ಕಾಲೇಜಿನಿಂದ ಡಿಬಾರ್ ಆದ್ಳು ಆಕೆ: ಅಮ್ಮನಿಗೆ ವಿಷ್ಯ ಗೊತ್ತಾಯ್ತು ಅಂತಾ ತಾಯಿಯನ್ನೇ ಕೊಂದೇ ಬಿಟ್ಳು; ಆರೋಪಿ ಪುತ್ರಿಗೆ ಕೊನೆಗೂ ಸಿಕ್ತು ಶಿಕ್ಷೆ - Mahanayaka

ಕಾಲೇಜಿನಿಂದ ಡಿಬಾರ್ ಆದ್ಳು ಆಕೆ: ಅಮ್ಮನಿಗೆ ವಿಷ್ಯ ಗೊತ್ತಾಯ್ತು ಅಂತಾ ತಾಯಿಯನ್ನೇ ಕೊಂದೇ ಬಿಟ್ಳು; ಆರೋಪಿ ಪುತ್ರಿಗೆ ಕೊನೆಗೂ ಸಿಕ್ತು ಶಿಕ್ಷೆ

27/09/2023

ತನ್ನನ್ನು ಕಾಲೇಜಿನಿಂದ ಹೊರಗೆ ಹಾಕಿರುವ ವಿಚಾರ ಅಮ್ಮನಿಗೆ ತಿಳಿದಿದೆ ಎಂದು ತಾಯಿಯನ್ನೇ ಕೊಂದಿದ್ದ ಪ್ರಕರಣದಲ್ಲಿ ಮಗಳ ವಿರುದ್ಧ ಅಪರಾಧ ಕೋರ್ಟ್ ನಲ್ಲಿ ಸಾಬೀತಾಗಿದೆ.

ಓಹಿಯೋದ 23 ವರ್ಷದ ಯುವತಿ ತನ್ನ ತಾಯಿಯ ತಲೆಗೆ ಕಬ್ಬಿಣದ ಬಾಣಲೆಯಿಂದ ಹೊಡೆದು ಕುತ್ತಿಗೆಗೆ ಸುಮಾರು 30 ಬಾರಿ ಇರಿದು ಕೊಂದಿದ್ದಳು.

ಈ ಪ್ರಕರಣದಲ್ಲಿ  ಮೃತ ಮಹಿಳೆಯ ಮಗಳಾದ ಸಿಡ್ನಿ ಪೊವೆಲ್ ತಪ್ಪಿತಸ್ಥಳೆಂದು ಕಂಡುಬಂದಿದೆ ಎಂದು ಪ್ರಾಸಿಕ್ಯೂಟರ್‌ ಕಚೇರಿ ತಿಳಿಸಿದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

‘2020 ರ ಮಾರ್ಚ್‌ ತಿಂಗಳಲ್ಲಿ ಸಿಡ್ನಿ ಪೊವೆಲ್ ತನ್ನ ತಾಯಿ ಬ್ರೆಂಡಾ ಪೊವೆಲ್ ಅವರ ತಲೆಗೆ ಕಬ್ಬಿಣದ ಬಾಣಲೆಯಿಂದ ಹೊಡೆದಿದ್ದಾಳೆ. ಆ ಬಳಿಕ ಆಕೆಯ ಕುತ್ತಿಗೆಗೆ ಸುಮಾರು 30 ಬಾರಿ ಇರಿದಿದ್ದಾಳೆ’ ಎಂದು ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಮಾಜಿ ವಿದ್ಯಾರ್ಥಿನಿಯಾಗಿದ್ದ ಪೊವೆಲ್ ಸ್ಕಿಜೋಫ್ರೇನಿಯಾ ಎಂಬ ರೋಗದಿಂದ ಬಳಲುತ್ತಿದ್ದಾಳೆ ಎಂದು ಆಕೆಯ ಪರ ವಕೀಲರು ವಾದಿಸಿದ್ದರು. ಅಲ್ಲದೇ ಆಕೆ ತನ್ನ ತಾಯಿಯನ್ನು ತನ್ನ ಬೆಸ್ಟ್‌ ಫ್ರೆಂಡ್‌ ಎಂದು ನೋಡುತ್ತಿದ್ದಳು. ತಾಯಿಯನ್ನು ಕೊಲ್ಲುವಾಗ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು. ಹೀಗಾಗಿ, ಆಕೆಗೆ ಶಿಕ್ಷೆಯಿಂದ ವಿನಾಯಿತಿ ಒದಗಿಸುವಂತೆ ವಕೀಲರು ವಾದಿಸಿದ್ದರು.

ಅದಾಗ್ಯೂ, ಈ ವಾದ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಪೊವೆಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎಂಬ ವಾದವು ಕಾನೂನು ವ್ಯಾಖ್ಯಾನವನ್ನು ಪೂರೈಸಲಿಲ್ಲ ಎಂದು ನ್ಯಾಯಾಲಯ ಹೇಳಿ ಆಕೆ ತಪ್ಪಿತಸ್ಥೆ ಎಂದು ಘೋಷಿಸಿದೆ. ಪೊವೆಲ್ ಗೆ ಸೆಪ್ಟೆಂಬರ್ 28 ರಂದು ಶಿಕ್ಷೆಯನ್ನು ಘೋಷಿಸಲಾಗುತ್ತದೆ.

ಇತ್ತೀಚಿನ ಸುದ್ದಿ