ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಾಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ರಹಸ್ಯ ಪರೋಲ್! - Mahanayaka

ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಾಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ರಹಸ್ಯ ಪರೋಲ್!

07/11/2020

ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಡೇರಾ ಸಾಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ಹರ್ಯಾಣ ಸರ್ಕಾರವು ಒಂದು ದಿನದ ರಹಸ್ಯ ಪರೋಲ್ ನೀಡಿದೆ. ಅಕ್ಟೋಬರ್ 24ರಂದು ರಾಮ್ ರಹೀಂಗೆ ಪರೋಲ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯಾದ ಬಳಿಕ ಡೇರಾ ಮುಖ್ಯಸ್ಥನಿಗೆ ಇದೇ ಮೊದಲ ಬಾರಿಗೆ ಈ ಪರೋಲ್ ನೀಡಲಾಗಿದೆ. ಈತನ ತಾಯಿ  ಗುರ್ಗಾಂವ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ  ತಾಯಿಯನ್ನು ಭೇಟಿಯಾಗಲು ಹರ್ಯಾಣ ಸಿಎಂ ಮನೋಹರ್  ಲಾಲ್ ಖಟ್ಟರ್ ಸರ್ಕಾರವು ಪರೋಲ್ ನೀಡಿದೆ ಎಂದು TOI ವರದಿ ಮಾಡಿದೆ.

ಅಕ್ಟೋಬರ್ 24ರಂದು ಸುನಾರಿಯಾ ಜೈಲಿನಿಂದ ಭಾರೀ ಭದ್ರತೆಯೊಂದಿಗೆ ರಾಮ್ ರಹೀಂನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಾಮ್ ರಹೀಂನ 85 ವರ್ಷದ ತಾಯಿ ನಸೀಬ್ ಕೌರ್, ಹೃದ್ರೋಗದಿಂದ ಬಳಲುತ್ತಿದ್ದಾರೆ ಮತ್ತು ತೀವ್ರ ಅಸ್ವಸ್ಥರಾಗಿದ್ದಾರೆ ಎಂನ ಕಾರಣಕ್ಕಾಗಿ ರಾಮ್ ರಹೀಂ ಪತ್ನಿ ಹರ್ಜಿತ್ ಕೌರ್ ತಮ್ಮ ಪರೋಲ್ ಕೋರಿದ್ದಾರೆ. ರಾಮ್ ರಹೀಂಗೆ ಪರೋಲ್ ನೀಡಿರುವ ಮಾಹಿತಿ ಸಾರ್ವಜನಿಕರಿಗೆ ಗೊತ್ತಾಗಿಲ್ಲ. ಹರ್ಯಾಣ ಸರ್ಕಾರದ ಕೆಲವೇ ಕೆಲವು ಅಧಿಕಾರಿಗಳಿಗೆ ಮಾತ್ರವೇ ಈ ವಿಚಾರ ತಿಳಿದು ಬಂದಿತ್ತು.

 

ಇತ್ತೀಚಿನ ಸುದ್ದಿ