ಹಿಂದೂ ಯುವತಿಯನ್ನು ವಿವಾಹವಾದ ಮುಸ್ಲಿಮ್ ಯುವಕ ಜೈಲಿಗೆ | ಮತ್ತೊಂದು ಪ್ರಕರಣ - Mahanayaka
8:55 AM Sunday 15 - September 2024

ಹಿಂದೂ ಯುವತಿಯನ್ನು ವಿವಾಹವಾದ ಮುಸ್ಲಿಮ್ ಯುವಕ ಜೈಲಿಗೆ | ಮತ್ತೊಂದು ಪ್ರಕರಣ

02/01/2021

ಲಕ್ನೋ:  ಹಿಂದೂ ಪದ್ಧತಿಯ ಮೂಲಕವೇ ಹಿಂದೂ ಯುವತಿಯನ್ನು ಕುಟುಂಬಸ್ಥರ ಬೆಂಬಲದೊಂದಿಗೆ ವಿವಾಹವಾದ ಮುಸ್ಲಿಮ್ ಯುವಕನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಿಜೆಪಿ ನಾಯಕರು ಹಸ್ತಕ್ಷೇಪ ನಡೆಸಿದ ಬಳಿಕ ಮುಸ್ಲಿಮ್ ಯುವಕನ ಬಂಧನ ನಡೆದಿದೆ.

ನಾಗರಿಕ ಸೇವಾ  ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ 29 ವರ್ಷದ ಶಿಕ್ಷಕಿ ಪ್ರಿಯಾ ವರ್ಮಾ ತಮ್ಮ ಸಹಪಾಠಿ ತೌಫೀಕ್ ಅವರನ್ನು ಎರಡು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು.  ಆದರೆ ಈ ನಡುವೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತಾಂತರ ನಿಷೇಧ ಕಾಯ್ದೆಯನ್ನು ಉತ್ತರಪ್ರದೇಶದಲ್ಲಿ ಜಾರಿ ಮಾಡಿದ್ದರು, ಇದರಿಂದಾಗಿ ಮದುವೆಯಾಗಿ  ಜೊತೆಯಾಗಿ ಜೀವನ ನಡೆಸುವ ಇವರ ಕನಸು ಭಗ್ನವಾಗಿತ್ತು.

ಆದರೂ ಪ್ರೀತಿಯ ಮುಂದೆ ಯಾವುದೇ ಧರ್ಮ-ಜಾತಿ ಅಡ್ಡ ಬರುವುದಿಲ್ಲ ಎಂಬಂತೆ, ತೌಫೀಕ್ ಅವರನ್ನು ರಾಹುಲ್ ಶರ್ಮಾ ಎಂದು ಪರಿಚರಿಸಿ ಕುಟುಂಬಸ್ಥರು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಸಿದರು. ಮದುವೆಯ ಬಳಿಕ ಮದುವೆ ಸಮಾರಂಭದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿದ್ದು,  ಇದು ಮದುವೆಯ ಎರಡನೇ ದಿನ ಸ್ಥಳೀಯ ಬಿಜೆಪಿ ಮುಖಂಡನ ಗಮನಕ್ಕೆ ಬಂದಿದೆ.  ಎರಡು ಕುಟುಂಬಗಳು ಸೌಹಾರ್ದಯುತವಾಗಿ ಮಾಡಿದ್ದ ವಿವಾಹ ಬಿಜೆಪಿ ಮುಖಂಡನ ದೃಷ್ಟಿಯಲ್ಲಿ ಲವ್ ಜಿಹಾದ್ ಆಗಿ ಬದಲಾಯಿತು. ಪ್ರಿಯಾ ತಂದೆ ಸರ್ವೇಶ್ ಶುಕ್ಲಾ ಅವರನ್ನು ಭೇಟಿಯಾದ ಬಿಜೆಪಿ ಮುಖಂಡರು ಕೂಡಲೇ ಪ್ರಕರಣ ದಾಖಲಿಸುವಂತೆ, ಬೆದರಿಕೆ, ಬ್ರೈನ್ ವಾಶ್ ಮಾಡಿದ್ದಾರೆ.


Provided by

ಆ ಬಳಿಕ ಈ ಪ್ರಕರಣವೇ ಬದಲಾಗಿದ್ದು, ಇದೀಗ ತೌಫಿಕ್ ವಿರುದ್ಧ  ವಂಚನೆಯ ವಿವಾಹ, ಬಲವಂತದ ಮತಾಂತರ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.  ಪ್ರಕರಣ ದಾಖಲಾಗುತ್ತಿದ್ದಂತೆಯೇ ತೌಫೀಕ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಜೈಲಿಗೆ ವರ್ಗಾಯಿಸಿದೆ. ಈ ಪ್ರಕರಣದಲ್ಲಿ ಯಾವುದೇ ಅಕ್ರಮ ವಿವಾಹ ಅಥವಾ ಮತಾಂತರಗಳು ಇಲ್ಲದೇ ಇದ್ದರೂ, ತೌಫೀಕ್ ಅವರನ್ನು ಬಂಧಿಸಿ ಸುಳ್ಳು ಕೇಸುಗಳನ್ನು ಝಡಿಯಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ