ಕೇಂದ್ರ ಸರ್ಕಾರಕ್ಕೆ ‘ಪಂಚ್’ ನೀಡಿದ ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್ - Mahanayaka
9:26 AM Sunday 15 - September 2024

ಕೇಂದ್ರ ಸರ್ಕಾರಕ್ಕೆ ‘ಪಂಚ್’ ನೀಡಿದ ಬಾಕ್ಸಿಂಗ್ ಚಾಂಪಿಯನ್ ವಿಜೇಂದರ್ ಸಿಂಗ್

06/12/2020

ಪಂಜಾಬ್: ಕೇಂದ್ರ ಸರ್ಕಾರದ ರೈತ ವಿರೋಧಿ ನೂತನ ಕೃಷಿ ಕಾನೂನನ್ನು ರದ್ದುಗೊಳಿಸದಿದ್ದರೆ, ತನ್ನ ಖೇಲ್ ರತ್ನ ಪ್ರಶಸ್ತಿಯನ್ನು ವಾಪಸ್ ನೀಡುವುದಾಗಿ ಬಾಕ್ಸಿಂಗ್ ಚಾಂಪಿಯನ್ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ವಿಜೇಂದರ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ತಂದಿರುವ ನೂತನ ಕರಾಳ ಕೃಷಿ ಕಾನೂನಿನ ವಿರುದ್ಧದ ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ವಿಜೆಂಡರ್ ಸಿಂಗ್,  ನಾನು ಪಂಜಾಬ್ ನಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಇಲ್ಲಿಯ ರೊಟ್ಟಿ ತಿಂದಿದ್ದೇನೆ. ಇಂದು ಅವರು ಕಷ್ಟದಲ್ಲಿದ್ದಾರೆ ಹಾಗಾಗಿ ನಾನು ಅವರ ಸಹೋದರನಾಗಿ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.


Provided by

ಹರ್ಯಾಣದ ವಿಜೇಂದ್ರ ಸಿಂಗ್ ಅವರು ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾದವರು. ದೇಶ –ವಿದೇಶಗಳ ಬಾಕ್ಸರ್ ಗಳನ್ನು ಮಣ್ಣು ಮುಕ್ಕಿಸಿ ದೇಶಕ್ಕೆ ಕೀರ್ತಿ ತಂದಿದ್ದರು. ಇದೀಗ ರೈತರ ಪರವಾಗಿ ನಿಂತು ಅವರು ಕೇಂದ್ರ ಸರ್ಕಾರಕ್ಕೆ ಪಂಚ್ ನೀಡಿದ್ದಾರೆ.

ಇತ್ತೀಚಿನ ಸುದ್ದಿ