ಕೇವಲ  ಬೆಂಕಿ ಪೊಟ್ಟಣಕ್ಕಾಗಿ ದಲಿತ ವ್ಯಕ್ತಿಯನ್ನು ಥಳಿಸಿ ಭೀಕರ ಹತ್ಯೆ - Mahanayaka

ಕೇವಲ  ಬೆಂಕಿ ಪೊಟ್ಟಣಕ್ಕಾಗಿ ದಲಿತ ವ್ಯಕ್ತಿಯನ್ನು ಥಳಿಸಿ ಭೀಕರ ಹತ್ಯೆ

30/11/2020

ಭೋಪಾಲ್: ಬೆಂಕಿ ಪೊಟ್ಟಣ ಕೊಡಲಿಲ್ಲ ಎಂದು ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಘಟನೆ ಗುಣ ಜಿಲ್ಲೆಯ ಕರೋಡ್ ನಲ್ಲಿ ನಡೆದಿದೆ. ಆರೋಪಿಯು ಸಿಗರೇಟ್ ಸೇದಲು ಬೆಂಕಿ ಪೊಟ್ಟಣ ಕೇಳಿದ್ದು, ಈ ವೇಳೆ ಕೊಡಲು ನಿರಾಕರಿಸಿದ 50 ವರ್ಷದ ದಲಿತ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.


Provided by

ಲಾಲ್‌ಜಿರಾಂ ಅಹಿರ್‌ವಾರ್ ಹತ್ಯೆಗೀಡಾದವರಾಗಿದ್ದಾರೆ. ಉವರು ತಮ್ಮ ಹೊಲದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಂಕೇಶ್ ಯಾದವ್ ಹಾಗೂ ಯಶ್ ಯಾದವ್ ಎಂಬ ದುಷ್ಕರ್ಮಿಗಳು ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದಾನೆ. ಈ ವೇಳೆ ಲಾಲ್‌ಜಿರಾಂ ಅಹಿರ್‌ವಾರ್ ಬೆಂಕಿ ಪೊಟ್ಟಣ ನೀಡಲು ನಿರಾಕರಿಸಿದ್ದಾರೆ.


Provided by

ಈ ವೇಳೆ ಈ ಇಬ್ಬರು ಸೇರಿ ಲಾಲ್‌ ಜಿರಾಂ ಅಹಿರ್‌ವಾರ್ ಗೆ ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ್ದಾರೆ.  ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಲಾಲ್‌ ಜಿರಾಂ ಅಹಿರ್‌ ವಾರ್ ಅವರನ್ನು ಗುಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರ ವಿರುದ್ಧವೂ ಹತ್ಯೆ ಪ್ರಕರಣ ದಾಖಲಿಸಲಾಗಿದೆ.  ಇನ್ನು ಸಂತ್ರಸ್ತರ ಕುಟುಂಬಕ್ಕೆ 8.25 ಲಕ್ಷ ರೂಪಾಯಿ ಹಣಕಾಸು ನೆರವು ಘೋಷಿಸಲಾಗಿದೆ.

ಇತ್ತೀಚಿನ ಸುದ್ದಿ