ಬಂಗಾಡಿಯ ಕೋಡಿ ಕೊಡಂಗೆ ಬೋರು ಗುಡ್ಡೆಯಲ್ಲಿ ಅತಿಕಾರ ತಳಿಯನ್ನು ಪ್ರಥಮವಾಗಿ ಬಿತ್ತಿದ  ಕಾನದ – ಕಟದರು | ಸಂಚಿಕೆ: 16 - Mahanayaka

ಬಂಗಾಡಿಯ ಕೋಡಿ ಕೊಡಂಗೆ ಬೋರು ಗುಡ್ಡೆಯಲ್ಲಿ ಅತಿಕಾರ ತಳಿಯನ್ನು ಪ್ರಥಮವಾಗಿ ಬಿತ್ತಿದ  ಕಾನದ – ಕಟದರು | ಸಂಚಿಕೆ: 16

kanada katadaru
10/03/2022

  • ಸತೀಶ್ ಕಕ್ಕೆಪದವು

ತುಳುನಾಡಿಗೆ ಅತಿಕಾರ / ಅತ್ಯಾರ ತಳಿಯ ‘ಕುರುಂಟ’ನ್ನು ಹಿಡಿದು ಕಾಲು ದಾರಿಗಳ ಮೂಲಕ ಬರುಬರುತ್ತಾ –    ಬೆಟ್ಟದ ಕಡ್ತಿಕಲ್ಲ್ ಗಡಿ’ಗೆ ಬಂದು ನಿಲ್ಲುತ್ತಾರೆ . ಒಮ್ಮೆಗೆ ತುಳು ನೆಲದ ಸೌಂದರ್ಯಕ್ಕೆ ಮನೋಲ್ಲಾಸಗೊಂಡು ಮತ್ತೆ ತಮ್ಮ ನಡಿಗೆಯನ್ನು ಮುಂದುವರಿಸಿ ತಮ್ಮ ಬಲ ಕಾರ್ನಿಕಗಳಿಂದ ಇರುಳು ಬೆಳಗುವುದರ ಮೊದಲೇ ನಿರ್ಮಾಣ ಮಾಡಿರುವ ಕೋಡಿಕೊಡಂಗೆ ಬೋರುಗುಡ್ಡೆಯ ಗದ್ದೆಗಳಲ್ಲಿ ತನ್ನ ಬೇಸಾಯದ ಪ್ರಕ್ರಿಯೆಯನ್ನು ಆರಂಭಮಾಡುತ್ತಾರೆ. ಇದು ತುಳುನಾಡಿನ ಕರುಂಗೋಲು ಪದರಂಗಿತದಲ್ಲಿ ಮನೋಜ್ಞಾವಾಗಿ ವಿವರಿಸಲ್ಪಟ್ಟಿದೆ.

“ ಉಲ್ಲಾಯೆಲ ಉಲ್ಲೆರಿಜ್ಜೆರ…… ಜೇವು ಮದಿಯಾಲೆ …….!

ಲೆಪ್ಪನ ಬುಲಿಪ್ಪನಲ ಕೂಟೊಗೇ ಪೋತೆರ ……..!

ಓ ಕೂಟೊದುದೇ ಬನ್ನಗುಲ್ಲಾಯೆ, ದಾನೆ ಮಲ್ತೆರ….!

ಲಂಡ್ ಕಾನೆ , ಮುಂಡುಕನೆ ಬೋರಿ ಮಲ್ತೆರ ….!

ಕಾರಿನ್ ಲ ಕಬಿಲನ್ ಜೋಡಿ ಮಲ್ ತೆರ……!

ಅಂಗರನ್ ಬಾಕುಡನ್ ಮಾನಿ ಮಲ್ತೆರ

ಅಂಡೆ ಪತ್ತ್ ಬೊರ್ಯರಲ ಪೆತ್ತ ಮಲ್ತೆರ !

ಬೊಟ್ಟುಗುಲ ಮೇಲಾಯಿನ ಪಿಲ ಮಲ್ ತೆರ

ಹೀಗೆ ಕರುಂಗೋಲು ಪದರಂಗಿತವು ಈಗಲೂ ಜನಪದದಲ್ಲಿ ಕಾನದ ಕಟದರ ಸಾಧನೆಯ ಸಾಲುಗಳನ್ನು ಬಣ್ಣಿಸುವ ಪರಿಯನ್ನು ತುಳುನಾಡಿನಲ್ಲಿ ಕಾಣಬಹುದಾಗಿದೆ .

ಕಡ್ತಿಕಲ್ಲ್ ಗಡಿಯನ್ನು ದಾಟಿ ತುಳುನಾಡಿಗೆ ಬಂದ ಕಾನದ – ಕಟದರು ನೇರವಾಗಿ ಕೋಡಿಕೊಡಂಗೆಗೆ ಹೋಗಿ  ಉಲ್ಲಾಯ ಕೊಡಂಗೆ ಬಾನರು ರನ್ನು ಬೇಟಿಯಾಗಲು ಹೋಗುತ್ತಾರೆ . ಅವರ ಮಡದಿಯು ‘ ಕೊಡಂಗೆ ಬಾನಾರು’ ಮನೆಯಲ್ಲಿ ಇಲ್ಲದ ವಿಚಾರವನ್ನ ತಿಳಿಸುತ್ತಾ ‘ ಲೆಪ್ಪನ ಬುಲಿಪನಲ ಕೂಟೊಗೇ ಪೋತೆರ್ ,ಎಂಬುದಾಗಿ ತುರ್ತುಕಾರ್ಯ ನಿಮಿತ್ತ ಹೋಗಿರುವ ವಿಚಾರವನ್ನು ತಿಳಿಸುತ್ತಾಳೆ. ಆ ವಿಚಾರವನ್ನು ತಿಳಿದು ತಮ್ಮ ನಿರ್ಧಾರವನ್ನು ಬದಲಾಯಿಸದೇ ನೇರವಾಗಿ ತಾವು ಅಗೆದು ನಿರ್ಮಿಸಿರುವ ಗದ್ದೆಗಳತ್ತ ತೇರಳುತ್ತಾರೆ . ಬೇಸಾಯವನ್ನು ಆರಂಭಿಸಲು ಆಲೋಚಿಸುತ್ತಾರೆ . ನೆರೆಹೊರೆಯವರ ಸಹಾಕಾರ ಕೇಳಿದರೂ ಅಪಹಾಸ್ಯ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು , ಅಸ್ಪಶ್ಯರೇ ಆದ ಅಂಗಾರ – ಬಾಕುಡರ    ಸಹಕಾರಯಾಚಿಸುತ್ತಾರೆ , ಹಾಗೇಯೇ ಲಂಡುಕೆ – ಮುಂಡುಕೆ  ಎತ್ತುಗಳನ್ನು ಉಳುಮೆಗೆ ಬಳಸಿಕೊಳ್ಳುತ್ತಾರೆ . ಕಾರಿ-ಕಬಿಲರ ಜೋಡಿಯನ್ನು ಹೆಮ್ಮೆಯಿಂದ ಉಳುಮೆಗೆ  ಉಪಯೋಗಿಸುತ್ತಾರೆ . ಜೊತೆಗೆ ಕರೆಯುವ ಆಕಳನ್ನು ಖರೀದಿಸಿ ಹಾಲು ಕರೆಯಲು ನಿಪುಣ ವ್ಯಕ್ತಿಯೊಬ್ಬರನ್ನು ನೇಮಿಸುತ್ತಾರೆ . ಇದರ ಜೊತೆಗೆ ಗದ್ದೆಬದುವಿನ ( ಕಟ್ಟಪುಣಿ ) ಸೌಂದರ್ಯಕ್ಕಾಗಿ ಸಾಲು ತೆಂಗಿನ ಸಸಿಗಳನ್ನು ನೆಡುತ್ತಾರೆ ಕಾಲ ಕ್ರಮೇಣ ಬೆಳೆದು ನಿಂತು ಕಾನದ – ಕಟದರ ನಿರ್ಮಾಣದ ಗದ್ದೆಗಳ ಸೊಬಗನ್ನು ಹಿಮ್ಮಡಿಗೋಳಿಸಲು ಸಹಕಾರವಾದುವು .

ಈ ಎಲ್ಲಾ ಜ್ಙಾನವನ್ನು ಕಾನದ – ಕಟದರು  ಕಂಡು ಕೇಳಿ ತಮಗರಿವುಳ್ಳ ಪ್ರಕಾರ ಗದ್ದೆ ಸಾಗುವಳಿಗೆ           ( ಕಂಡ ಸಾಗೋಳಿ )   ಆರಂಭಿಸಲು ಯೋಚಿಸಿದಾಗ , ಬಹುತೇಕ ಪ್ರಾಕೃತಿಕ  ಮಾದರಿಯನ್ನು                ಅನುಸರಿಸಿ ದರು ಎಂಬುದಕ್ಕೆ ಅನೇಕ ಉದಾಹರಣೆಗಳು   ಕರಂಗೋಲು ಪದ- ರಂಗಿತದಲ್ಲಿ ಕಾಣಸಿಗುತ್ತದೆ

“ಏರ್ ಯ  ಓ ಅಂಗರ ಬಾಕುಡ ನಾಲೆರುಲ ಮಾದಲ ……….

ನಾಲೆರುಲ ಮಾದವರೆ , ಕುಸೆಲೇನ್ ಪಿನಯೆನ…..    ಹೀಗೆ ಅದರ ಜ್ಞಾನ ಇಲ್ಲದೆ ಚಿಂತಿತರಾದಗ ಪಡ್ಡಾಯಿ ಕಟ್ ಮಗ ಮೂಡಯೀರ್ಗಲ …….. ಮುಡಾಯಿ ಕಟ್ಟ್ ಮಗ ಪಡ್ಡಾಯೀರ್ಗಲ…..”

ಹೀಗೆ ಎತ್ತುಗಳ ಉಳುಮೆಯ ವಿಧಾನಗಳನ್ನು ಬಲ್ಲವರು ಹೇಳಿಕೊಡುತ್ತಾರೆ  ,ಅದನ್ನೇ ಅನುಸರಿಸುತ್ತಾರೆ , ಈ ನಡುವೆ ಗದ್ದೆಯ ಉಳುಮೆಗೆ ಎತ್ತುಗಳಿಗೆ  ನಾಯೆರ್ , ನಿಗ , ಪುನಕ್ಕೆದಲ್  ಪನೋರು ಗುಂಡಾಲ – ಹೀಗೆ ಅನೇಕ ಮುಖ್ಯ ವಸ್ತುಗಳ ಅಗತ್ಯತೆ  ಇದ್ದುದ್ದರಿಂದ ಪ್ರಕೃತಿದತ್ತ  ಜೀವರಾಶಿಗಳಿಂದ ಮಾದರಿಯನ್ನು ಕಲ್ಪಿಸಿಕೊಂಡು ಸಾಗುವಳಿ ಮಾಡಿರಬಹುದೆಂಬ ಮಾರ್ಮಿಕ ಮಾತುಗಳು ಹಾಡಿನ ರೂಪದಲ್ಲಿ ಕರಂಗೋಲಿನಲ್ಲಿ ಬಹಳ ಸುಂದರವಾಗಿ ವರ್ಣಿತಗೊಂಡಿದೆ

“ ಏರ್ ಯ  ಓ ……. ಲಂಗರ ಬಾಕುಡ ನಾಲೆರುಲ ಮಾದಲ

ನಾಲೆರುಲ ಮಾದವರೆ ನಯೊರೊಂಜಿ ಆಮೊಡೆ

ಕಯೆರ್ ಕಡ್ಪು ಮಗ ನಯೆರೊಂಜಿ ಊರುಲ

ಕೇರಿನ್ ಲ ಪತ್ತ್ ಮಗ ಪುನಕ್ಕೆಲ್ಲೆ ಪಾಡ್ಲ

ಪೊನ್ನೆನ್ಲ ಕಡ್ಪು ಮಗ ನಿಗಲೊಂಜಿ ಗೂರುಲ

ರನ್ನೆನ್ ಲ ಪತ್ತ್ ಮಗ ಪನೊರೊಂಜಿ ಆಕ್ಲ

ಪಾವೊರಿನ್ ಪತ್ತ್ ಮಗ ಗುಂಡಲೊಂಜಿ ಆಕ್ ಲ

ಹೀಗೆ ವರ್ಣರಂಜಿತವಾಗಿ ನಿಸರ್ಗದ ಮರಗಿಡ ಪ್ರಾಣಿ ಪಕ್ಷಿಗಳ ಮಾದರಿಯಲ್ಲಿ ಎತ್ತುಗಳ ಉಳುಮೆಗೆ ಸಿದ್ಧತೆಗಳನ್ನು ಮಾಡಿಕೊಂಡರು ಎಂಬ ಸತ್ಯಾಂಶವನ್ನು ಕರುಂಗೋಲು ಪದರಂಗಿತವು ವಿವರವಾಗಿ ತಿಳಿಯಪಡಿಸುತ್ತದೆ.

ತುಳುನಾಡಿಗೆ  ಅತಿಕಾರ ತಳಿಯನ್ನು ಕಾನದ – ಕಟದ ಅವಳಿ ವೀರರು ಪರಿಚಯಿಸಿದರು ಎಂಬುದನ್ನು ಸರ್ವರೂ ಒಪ್ಪಿಕೊಳ್ಳುತ್ತಾರೆ  ಆದರೆ ಪ್ರಪ್ರಥಮವಾಗಿ ತಳಿಯನ್ನು ಬಿತ್ತಿದ ಸ್ಥಳ , ಗದ್ದೆ , ಪರಿಸರದ ಬಗೆಗೆ ಜ್ಞಾನ  ಬಹಳಷ್ಟು ಜನರಿಗೆ ಕಡಿಮೆ ಇದೆ . ಕಡ್ತಿಕಲ್ಲ್ ಗಡಿಯಿಂದ ಇಳಿದು ಕೋಡಿ ಕೊಡಂಗೆ ಬೋರುಗುಡ್ಡೆಯ ಮೂರು ಮುಡಿ ಗದ್ದೆಯಷ್ಟು ವಿಸ್ತಾರತೆಯಲ್ಲಿ ಅಗೆದು ನಿರ್ಮಾಣ ಮಾಡಿದ ತಮ್ಮ ಸ್ವಂತ ಗದ್ದೆಯಲ್ಲಿ ಅತಿಕಾರ ತಳಿಯ ಬೀಜವನ್ನು ಊರಲು ಶುಭ ಮೂಹುರ್ತ ಗೊತ್ತು ಪಡಿಸುತ್ತರೆ .

ಹಸನ್ಮುಖಿ ಸೂರ್ಯನು ಮೂಡಣದಲ್ಲಿ ರಂಗೇರಿ ಮೇಲೆರುತ್ತಿದ್ದಾಗ ‘ಕೆಂಪ್ಲಜೆ ನಾಗಬೆಮ್ಮೆ’ ರನ್ನು ಸುತ್ತಿಸಿ, ಕುಟುಂಬದ  ಕಲ್ಲುಟಿ – ಪಂಜುರ್ಲಿಯನ್ನು ಸ್ಮರಿಸಿ ತುಳುನಾಡಿನ ಮಣ್ಣಿನಲ್ಲಿ ಪ್ರಥಮ ಬಾರಿಗೆ ಅತಿಕಾರ ತಳಿಯನ್ನು ಬಿತ್ತನೆಮಾಡಿ ತುಳುನಾಡಿನ ಚರಿತ್ರೆಯ ಪುಟಗಳಲ್ಲಿ ದಾಖಲೆಯನ್ನು ನಿರ್ಮಾಣಮಾಡುತ್ತಾರೆ.

ಅತಿಕಾರ ತಳಿಯು ….. ಕಾನದ ಕಟದರು ಬಿತ್ತಿದ ಕ್ಷಣದಿಂದ ಮೊಳಕೆಯೊಡೆದು ನೊಡು ನೋಡುತ್ತಿದ್ದಂತೆಯೇ ವಿಶ್ಮಯವೇ ನಡೆದುಹೋಯಿತು ಎಂಬುದು ಕರುಂಗೋಲು ಪದರಂಗಿತ ಬನ್ನಿಸುತ್ತದೆ “ ಅವೆತ್ತೊಂಜಿ ಕೊಡಿಪುಂಡು ಸೂಜಿದಲ ಕೊಡಿಪು / ಅವೆತ್ತೊಂಜಿ ಪುಂಡೆಲುಂಡು ಬೆದ್ ರಾನೆ ಪುಂಡೆಲು ಹೀಗೆ ಹಾಡು ಮುಂದುವರಿಯುತ್ತದೆ  ಒಟ್ಟಿನಲ್ಲಿ ಈ ತಳಿಯು ಸೂಕ್ಷ್ಮತೆಗೆ ಮಹತ್ವವನ್ನು ಸಾರಿದ್ದು ದಿನದಿಂದ ದಿನಕ್ಕೆ ಅತ್ಯದ್ಬುತ ಬೆಳವಣಿಗೆಯನ್ನು ತೋರ್ಪಡಿಸಿರುವುದು, ಸತ್ಯದ ಅತಿಕಾರ ತಳಿಯ ವಿಶೇಷತೆಯೇ ಆಗಿದೆ . ಸೂಜಿ ಮೊನೆಯಕಾರದಲ್ಲಿ ತಳಿಯು ಮೊಳಕೆಯೊಡೆದು ಬಿದಿರಿನ ಪೊದೆಯಾಕಾರದಲ್ಲಿ ಅತಿಕಾರ ತಳಿಯು ಬೆಳೆದು ಪ್ರಜ್ವಲನಗೊಂಡಿದೆ  ಎಂಬುದನ್ನು  ಜನಪದಗಾರರು ಹಾಡಿ ಹೊಗಳುತ್ತಾರೆ. ಹಾಗೆಯೇ ಅತಿಕಾರ ತಳಿಯ ಭತ್ತವು ವೈಯ್ಯರದಿಂದ  ಬೆಳೆದು ನಿಂತು ನೋಡುಗರನ್ನು ಕೈ ಬೀಸಿ ಹತ್ತಿರಕ್ಕೆ ಕರೆಯುವಂತೆ ಬಾಸವಾಗುತ್ತಿತ್ತು , ಅಲ್ಲದೆ ತೆನೆತುಂಬಿದ ಬಳುಕಿನ ಭತ್ತವು ಮೈಮರೆತು ನಿಂತಾಗ ಗಿಳಿಹಿಂಡುವಿನ ಕಾಟ ಎದುರಾಯಿತು . ಅದಕ್ಕಾಗಿ “ ಗಿಳಿಯನ್ನನ್  ಪತ್ತೊಡುಲ ಗುಡಾರೊಡೆ ಪಾಡೊಡು …….” ಹೀಗೆ ಕರುಗೋಲು ಪದರಂಗಿತ ಸಾಗುತ್ತದೆ ಜೊತೆಗೆ ಬೆಟ್ಟದ ತುತ್ತತುದಿಯಲ್ಲಿ ಕೋಡಿಕೊಡಂಗೆ ಬೋರುಗುಡ್ಡೆ ಇರುವುದರಿಂದ ಕಾಡ ಮೃಗಗಳ ಹಾವಳಿ , ಕಾಡು ಹಂದಿಗಳ ಹಾವಳಿಯೂ ಹೆಚ್ಚಾಯಿತು , ಇವೆಲ್ಲವನ್ನೂ ಎದುರಿಸಲು ಹಕ್ಕಿ ಹಿಡಿಯುವುದರಲ್ಲಿ ಪ್ರ,ಮೀಣರನ್ನು ಗುರುತಿಸಿ ಅವರಿಂದ ಗಿಳಿಗಳನ್ನು ಹಿಡಿಸಲಾಯಿತು ಕಾಡು ಹಂದಿಯ ಬೇಟೆಯಾಡುವವರನ್ನು ಕರೆಸಿ ಹಂದಿಯ ಬೇಟೆ ಮಾಡಿಸಲಾಯಿತು .

ಮುಂದಕ್ಕೆ ಸಾಗುವಳಿ ಮುಗಿದಾಗ ಅವರವರ ಪಾಲನ್ನು ಆವರವರಿಗೆ ಹಂಚಲಾಯಿತು  ಎಂಬುದನ್ನು ಕರುಂಗೋಲು ಪದರಂಗಿತವು ಮಾರ್ಮಿಕವಾಗಿ ಬಿಂಬಿಸುತ್ತದೆ.

“ ಗಿಳಿಯನ್ನ ನ ಗೂಡಾರೊಗು ಬೇತೆನೆ ಲತ್ತೆರ /

ಪಂಜಿ ಪತ್ತು ಜನೊಕುಲ ಬೇತೆನೆ ಲತ್ತೆರ / ಹೀಗೆ ಅವರವರ ಜವಾಬ್ದಾರಿಗೆ ಅನುಸಾರವಾಗಿ ಸಾಗುವಳಿ ಮುಗಿದು ಭತ್ತವನ್ನು ಅಳೆದು ಕೊಟ್ಟರೆಂಬ ಚಿತ್ರಣ ಕರಂತಗೋಲು ವಿವರಿಸುತ್ತದೆ .

ಹೀಗೆ ಅತಿಕಾರ ತಳಿಯನ್ನು ತುಳುನಾಡಿಗೆ ತಂದುಬಿತ್ತಿ ಬೆಳೆದು ಫಲ ಪಡೆಯುವ ಹೊತ್ತಲ್ಲಿ ತಮ್ಮ ಹೆತ್ವವ್ವೆ ಸತ್ಯದಪ್ಪೆ ಬೊಲ್ಲೆಯ ಸಾವಿನ ಸುದ್ದಿಯು ಕಿಜನೊಟ್ಟು ಬರ್ಕೆಯಿಂದ ಬರುತ್ತದೆ. ಅವಳಿ ವೀರರಿಗೆ ಕಾನದ – ಕಟದವರಿಗೆ ಸಿಡಿಲೇ ಬಡಿದಂತಾಯಿತು . ಸುದ್ದಿ ತಿಳಿದ ಕಾನದ – ಕಟದರು ಗಳಗಳನೆ ಅತ್ತರು. ಸತ್ಯ ಧರ್ಮ ನ್ಯಾಯ ನಿಷ್ಠೆಯ ಪ್ರತೀಕ ಹೆತ್ತವ್ವಳ ನಡತೆ , ಆಕೆಯಿಂದಲೇ ಅವಳಿ ಮಕ್ಕಳಲ್ಲಿ ಕೆಚ್ಚೆದೆಯ ಶೌರ್ಯ ತುಂಬಲು ಕಾರಣವಾಗಿದೆ . ಇವೆಲ್ಲವನ್ನು ಒಮ್ಮೆಗೆ ಮೆಲುಕು ಹಾಕಿದರೂ ತಮ್ಮ ಜವಾಬ್ದಾರಿಯನ್ನು ಮರೆಯದೇ ಸಾಗುವಳಿಯ ಸಮಾಪ್ತಿಗಾಗಿ ಅಂಗರ – ಬಾಕುಡರಿಗೆ ಜವಾಬ್ದಾರಿಯನ್ನು ನೀಡಿ ಮತ್ತೆ ಹಿಂತಿರುಗಿ ಬರುವೆವು ಎಂಬುದರ ಸೂಚಿಸಿ ಅತೀ ಬೇಗನೆ ಕಿಜನೊಟ್ಟು ಬರ್ಕೆಯತ್ತ ಹೆಜ್ಜೆ ಬೆಳೆಸಿದರು .

ಹಿಂದಿನ ಸಂಚಿಕೆ: 

ಗಟ್ಟದ ಗಡಿಯಲ್ಲಿ ಚೌಂಡಿಯ ತಡೆ/ ಕಾನದ-ಕಟದರ ಸಾಮಾರ್ಥ್ಯ ಪ್ರದರ್ಶನ/ ತುಳುನಾಡಿನಲ್ಲಿ ಚೌಂಡಿ, ಚೌಂಡಿ ಗುಳಿಗನಿಗೆ ನಿಲೆ: ಸಂಚಿಕೆ: 15

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ