ಬಿಜೆಪಿ ಸಂಸದನ ಮಗನ ಮೇಲೆ ಗುಂಡಿನ ದಾಳಿ - Mahanayaka
11:16 AM Saturday 15 - August 2026

ಬಿಜೆಪಿ ಸಂಸದನ ಮಗನ ಮೇಲೆ ಗುಂಡಿನ ದಾಳಿ

03/03/2021

ಲಕ್ನೋ: ಬಿಜೆಪಿ ಸಂಸದ ಕೌಶಲ್ ಕಿಶೋರ್ ಪುತ್ರ ನ ಮೇಲೆ ಬುಧವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಆತನ ಸಹೋದರ ಮಾವನೇ ಈ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಖನೌನ ಮಡಿಯಾನ್ ‍ಪ್ರದೇಶದಲ್ಲಿ ಮೋಹನ್‌ ಲಾಲ್‌ಗಂಜ್‌ ಕ್ಷೇತ್ರದ ಬಿಜೆಪಿ ಸಂಸದನ ‍ಮಗ ಆಯುಷ್‌(30) ಮೇಲೆ ಸ್ವಂತ ಮಾವನೇ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಮುಂಜಾನೆ 2 ಗಂಟೆಯ ವೇಳೆ ದಾಳಿ ನಡೆಸಿದ್ದಾನೆ.

ಗುಂಡಿನ ದಾಳಿಯ ಪರಿಣಾಮ ಆಯುಷ್ ಗಾಯಗೊಂಡಿದ್ದು, ರಾತ್ರಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಈ ದಾಳಿಯನ್ನು ಆಯುಷ್‌ ಅವರ ಸೋದರ ಮಾವ ನಡೆಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ದಾಳಿಯ ಬಗ್ಗೆ ಯಾರೊಬ್ಬರೂ ದೂರು ದಾಖಲಿಸಿಲ್ಲ. ಆದರೆ ನಮಗೆ ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ ಸಿಕ್ಕಿದೆ ಎಂದು ಲಖನೌನ ಪೊಲೀಸ್‌ ಆಯುಕ್ತ ಡಿ.ಕೆ ಠಾಕೂರ್‌ ಅವರು ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ