ಹೊಲಸು ನಾಲಿಗೆ: ಮುನಿರತ್ನಗೆ ಮತ್ತೊಂದು ಶಾಕ್!
ಬೆಂಗಳೂರು: ಜಾತಿ ನಿಂದನೆ, ಗುತ್ತಿಗೆದಾರನಿಗೆ ಜೀವ ಬೆದರಿಕೆ ಕೇಸ್ ಗೆ ಸಂಬಂಧಿಸಿದಂತೆ ಶಾಸಕ ಮುನಿರತ್ನನನ್ನು ಪೊಲೀಸರು ಬಂಧಿಸಿದ್ದಾರೆ. ಮುನಿರತ್ನಗೆ ಬಿಜೆಪಿಯೂ ಶಾಕ್ ನೀಡಿದೆ.
ಮುನಿರತ್ನ ಬಂಧನದ ಬೆನ್ನಲ್ಲೇ ಬಿಜೆಪಿ ನೋಟಿಸ್ ನೀಡಿದ್ದು, ದೃಶ್ಯ ಮಾಧ್ಯಮದಲ್ಲಿ 13.09.2024ರಿಂದ ಪ್ರಸಾರಗೊಳ್ಳುತ್ತಿರುವಂತೆ ನೀವು ಅವಹೇಳನಾಕಾರಿಯಾಗಿ ಮಾತನಾಡಿರುವಂತೆ ಪ್ರಸರಣಗೊಳ್ಳುತ್ತಿದೆ. ಇದಕ್ಕೆ ಕುರಿತಂತೆ ತಮ್ಮ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ಧಕ್ಕೆಯನ್ನುಂಟು ಮಾಡಿದೆ. ಆದುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ 5 ದಿನಗಳ ಒಳಗಾಗಿ ಬಿಜೆಪಿ ಶಿಸ್ತು ಸಮಿತಿ ಮುಂದೆ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ನೋಟಿಸ್ ನೀಡಿದ್ದಾರೆ.
ಇಷ್ಟೊಂದು ಹೊಲಸು ನಾಲಿಗೆಯೇ?
ಮುನಿರತ್ನ ಅವರ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆಡಿಯೋ ಕೇಳಿದವರು ಈ ಮನುಷ್ಯನ ನಾಲಿಗೆ ಇಷ್ಟೊಂದು ಹೊಲಸಾ ಎಂದು ಪ್ರಶ್ನಿಸ್ತಾ ಇದ್ದಾರೆ. ಹೊರಗಡೆ ಸಮಾನತೆಯ ಸೋಗು ಹಾಕುವ ವ್ಯಕ್ತಿಗಳ ಕೊಳಕು ಕೆಲವೊಮ್ಮೆ ಹೀಗೆ ಹೊರ ಬರುತ್ತದೆ. ಹಾಗೆಯೂ ಪರಿಶಿಷ್ಟ ಜಾತಿಯವರ ಉಪ ಜಾತಿಗಳನ್ನ ಅವಮಾನಿಸುವ ಧೈರ್ಯವಿದ್ದರೆ, ಹೊರಗೆ ಬಂದು ಪಬ್ಲಿಕ್ ನಲ್ಲಿ ಮಾತನಾಡಿ, ಅದು ಬಿಟ್ಟು ನಾಲ್ಕು ಗೋಡೆಗಳ ಮಧ್ಯೆ ಅಮಾಯಕರ ಮುಂದೆ ಹೆದರಿಸುವುದು ಬೆದರಿಸುವುದಲ್ಲ, ಎನ್ನುವ ಆಕ್ರೋಶಗಳನ್ನು ಜನ ವ್ಯಕ್ತಪಡಿಸುತ್ತಿದ್ದಾರೆ.
ಮುನಿರತ್ನ ಪರ ಪ್ರಹ್ಲಾದ್ ಜೋಶಿ ಬ್ಯಾಟಿಂಗ್!
ಮುನಿರತ್ನ ಬಂಧನದ ವಿಚಾರದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುನಿರತ್ನ ಬಂಧನವನ್ನ ಸರ್ಕಾರದ ತರಾತುರಿ ನಿರ್ಧಾರ ಅಂತ ಹೇಳಿದ್ದಾರೆ. ಅವರ ಧ್ವನಿ ಹೌದೋ ಅಲ್ಲವೋ ಅಂತ ಪರಿಶೀಲನೆ ಮಾಡಬೇಕಿತ್ತು. ಅದಕ್ಕೂ ಮೊದಲೇ ಬಂಧಿಸಲಾಗಿದೆ ಎಂದು ಮುನಿರತ್ನ ಪರವಹಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: