ಹೃದಯಾಘಾತ ಹೇಗೆ ಸಂಭವಿಸುತ್ತದೆ | ಹೃದಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ - Mahanayaka

ಹೃದಯಾಘಾತ ಹೇಗೆ ಸಂಭವಿಸುತ್ತದೆ | ಹೃದಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ

13/11/2020

ಬಹಳಷ್ಟು ಸಾವುಗಳು ಇಂದು ಹೃದಯಾಘಾತದಿಂದಲೇ ಸಂಭವಿಸುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆಯೂ ಪ್ರಸ್ತುತ ಏರಿಕೆಯಾಗುತ್ತಿದೆ. ಈ ಹೃದಯಾಘಾತವು ಏಕೆ ಸಂಭವಿಸುತ್ತದೆ ಮತ್ತು ಹೇಗೆ ಸಂಭವಿಸುತ್ತದೆ ಎನ್ನುವ ವಿಚಾರಗಳನ್ನು ನಾವಿಂದು ತಿಳಿದುಕೊಳ್ಳೋಣ…


Provided by

ಹೃದಯಾಘಾತ ಯಾರಿಗೆ ಬೇಕಾದರೂ ಆಗಬಹುದು. ಲಕ್ಷಣಗಳಿದ್ದು ಆಗಬಹುದು, ಲಕ್ಷಣಗಳಿಲ್ಲದೆಯೂ ಆಗಬಹುದು. ಹೃದಯಾಘಾತವು ಇದೇ ರೀತಿಯಾಗಿ ಸಂಭವಿಸುತ್ತದೆ ಎಂದೂ ಹೇಳಲು ಸಾಧ್ಯವಿಲ್ಲ. ಆರಂಭದಲ್ಲಿ ಇದು ದೇಹದ ಕಾರ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಆ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ,  ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಹೃದಯಾಘಾತದ ಮೊದಲ ಲಕ್ಷಣಗಳು ಯಾವುದೆಂದರೆ, ಉಸಿರಾಟಕ್ಕೆ ಕಷ್ಟಕರವಾಗುವುದು. ಎದೆಯ ಸುತ್ತ ಮುತ್ತ ಏನೋ ವಿಚಿತ್ರವಾದ ಸಂಕಟವಾದಂತೆ ಅನ್ನಿಸುವುದು. ಅತೀಯಾದ ಹೃದಯ ಬಡಿತ, ವಿಪರೀತವಾಗಿ ಬೆವರುವುದು. ಶಾರೀರಿಕ ದೌರ್ಬಲ್ಯ ಅಥವಾ ಸುಸ್ತು ಮೊದಲಾದವುಗಳು ಕಂಡು ಬರುತ್ತದೆ.

ಹೃದಯಾಘಾತ ಹೇಗೆ ಸಂಭವಿಸುತ್ತದೆ ಎಂದರೆ,  ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ರಕ್ತವು ಹೃದಯದ ಮೂಲಕ ಮೆದುಳು ಮತ್ತು ಶ್ವಾಸಕೋಶಕ್ಕೆ ಹೋಗುವುದನ್ನು ನಿಲ್ಲಿಸುತ್ತದೆ. ಆಗ ದೇಹದ ಪ್ರಮುಖ ಅಂಗಗಳಿಗೆ ರಕ್ತದ ಹರಿವು ನಿಂತು ಹೋಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿಯ ಸಾವು ಸಂಭವಿಸುತ್ತದೆ. ಈ ಸಂದರ್ಭದಲ್ಲಿ ತಕ್ಷಣವೇ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ದೊರೆತಲ್ಲಿ ವ್ಯಕ್ತಿ ಬದುಕುಳಿಯಲು ಸಾಧ್ಯವಾಗುತ್ತದೆ.

ಬದಲಾದ ಜೀವನ ಶೈಲಿಯಲ್ಲಿ ಹೃದಯದ ಆರೋಗ್ಯಕ್ಕೆ ಜನರು ಹೆಚ್ಚಿನ ಗಮನ ನೀಡುವುದು ಉತ್ತಮ. ಯಾರಿಗೆ ಆದರೂ, ನಿಮಗೆ ಹೃದಯ ಸಂಬಂಧಿ ನೋವುಗಳಿವೆ ಎನ್ನುವ ಅನುಮಾನಗಳು ಬಂದಲ್ಲಿ ನೇರವಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ ಮತ್ತು ವೈದ್ಯರ ಸಲಹೆಗಳನ್ನು ಪಾಲಿಸಿ.

ಇತ್ತೀಚಿನ ಸುದ್ದಿ