ಮತಾಂತರ ನಿಷೇಧ ಕಾಯ್ದೆ ಅನುಮಾನ-ಆತಂಕದಿಂದ ಕೂಡಿದೆ | ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿಕೆ - Mahanayaka

ಮತಾಂತರ ನಿಷೇಧ ಕಾಯ್ದೆ ಅನುಮಾನ-ಆತಂಕದಿಂದ ಕೂಡಿದೆ | ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿಕೆ

30/11/2020

ಲಕ್ನೋ: ತರಾತುರಿಯಲ್ಲಿ ಉತ್ತರಪ್ರದೇಶ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇದು ಅನುಮಾನ ಹಾಗೂ ಆತಂಕದಿಂದ ಕೂಡಿದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.


Provided by

ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ಮೊದಲ ಪ್ರಕರಣ ದಾಖಲಾಗುತ್ತಿದ್ದಂತೆಯೇ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಈ ಕಾಯ್ದೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಕಾಯ್ದೆಯನ್ನು ಮರುಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದಲ್ಲಿ ವಂಚನೆ ಮತ್ತು ಒತ್ತಾಯಪೂರ್ವಕ ಮತಾಂತರಕ್ಕೆ ಯಾವುದೇ ಮಾನ್ಯತೆಯಿಲ್ಲ. ಈಗಾಗಲೇ ಇದಕ್ಕಾಗಿ ಹಲವಾರು ಕಾನೂನುಗಳಿವೆ. ಹಾಗಾಗಿ ಉತ್ತರ ಪ್ರದೇಶ ಸರ್ಕಾರವು ಈ ಹೊಸ ಕಾಯ್ದೆ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಬೆಹೆನ್ ಜೀ ಒತ್ತಾಯಿಸಿದ್ದಾರೆ.


Provided by

 

ಇತ್ತೀಚಿನ ಸುದ್ದಿ