ಕೆಲವರು, ನನ್ನನ್ನು ಟೀಕಿಸಿದರೆ  ನಾಯಕರಾಗಬಹುದು ಎನ್ನುವ ಭ್ರಮೆಯಲ್ಲಿದ್ದಾರೆ | ಎನ್.ಮಹೇಶ್ - Mahanayaka
1:13 AM Thursday 30 - November 2023

ಕೆಲವರು, ನನ್ನನ್ನು ಟೀಕಿಸಿದರೆ  ನಾಯಕರಾಗಬಹುದು ಎನ್ನುವ ಭ್ರಮೆಯಲ್ಲಿದ್ದಾರೆ | ಎನ್.ಮಹೇಶ್

14/11/2020

ಚಾಮರಾಜನಗರ: ನನ್ನನ್ನು ಟೀಕಿಸಿ ನಾಯಕರಾಗಬೇಕು ಎನ್ನುವ ಭ್ರಮೆಯಲ್ಲಿ ಕೆಲವರಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಟೀಕಿಸಿ ಕಾಲ ಕಳೆಯುತ್ತಿದ್ದಾರೆ. ಟೀಕಿಸುವುದನ್ನು ಬಿಟ್ಟು ಅವರು ಪಕ್ಷ ಸಂಘಟನೆ ಮಾಡಲಿ ಎಂದು ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

 ಚಾಮರಾಜನಗರ ಜಿಲ್ಲೆಯ ಹೊಟೇಲೊಂದರಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೆಲವರು ಪಕ್ಷ ಸಂಘಟನೆಯ ಕೆಲಸ ಮಾಡುವುದನ್ನು ಬಿಟ್ಟು ನನ್ನ ವಿರುದ್ಧ ನಿರಂತರ ತೇಜೋವಧೆ ಮಾಡುವುದರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ನನ್ನನ್ನು ಟೀಕಿಸುವ ಮೂಲಕ ನಾಯಕರಾಗಿ ಬೆಳೆಯಬಹುದು ಅಂದುಕೊಂಡಿದ್ದಾರೆ. ಆದರೆ ಇದೆಲ್ಲ ಭ್ರಮೆ ಎಂದು ಅವರು ಹೇಳಿದರು.

ತಳಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡುವುದು ಬಿಟ್ಟು ನನ್ನನ್ನು ಟೀಕಿಸುತ್ತಾ ಕುಳಿತಿದ್ದಾರೆ.  ನಾನು ಬಿಎಸ್ ಪಿಯಿಂದ ಉಚ್ಛಾಟನೆಗೊಂಡಿರುವ ಕಾರಣ ನಾನು ಸ್ವತಂತ್ರವಾಗಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ ಎಂದು ಎನ್.ಮಹೇಶ್ ಹೇಳಿದರು.

ಇತ್ತೀಚಿನ ಸುದ್ದಿ