಸಿ ಹೋಗಿರುವ ನಡುವೆಯೇ ಹಕ್ಕಿ ಜ್ವರ ಆತಂಕವನ್ನು ಸೃಷ್ಟಿಸಿದೆ. ಹಕ್ಕಿ ಜ್ವರದ ಭೀತಿ ಹಿನ್ನೆಲೆಯಲ್ಲಿ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ  ಕೋಳಿ ಮಾಂಸದ ಬೆಲೆ ಕೇವಲ 15ಗಳಾಗಿದ್ದು, ಇದರಿಂದಾಗಿ ದಿನವೊಂದಕ್ಕೆ ಸುಮಾರು 1.20 ಕೋ.ರೂ. ನಷ್ಟ ಸಂಭವಿಸುತ್ತಿದೆ.

ಹರಿಯಾಣದ ಜಿಂದ್ ಜಿಲ್ಲೆಕೋಳಿ ಉದ್ಯಮದ ಕೇಂದ್ರ ಬಿಂದುವಾಗಿದ್ದು,  ಇದೊಂದೆ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಕೋಳಿ ಫಾರಂಗಳು ಕಾರ್ಯಾಚರಿಸುತ್ತಿವೆ. 80ಕ್ಕೂ ಅಧಿಕ ಮೊಟ್ಟೆ ಕೇಂದ್ರಗಳಿವೆ. ದೆಹಲಿಗೆ ಇಲ್ಲಿಂದ ಪ್ರತಿ ನಿತ್ಯ 4 ಲಕ್ಷಕ್ಕೂ ಅಧಿಕ ಕೋಳಿಗಳನ್ನು ರೈಲಿನಲ್ಲಿಯೇ ಸಾಗಿಸಲಾಗುತ್ತದೆ. ಸಾಮಾನ್ಯವಾಗಿ ಇಲ್ಲಿ 90 ರೂಪಾಯಿಬೆಲೆ ಇರುವ ಕೋಳಿಗೆ ಇದೀಗ ಕೇವಲ 15 ರೂಪಾಯಿಗಳಾಗಿವೆ.

ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮಾಂಸಹಾರಿ ವಿರೋಧಿಗಳು ಕೋಳಿ ಮಾಂಸ ಸೇವನೆ ಮಾಡಬಾರದು ಎಂದು ಹೇಳುತ್ತಿದ್ದಾರೆ. ಆದರೆ, ಕೋಳಿಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಸಮಸ್ಯೆಗಳಿಲ್ಲ.ಮಾಂಸವನ್ನು ಚೆನ್ನಾಗಿ ಬೇಯಿಸಿದರೆ, ವೈರಸ್ ಗಳು ಸಾಯುತ್ತವೆ ಎಂದು ಜಿಂದ್ ನ ಪಶುಸಂಗೋಪನಾ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ರಾಜುಶರ್ಮಾ ತಿಳಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ