ಜಿಮ್ ನಲ್ಲಿ 6 ವರ್ಷದ ಮಗನ ಮೇಲೆ ತಂದೆಯಿಂದ ಕ್ರೌರ್ಯ:  ಟಾರ್ಚರ್ ಸಹಿಸಲಾಗದೇ ಪ್ರಾಣಬಿಟ್ಟ ಬಾಲಕ - Mahanayaka

ಜಿಮ್ ನಲ್ಲಿ 6 ವರ್ಷದ ಮಗನ ಮೇಲೆ ತಂದೆಯಿಂದ ಕ್ರೌರ್ಯ:  ಟಾರ್ಚರ್ ಸಹಿಸಲಾಗದೇ ಪ್ರಾಣಬಿಟ್ಟ ಬಾಲಕ

new jersey crime news
06/05/2024

ನ್ಯೂಜೆರ್ಸಿ:   ತೂಕ ಇಳಿಸುವಂತೆ  ತಂದೆಯೋರ್ವ ಜಿಮ್ ನಲ್ಲಿ ಮಗನಿಗೆ ಚಿತ್ರಹಿಂಸೆ ನೀಡಿದ ಪರಿಣಾಮ 6 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನ್ಯೂಜೆರ್ಸಿ(New Jersey)ಯಲ್ಲಿ ನಡೆದಿದೆ.

ಜಿಮ್‌ ನಲ್ಲಿರುವ ಟ್ರೆಡ್‌ಮಿಲ್‌ ನಲ್ಲಿ (Tread Mill) ವೇಗವಾಗಿ ಓಡುವಂತೆ ಮಗನಿಗೆ ಪದೇ ಪದೇ ಒತ್ತಡ ಹಾಕಿ ತಂದೆ ಕ್ರೌರ್ಯ ಮೆರೆದಿದ್ದು, ಪುಟ್ಟ ಬಾಲಕ ಓಡಲು ಸಾಧ್ಯವಾಗದೇ ಎದ್ದು ಬಿದ್ದು ಓಡುತ್ತಿದ್ದರೂ ಬಿಡದ ತಂದೆ ಮತ್ತೆ ಆತನನ್ನು ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ರಿಸ್ಟೋಫರ್ ಗ್ರೆಗರ್ ಎಂಬಾತ ತನ್ನ ಪುತ್ರನಿಗೆ ಜಿಮ್ ನಲ್ಲಿ ಚಿತ್ರ ಹಿಂಸೆ ಕೊಟ್ಟು ಕೊಂದ ಪಾಪಿಯಾಗಿದ್ದು, ನೀನು ತುಂಬಾ ದಪ್ಪ ಇದ್ದಿಯಾ ಅಂತ ಪುತ್ರನನ್ನು ಪ್ರತೀ ದಿನ  ಈತ ನಿಂದಿಸುತ್ತಿದ್ದ ಎಂದು ಮೃತ ಬಾಲಕನ ತಾಯಿ ಕೋರ್ಟ್ ನಲ್ಲಿ ಹೇಳಿಕೆ ನೀಡಿ ಕಣ್ಣೀರು ಹಾಕಿದ್ದಾರೆ.

2021ರ ಮಾರ್ಚ್ 20 ರಂದು ಅಟ್ಲಾಂಟಿಕ್ ಹೈಟ್ಸ್ ಕ್ಲಬ್‌ ಹೌಸ್ ಫಿಟ್‌ ನೆಸ್ ಸೆಂಟರ್‌ ನಲ್ಲಿ ಈ ಘಟನೆ ನಡೆದಿತ್ತು. ಇದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಂದೆ ಕ್ರಿಸ್ಟೋಫರ್,  ಮಗನನ್ನು ವೇಗವಾಗಿ ಓಡುವಂತೆ ಬೆದರಿಸಿ, ಟ್ರೆಡ್‌ ಮಿಲ್‌ ನಲ್ಲಿ ವೇಗವನ್ನು ಹೆಚ್ಚಿಸಿದ್ದಾನೆ.  ವೇಗ ಅತಿಯಾದಾಗ ಬಾಲಕ ಬಿದ್ದರೂ ಬಿಡದ ಪಾಪಿ ತಂದೆ ಮತ್ತೆ ಮತ್ತೆ ಓಡಿಸುತ್ತಿದ್ದ.  ಕೊನೆಗೆ ಓಡಲು ಸಾಧ್ಯವಾಗದೇ ಅಸ್ವಸ್ಥಗೊಂಡು ಬಾಲಕ ಕೆಳಗೆ ಬಿದ್ದಿದ್ದಾನೆ ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಾಲಕ ಅಸ್ವಸ್ಥನಾದ ನಂತರ ವೈದ್ಯರ ಬಳಿಕೆ ಕರೆದೊಯ್ಯಲಾಗಿದ್ದು, ಈ ವೇಳೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.  ಬಾಲಕನ ಮರಣೋತ್ತರ ಪರೀಕ್ಷೆಯ ವೇಳೆ ಬಾಲಕನ ವಿವಿಧ ಅಂಗಾಂಗಳಿಗೆ ಗಂಭೀರವಾದ ಗಾಯಗಳು ಏರ್ಪಟ್ಟಿದ್ದವು, ಉರಿಯೂತ, ಹೃದಯ ಹಾಗೂ ಲಿವರ್ ಗೆ ಗಂಭೀರವಾದ ಗಾಯಗಳಾದ ಪರಿಣಾಮ  ಬಾಲಕ ಸಾವನ್ನಪ್ಪಿದ್ದಾನೆ. ಸದ್ಯ ಮಗನ ಮೇಲೆ ಕ್ರೌರ್ಯ ಮೆರೆದ ತಂದೆ ಕ್ರಿಸ್ಟೋಫರ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಸಾಕಷ್ಟು ಪೋಷಕರು ತಮ್ಮ ಮಕ್ಕಳ ಮೇಲೆ ಬಲ ಪ್ರಯೋಗ ಮಾಡಿ ಅವರನ್ನು ಬದಲಿಸಬೇಕು ಎಂದು ಭಾವಿಸುತ್ತಾರೆ. ಕ್ರಿಸ್ಟೋಫರ್ ಅಂತಹವರಲ್ಲಿ ಒಬ್ಬನಾಗಿದ್ದಾನೆ. ಮಕ್ಕಳನ್ನು ಬದಲಿಸಬೇಕಾದರೆ, ಮಗುವಿನಂತಹ ಮನಸ್ಸು ಪೋಷಕರಲ್ಲೂ ಇರಬೇಕಾಗುತ್ತದೆ. ಏನೇ ಆಗಲಿ, ಕ್ರಿಸ್ಟೋಫರ್ ನಂತಹ ತಂದೆಯನ್ನು ಪಡೆದ ಆ ಬಾಲಕ ನಿಜವಾಗಿಯೂ ದುರಾದೃಷ್ಟವಂತ ಎಂದೇ ಹೇಳಬಹುದು…


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ