ಕ್ರಿಕೆಟ್ ಪಂದ್ಯಾಟದ ವೇಳೆ ಶಾರೂಖ್ ಖಾನ್ ಸಿಗರೇಟ್ ಸೇದಿದ್ರಾ? ವಿಡಿಯೋ ವೈರಲ್

ಈಡನ್ ಗಾರ್ಡನ್ಸ್ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಾಟದ ವೇಳೆ ಕೆಕೆಆರ್ ಟೀಮ್ ಮಾಲಿಕ ಶಾರೂಖ್ ಖಾನ್ ಗ್ಯಾಲರಿಯಲ್ಲಿ ಕುಳಿತು ಸಿಗರೇಟ್ ಸೇರಿದ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಈಡನ್ ಗಾರ್ಡನ್ಸ್ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 4 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪಂದ್ಯಾಟದ ವೇಳೆ ಒತ್ತಡಕ್ಕೆ ಬಿದ್ದ ಶಾರೂಖ್ ಖಾನ್ ಗ್ಯಾಲರಿಯಲ್ಲೇ ಸಿಗರೇಟ್ ಸೇರಿದ್ದಾರೆ ಎಂದು ಆರೋಪಿಸಲಾಗಿದೆ.
ವೈರಲ್ ಆದ ವಿಡಿಯೋದಲ್ಲಿ ಶಾರೂಖ್ ಖಾನ್ ಸಿಗರೇಟ್ ಸೇದುವಂತೆ ಕಂಡು ಬಂದಿದೆಯಾದರೂ, ಹೊಗೆ ಕಾಣಿಸಿಕೊಂಡಿಲ್ಲ, ಹೀಗಾಗಿ ಅವರು ನಿಜವಾಗಿಯೂ ಸಿಗರೇಟ್ ಸೇದಿದರೆ? ಎನ್ನುವ ಪ್ರಶ್ನೆಯೂ ಎದ್ದಿದೆ.
#ShahRukhKhan is smoking in the stadium and Hakla is an inspiration (Irony) 🤮 pic.twitter.com/MqukSRF9AY
— Prince (@purohit_pr78001) March 23, 2024
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth