ಗೋಹತ್ಯೆ  ಮಸೂದೆ ಮಂಡನೆ ವಿಚಾರ | ಕಲಾಪದಲ್ಲಿ ಭಾಗವಹಿಸಲು ಸಿದ್ದರಾಮಯ್ಯಗೆ ಆಹ್ವಾನ - Mahanayaka

ಗೋಹತ್ಯೆ  ಮಸೂದೆ ಮಂಡನೆ ವಿಚಾರ | ಕಲಾಪದಲ್ಲಿ ಭಾಗವಹಿಸಲು ಸಿದ್ದರಾಮಯ್ಯಗೆ ಆಹ್ವಾನ

10/12/2020

ಬೆಂಗಳೂರು:  ಚರ್ಚೆಗೆ ಅವಕಾಶ ನೀಡದೇ ಗೋಹತ್ಯೆ ಮಸೂದೆ ಅಂಗೀಕಾರ ಮಾಡಿದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಇಂದು ಕಲಾಪವನ್ನು ಬಹಿಷ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಸಂಧಾನಕ್ಕೆ ಬರುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿ ಆಹ್ವಾನಿಸಿದೆ.

 ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು, ಕಲಾಪಕ್ಕೆ ಭಾಗವಹಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ.  ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿರುವ ಕಚೇರಿಗೆ ಆಗಮಿಸಿ ಸಿದ್ದರಾಮಯ್ಯ ನವರಿಗೆ ಆಹ್ವಾನ ನೀಡಲಾಗಿದೆ.

 ಸಿಎಲ್ ಪಿ ಸಭೆಯ ಬಳಿಕ ಸಂಧಾನಕ್ಕೆ ಬರುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು, ಸಲಹಾ ಸಮಿತಿಯಲ್ಲಿ ಹೊಸ ಮಸೂದೆ ಮಂಡನೆ ಮಾಡುವುದಿಲ್ಲ ಎಂದು ಹೇಳಿ ಮಸೂದೆ ಮಂಡನೆ ಮಾಡಿರುವುದು ತಪ್ಪು. ಮಸೂದೆ ಮಂಡನೆಯ ವೇಳೇ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಇತ್ತೀಚಿನ ಸುದ್ದಿ