ಬಿಜೆಪಿ ಶಾಸಕರಿಗೆ ಧಮ್ಕಿ ಹಾಕಿದ ಟೋಲ್ ಸಿಬ್ಬಂದಿ | “ಶಾಸಕ, ಸಂಸದ ಆದ್ರೆ ನಮ್ಗೇನು ಟೋಲ್ ಕಟ್ಟಿ” ಎಂದ ಸಿಬ್ಬಂದಿ - Mahanayaka

ಬಿಜೆಪಿ ಶಾಸಕರಿಗೆ ಧಮ್ಕಿ ಹಾಕಿದ ಟೋಲ್ ಸಿಬ್ಬಂದಿ | “ಶಾಸಕ, ಸಂಸದ ಆದ್ರೆ ನಮ್ಗೇನು ಟೋಲ್ ಕಟ್ಟಿ” ಎಂದ ಸಿಬ್ಬಂದಿ

25/02/2021


Provided by

ತುಮಕೂರು:  ಹೆದ್ದಾರಿ ಟೋಲ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಮುಂದಾದ ಬಿಜೆಪಿ ಶಾಸಕರೋರ್ವರಿಗೆ ಟೋಲ್ ಸಿಬ್ಬಂದಿ ಧಮ್ಕಿ ಹಾಕಿದ ಘಟನೆ ನಡೆದಿದ್ದು, ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿಯೇ ಇದಾದರೆ, ಇನ್ನು ಜನಸಾಮಾನ್ಯರ ಪಾಡೇನು ಎಂದು ಜನ ಪ್ರಶ್ನಿಸುವಂತಾಗಿದೆ.


Provided by

ಉಚಿತವಾಗಿ ಟೋಲ್ ಗೇಟ್ ದಾಟಲು ಮುಂದಾದ ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್  ತರಾಟೆಗೆತ್ತಿಕೊಂಡ ಟೋಲ್ ಸಿಬ್ಬಂದಿ, ಅವರನ್ನು ದಾಟಲು ಬಿಡದೇ ಫಾಸ್ಟ್ ಟ್ಯಾಗ್ ಮಾಡಿಸಿಕೊಳ್ಳಿ ಎದು ಧಮ್ಕಿ ಹಾಕಿದ್ದಾರೆ.  ಕಾರಿನ ಮುಂಭಾಗಲ್ಲಿ ಶಾಸಕರು ಎಂಬ ಬೋರ್ಡ್ ನೋಡಿಯೂ ಸಿಬ್ಬಂದಿ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ.

ನೀವು ಶಾಸಕರಾದರೇನು? ಸಂಸದರಾದರೇನು? ಫಾಸ್ಟ್  ಟ್ಯಾಗ್ ಮಾಡಿಸಿಕೊಳ್ಳಿ ಎಂದು ಸರ್ಕಾರಿ ಕೆಲಸದ ನಿಮಿತ್ತ ತೆರಳುತ್ತಿದ್ದ ಶಾಸಕರನ್ನು ತಡೆಹಿಡಿಯಲಾಗಿದೆ. ಟೋಲ್ ಸಿಬ್ಬಂದಿಯ ವರ್ತನೆಯಿಂದ ಆಕ್ರೋಶಗೊಂಡ ಶಾಸಕರು ಡಿವೈಎಸ್ ಪಿ ಶ್ರೀನಿವಾಸ್ ಅವರಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅವರು, ಟೋಲ್ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡಿದ್ದಾರೆ. ಬಳಿಕ ಟೋಲ್ ಕೇಂದ್ರದ ವ್ಯವಸ್ಥಾಪಕರು ಸ್ಥಳಕ್ಕೆ ಆಗಮಿಸಿ ಕ್ಷಮೆಯಾಚಿಸಿದ್ದಾರೆ. ಇಷ್ಟಕ್ಕೆ ಶಾಸಕರು ಸಮಾಧಾನವಾಗಿ ಹೊರಟು ಹೋಗಿದ್ದಾರೆ.


Provided by

ಇಂತಹ ನೂರಾರು ಸಮಸ್ಯೆಗಳು ಸಾರ್ವಜನಿಕರಿಗೆ ದಿನ ನಿತ್ಯವಾಗುತ್ತಿದೆ. ಆದರೆ, ಶಾಸಕರಿಗೆ ಒಂದು ಬಾರಿ ಆದ ತೊಂದರೆಗೆ ಅವರು ನ್ಯಾಯಪಡೆದುಕೊಂಡು ಹೋಗಿದ್ದಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಅವರು ಮುಂದಾಗಲಿಲ್ಲ ಎಂದು ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ