10 ವರ್ಷದ ಹಿಂದೆ ಪತಿ, 5 ವರ್ಷದ ಹಿಂದೆ ಮಗ ಸಾವು, ಈಗ ಮಹಿಳೆಯೂ ಬರ್ಬರವಾಗಿ ಹತ್ಯೆ!

ರಾಮನಗರ: ಒಂಟಿ ಮಹಿಳೆಯೊಬ್ಬರನ್ನು ಫಾರ್ಮ್ ಹೌಸ್ ಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿ ನಡೆದಿದೆ.
ಗಿರಿಗೌಡನ ದೊಡ್ಡಿ ನಿವಾಸಿ ಶಾಂತಿ (53) ಹತ್ಯೆಗೀಡಾಗಿರುವ ಮಹಿಳೆಯಾಗಿದ್ದಾರೆ. ಮಹಿಳೆಯ ಹತ್ಯೆಯಾಗಿರುವ ಬಗ್ಗೆ ಆಕೆಯ ಕಾರು ಚಾಲಕ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಮಹಿಳೆ ಹತ್ಯೆಗೀಡಾಗಿರುವುದನ್ನು ಕಂಡು ಭಯಗೊಂಡು ಚಾಲಕ ಮಂಗಳೂರಿಗೆ ಹೋಗಿದ್ದು, ಪೊಲೀಸರು ಕರೆ ಮಾಡಿರುವ ಹಿನ್ನೆಲೆಯಲ್ಲಿ ವಾಪಸ್ ಬರುತ್ತಿದ್ದಾನೆ ಎಂದು ತಿಳಿದು ಬಂದಿದೆ.
ದುರಂತದಲ್ಲಿ ಅಂತ್ಯಕಂಡ ಕುಟುಂಬ:
ಹತ್ಯೆಗೀಡಾದ ಮಹಿಳೆಯ ಪತಿ 10 ವರ್ಷದ ಹಿಂದೆ ಹೃದಯಘಾತದಿಂದ ಸಾವನ್ನಪ್ಪಿದ್ದರು. ಇದಾದ ಬಳಿಕ 5 ವರ್ಷದ ಹಿಂದೆ ಇದ್ದ ಒಬ್ಬ ಮಗನೂ ಅಪಘಾತದಲ್ಲಿ ಮೃತಪಟ್ಟಿದ್ದ. ಹೀಗಾಗಿ ಮಹಿಳೆ ಒಬ್ಬಂಟಿಯಾಗಿ ಫಾರ್ಮ್ ಹೌಸ್ ನಲ್ಲಿ ವಾಸಿಸುತ್ತಿದ್ದರು. ಇದೀಗ ಅವರು ಬರ್ಬರವಾಗಿ ಕೊಲೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಗ್ಗಲಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth