ಬುಡಕಟ್ಟು ಜನಾಂಗದ ಕಾರ್ಯಕರ್ತನ ಮನೆಯಲ್ಲಿ ಅಮಿತ್ ಶಾ ಭೋಜನ - Mahanayaka
9:36 PM Wednesday 11 - September 2024

ಬುಡಕಟ್ಟು ಜನಾಂಗದ ಕಾರ್ಯಕರ್ತನ ಮನೆಯಲ್ಲಿ ಅಮಿತ್ ಶಾ ಭೋಜನ

06/11/2020

ಬಂಕುರಾ: ಗೃಹಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಚತುರ್ದಿಹಿ ಗ್ರಾಮದ ಬುಡಕಟ್ಟು ಜನಾಂಗದ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಊಟ ಮಾಡಿ ಸುದ್ದಿಯಾಗಿದ್ದಾರೆ. ಪಕ್ಷದ  ಕಾರ್ಯಕರ್ತ ಬಿಭೀಷಣ್ ಹನ್ಸ್​ ಡಾ ಮನೆಯಲ್ಲಿ ಅವರು ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ.

 ಅಮಿತ್ ಶಾ ಅವರಿಗೆ ಬಂಗಾಳಿ ಖಾದ್ಯಗಳಾದ ಅನ್ನ, ರೊಟ್ಟಿ, ದಾಲ್​, ಪೋತೋಲ್​ ಭಾಜಾ, ಶುಕ್ತೋ, , ಆಲೂ ಪೋಸ್ಟೊ ಹಾಗೂ ಪಾಪಡ್ ಮೊದಲಾದ ಖಾದ್ಯಗಳನ್ನು ಬಿಭೀಷಣ್ ಹನ್ಸ್​ ಡಾ ವ್ಯವಸ್ಥೆ ಮಾಡಿಸಿದರು.

ಅಮಿತ್ ಶಾ ಅವರ ಜೊತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್​ ರಾಯ್​ ಮತ್ತು ಪಕ್ಷದ ರಾಜ್ಯದ ಮುಖ್ಯಸ್ಥ ದಿಲೀಪ್​ ಘೋಷ್ ಮೊದಲಾದವರು ಆಗಮಿಸಿದ್ದರು. ಇಷ್ಟೊಂದು ಅದ್ದೂರಿಯಾದ ಊಟವನ್ನು ಎಲ್ಲಿ ತಯಾರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.


Provided by

ಇತ್ತೀಚಿನ ಸುದ್ದಿ