ಹೊರಗಿನಿಂದ ಬಂದವರಿಗೆ ಕೊಡಬೇಕಾಗಿರುವುದು ಕೊಟ್ಟಿದ್ದೇವೆ | ಸಚಿವ ಸಂಪುಟ ವಿಸ್ತರಣೆಯ ನಡುವೆ ಡಿವಿಎಸ್ ಅಪಸ್ವರ - Mahanayaka
10:08 AM Sunday 15 - September 2024

ಹೊರಗಿನಿಂದ ಬಂದವರಿಗೆ ಕೊಡಬೇಕಾಗಿರುವುದು ಕೊಟ್ಟಿದ್ದೇವೆ | ಸಚಿವ ಸಂಪುಟ ವಿಸ್ತರಣೆಯ ನಡುವೆ ಡಿವಿಎಸ್ ಅಪಸ್ವರ

14/11/2020

ಮೈಸೂರು: ಬಿಜೆಪಿಗೆ ಬಂದ 17 ಜನರು ಪಕ್ಷ ಕಟ್ಟಿದವರಲ್ಲ,  ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದವರಷ್ಟೇ ಎಂದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅಪಸ್ವರ ಎತ್ತಿದ್ದಾರೆ.

ಬಿಜೆಪಿಗೆ ಹೊರಗಿನಿಂದ 17 ಜನರು ಬರುವುದಕ್ಕೂ ಮೊದಲು 105 ಮಂದಿ ಇದ್ದರು ಎನ್ನುವುದನ್ನೂ ನಾವು ನೆನಪಿನಲ್ಲಿಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.

ಸಂಪುಟ ವಿಸ್ತರಣೆಯಲ್ಲಿ ಪಕ್ಷಾಂತರಿಗಳಿಗೆ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಬೇರೆ ಪಕ್ಷದಿಂದ ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ. ಪಕ್ಷದಲ್ಲಿ ಈ ಹಿಂದಿನಿಂದ ಇದ್ದವರಿಗೂ ಕೊಡಬೇಕಲ್ವಾ ಎಂದು ಪ್ರಶ್ನಿಸಿದರು.


Provided by

 ‘ಬಿಜೆಪಿಯಿಂದ 105 ಮಂದಿ ಗೆದ್ದಿದ್ದರು ಎಂಬದನ್ನು ಯಾರೂ ಲೆಕ್ಕ ಮಾಡುವುದಿಲ್ಲ. ಬಳಿಕ ಸೇರಿದ 17 ಮಂದಿಯೇ ಎಲ್ಲರಿಗೂ ದೊಡ್ಡದಾಗಿ ಕಾಣಿಸುತ್ತಾರೆ. ನಮ್ಮ ಎಲ್ಲ ಶಾಸಕರು ಕೂಡ ಮಂತ್ರಿಯಾಗುವ ಅರ್ಹತೆ ಹೊಂದಿದ್ಧಾರೆ. ಸಚಿವರು ಯಾರಾಗ ಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿ