ತೀವ್ರ ಕುತೂಹಲ ಕೆರಳಿಸಿದೆ, ಅಮಿತ್ ಶಾ ತಮಿಳುನಾಡು ಭೇಟಿ - Mahanayaka
3:47 PM Thursday 12 - September 2024

ತೀವ್ರ ಕುತೂಹಲ ಕೆರಳಿಸಿದೆ, ಅಮಿತ್ ಶಾ ತಮಿಳುನಾಡು ಭೇಟಿ

21/11/2020

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಮಿಳುನಾಡಿಗೆ ಭೇಟಿ ನೀಡಲಿದ್ದು.ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಪುತ್ರ ಎಂ.ಕೆ. ಅಳಗಿರಿ ಅವರನ್ನು ಅಮಿತ್ ಶಾ ಭೇಟಿ ಮಾಡಲಿದ್ದಾರೆ.  ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿರುವುದರಿಂದ ಅಳಗಿರಿಯವರ ಹೊಸ ಪಕ್ಷದ ಆಶ್ರಯದಲ್ಲಿ ಬಿಜೆಪಿ ಬೇರು ಬಿಡುವಂತೆ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಅಮಿತ್ ಶಾ ಇದ್ದಾರೆ ಎಂದು ಹೇಳಲಾಗುತ್ತಿದೆ.

ಬಿಹಾರದಲ್ಲಿ ಈ ಪ್ರಯತ್ನದಲ್ಲಿ ಅಮಿತ್ ಶಾ ಹಾಗೂ ಬಿಜೆಪಿ ಟೀಂ ಯಶಸ್ವಿಯಾಗಿದೆ. ಸದ್ಯ ನಿತೀಶ್ ಕುಮಾರ್ ಅವರ ಪಕ್ಷವು ಬಿಜೆಪಿಯಿಲ್ಲದೇ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ತಳ್ಳಲ್ಪಟ್ಟಿದೆ. ಇದೇ ಲೆಕ್ಕಾಚಾರದಲ್ಲಿ ಬಿಜೆಪಿ ತಮಿಳುನಾಡಿಗೂ ಹೊರಟಿದೆ. ಆದರೆ ತಮಿಳುನಾಡಿನಲ್ಲಿ ಈ ತಂತ್ರ ಫಲಿಸಬಹುದೇ ಎನ್ನುವುದನ್ನು ಕಾದುನೋಡಬೇಕಿದೆ.


Provided by

ಇತ್ತೀಚಿನ ಸುದ್ದಿ