ಗೋಸಾಗಾಟದ ಆರೋಪ: ಲಿಂಬೆಹಣ್ಣು ಸಾಗಿಸುತ್ತಿದ್ದ ಲಾರಿಯ ಮೇಲೆ ಗೋರಕ್ಷಾ ಗೂಂಡಾಗಳ ದಾಳಿ - Mahanayaka
11:47 PM Thursday 10 - September 2026

ಗೋಸಾಗಾಟದ ಆರೋಪ: ಲಿಂಬೆಹಣ್ಣು ಸಾಗಿಸುತ್ತಿದ್ದ ಲಾರಿಯ ಮೇಲೆ ಗೋರಕ್ಷಾ ಗೂಂಡಾಗಳ ದಾಳಿ

03/07/2024

ಗೋ ಸಾಗಾಟವೆಂದು ಆರೋಪಿಸಿ ಲಿಂಬೆಹಣ್ಣು ಸಾಗಿಸುತ್ತಿದ್ದ ಲಾರಿಯ ಮೇಲೆ ರಾಜಸ್ಥಾನದ ಗೋರಕ್ಷಾ ಗೂಂಡಾಗಳು ದಾಳಿ ನಡೆಸಿದ್ದಾರೆ. ಸೋನು ಬನ್ಸಿ ರಾಮ್ ಮತ್ತು ಸುಂದರ್ ಸಿಂಗ್ ಎಂಬವರ ಮೇಲೆ ಗೂಂಡಾಗಳು ಯದ್ವತದ್ವ ದಾಳಿ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಮಳೆಯ ಕಾರಣ ಹೈವೇಯಲ್ಲಿ ಲಾರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ 20 ರಷ್ಟು ಗೂಂಡಾಗಳು ಲಾರಿಯನ್ನು ಸುತ್ತುವರಿದಿದ್ದಾರೆ.

ಜನರು ಸೇರಿದೊಡನೆ ಇವರು ದರೋಡೆ ಮಾಡಲು ಬಂದಿದ್ದಾರೆ ಎಂದು ಭಾವಿಸಿದ ಸುಂದರ ಸಿಂಗ್ ಮತ್ತು ಸೋನು ಬನ್ಸಿ ರಾಮ್ ಅವರು ಲಾರಿಯನ್ನು ಚಲಾಯಿಸಿದ್ದಾರೆ. ಆದರೆ ಹತ್ತಿರದ ಟೋಲ್ ಗೇಟ್ ಗೆ ತಲುಪಿದಾಗ ಜನರು ಅಲ್ಲಿಗೆ ಬಂದು ಮನಬಂದಂತೆ ಥಳಿಸಿದ್ದಾರೆ. ಆ ಬಳಿಕ ಅವರು ಲಾರಿ ಹತ್ತಿ ಪರಿಶೀಲಿಸಿದ್ದಾರೆ. ಆಗ ಲಾರಿಯಲ್ಲಿ ಲಿಂಬೆಹಣ್ಣು ಇದೆ ಎಂದು ಗೊತ್ತಾದ ಬಳಿಕ ಅವರು ಸ್ಥಳದಿಂದ ಕಾಲ್ ಕಿತ್ತಿದ್ದಾರೆ ಎಂದು ಇವರಿಬ್ಬರೂ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎಚ್ಚೆತ್ತಿದ್ದಾರೆ. ಗಾಯಗೊಂಡ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti