9 ಕೋಟಿ ರೂ. ಮೌಲ್ಯದ ಕಡಲೆ ಖರೀದಿಸಿ ಹಣಕೊಡದೇ ವ್ಯಾಪಾರಿ ಎಸ್ಕೇಪ್: ರೈತರಿಂದ ಪ್ರತಿಭಟನೆ - Mahanayaka

9 ಕೋಟಿ ರೂ. ಮೌಲ್ಯದ ಕಡಲೆ ಖರೀದಿಸಿ ಹಣಕೊಡದೇ ವ್ಯಾಪಾರಿ ಎಸ್ಕೇಪ್: ರೈತರಿಂದ ಪ್ರತಿಭಟನೆ

maruti gowda
07/04/2024


Provided by

ಗದಗ:  ವ್ಯಕ್ತಿಯೋರ್ವ ರೈತರಿಗೆ ಹೆಚ್ಚು ಬೆಲೆ ನೀಡುವ ಆಮಿಷವೊಡ್ಡಿ ಕೋಟ್ಯಾಂತರ ಮೌಲ್ಯದ ಕಡಲೆ ಖರೀದಿಸಿ, ಹಣ ನೀಡದೇ ಪರಾರಿಯಾಗಿದ್ದು, ಇದೀಗ ಮೋಸ ಹೋಗಿರುವ ರೈತರು, ಸ್ವಸಹಾಯ ಸಂಘದ ಸದಸ್ಯರು ಗದಗ ಜಿಲ್ಲಾಡಳಿತದ ಮುಂದೆ ಧರಣಿ ನಡೆಸುತ್ತಿದ್ದಾರೆ.


Provided by

ಜಿಲ್ಲೆಯ ಕುರ್ತಕೋಟಿ, ಅಂತೂರು ಬೆಂತೂರು, ಬಿಂಕದಕಟ್ಟಿ, ಶ್ಯಾಗೋಟಿ, ಚಿಕ್ಕಹಂದಿಗೋಳ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮದ ರೈತರು ಮೋಸ ಹೋಗಿದ್ದಾರೆ.

ದಾವಣಗೆರೆ ಮೂಲದ ಮಾರುತಿಗೌಡ ಎನ್ನುವಾತ ರೈತರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಮಾರುತಿಗೌಡ ಗ್ರಾಮಗಳಲಿ ಸ್ವಸಹಾಯ ಸಂಘದ ಮಹಿಳೆಯರನ್ನು ಸಂಪರ್ಕ ಮಾಡಿದ್ದು, ರೈತರು ನನಗೆ  ಕಡಲೆ ಮಾರಾಟ ಮಾಡಿದ್ರೆ, ಮಹಿಳಾ ಸಂಘಗಳಾದ ಸಂಜೀವಿನಿ ಒಕ್ಕೂಟಕ್ಕೆ ಕಮಿಷನ್ ನೀಡೋದಾಗಿ ನಂಬಿಸಿದ್ದ. ಹೀಗಾಗಿ ಜಿಲ್ಲೆಯ 10 ಗ್ರಾಮದ ಮಹಿಳಾ ಸಂಘದ ಸದಸ್ಯರು  ಲಾಭ ಸಿಗುತ್ತದೆ ಎನ್ನುವ ಆಸೆಯಿಂದ ಕಡಲೆ ಮಾರಾಟ ಮಾಡಿದ್ದಾರೆ.


Provided by

ಇದೀಗ ಬರೋಬ್ಬರಿ 9 ಕೋಟಿ ರೂಪಾಯಿ ಬೆಲೆ ಬಾಳುವ ಕಡಲೆಯೊಂದಿಗೆ ಮಾರುತಿ ಗೌಡ ರೈತರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದಾನೆ.

ಮಾರುಕಟ್ಟೆ ದರಕ್ಕಿಂತ 100 ರೂ. ಹೆಚ್ಚಿನ ಬೆಲೆ, ಹಾಗೇ ಮಾರುಕಟ್ಟೆಗೆ ಕಡಲೆ ಸಾಕಾಣಿಕೆ ಮಾಡುವ ವೆಚ್ಚ ಉಳಿಯುತ್ತದೆ ಎನ್ನುವ ಉದ್ದೇಶದಿಂದ ರೈತರು ಮಹಿಳಾ ಸಂಘದ ಮಧ್ಯಸ್ಥಿಕೆಯಲ್ಲಿ ಕಡಲೆ ಮಾರಾಟ ಮಾಡಿದ್ದಾರೆ.

10 ಗ್ರಾಮದ 9 ರಿಂದ 10 ಕೋಟಿ ರೂ. ಮೌಲ್ಯದ ಕಡಲೆಯನ್ನು ಹಣ ನೀಡಿದೆ ತೆಗೆದುಕೊಂಡು ಹೋಗಿದ್ದಾನೆ ವ್ಯಾಪಾರಸ್ಥ ಸೋಗಿನಲ್ಲಿ ಬಂದ ಮೋಸಗಾರ ಮಾರುತಿಗೌಡ ಖರೀದಿ ಮಾಡಿ ರೈತರ ಕೈಗೆ ಸಿಗ್ತಾಯಿಲ್ಲ ಎಂದು ರೈತರು ಕಣ್ಣೀರು ಹಾಕಿದ್ದಾರೆ.

ಗದಗ ಜಿಲ್ಲಾಡಳಿತ ಭವನದ ಮುಂದೆ ಕಳೆದ ಎರಡು ದಿನಗಳಿಂದ ರೈತರು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಪಟ್ಟು ಹಿಡಿದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ