ಅಫಿಡವಿಟ್ ಘೋಷಣೆ: ಅಮಿತ್ ಶಾ ಬಳಿ ಇದ್ಯಂತೆ 36 ಕೋಟಿ ಆಸ್ತಿ; ಗೃಹಸಚಿವ್ರ ಬಳಿ ಇಲ್ವಂತೆ ಸ್ವಂತ ಕಾರು - Mahanayaka

ಅಫಿಡವಿಟ್ ಘೋಷಣೆ: ಅಮಿತ್ ಶಾ ಬಳಿ ಇದ್ಯಂತೆ 36 ಕೋಟಿ ಆಸ್ತಿ; ಗೃಹಸಚಿವ್ರ ಬಳಿ ಇಲ್ವಂತೆ ಸ್ವಂತ ಕಾರು

20/04/2024

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನ ಗಾಂಧಿನಗರದಲ್ಲಿ ಶುಕ್ರವಾರ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ 36 ಕೋಟಿ ರೂ.ಗಳ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ. ಅಲ್ಲದೇ ತನ್ನ ಬಳಿ ಸ್ವಂತ ಕಾರು ಹೊಂದಿಲ್ಲ ಎಂದು ಘೋಷಿಸಿದ್ದಾರೆ.

ಇವರು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಹಿರಿಯ ಬಿಜೆಪಿ ನಾಯಕ ಇನ್ನೂ ಸ್ವಂತ ಕಾರು ಹೊಂದಿಲ್ಲ. ಅಮಿತ್ ಶಾ ಅವರು 20 ಕೋಟಿ ಮೌಲ್ಯದ ಚರಾಸ್ತಿ ಮತ್ತು 16 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ. ಅವರು 72 ಲಕ್ಷ ಮೌಲ್ಯದ ಆಭರಣಗಳನ್ನು ಘೋಷಿಸಿದರೆ, ಅವರ ಪತ್ನಿ 1.10 ಕೋಟಿ ರೂ ಮೌಲ್ಯದ ಆಭರಣಗಳನ್ನು ಘೋಷಿಸಿದ್ದಾರೆ.

ಅಮಿತ್ ಶಾ ಅವರ ಪತ್ನಿ ಸೋನಾಲ್ ಶಾ ಅವರು 22.46 ಕೋಟಿ ಮೌಲ್ಯದ ಚರಾಸ್ತಿ ಮತ್ತು 9 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 31 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.


Provided by

ಗೃಹ ಸಚಿವರು ತಮ್ಮ ಹೆಸರಿನಲ್ಲಿ 15.77 ಲಕ್ಷ ರೂ.ಗಳ ಸಾಲವನ್ನು ಹೊಂದಿದ್ದರೆ, ಅವರ ಪತ್ನಿ 26.32 ಲಕ್ಷ ರೂ.ಗಳ ಸಾಲವನ್ನು ಹೊಂದಿದ್ದಾರೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.

2022-23ರಲ್ಲಿ ಅಮಿತ್ ಶಾ ಅವರ ವಾರ್ಷಿಕ ಆದಾಯ 75.09 ಲಕ್ಷ ರೂ., ಅವರ ಪತ್ನಿಯ ವಾರ್ಷಿಕ ಆದಾಯ 39.54 ಲಕ್ಷ ರೂಪಾಯಿ ಆಗಿದೆ.
ಇವರ ಆದಾಯದ ಮೂಲವು ಸಂಸದರ ಸಂಬಳ, ಮನೆ ಮತ್ತು ಭೂ ಬಾಡಿಗೆ, ಕೃಷಿ ಆದಾಯ ಮತ್ತು ಷೇರುಗಳು ಮತ್ತು ಲಾಭಾಂಶಗಳಿಂದ ಬರುವ ಆದಾಯವನ್ನು ಒಳಗೊಂಡಿದೆ.

ಅಫಿಡವಿಟ್‌ನ ವೃತ್ತಿ ವಿಭಾಗದಲ್ಲಿ, ಅಮಿತ್ ಶಾ ಅವರು ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿದ್ದಾರೆ. ಅವರ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಅವರು ಘೋಷಿಸಿದ್ದಾರೆ. ಬಿಜೆಪಿ ನಾಯಕ ಗಾಂಧಿನಗರದಲ್ಲಿ ಶಾಸಕರಾಗಿ ಮತ್ತು ನಂತರ 30 ವರ್ಷಗಳ ಕಾಲ ಸಂಸದರಾಗಿ ಪ್ರತಿನಿಧಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ