ಹೆಲಿಕಾಪ್ಟರ್ ದುರಂತ: ಮೃತ ಇರಾನಿನ ಅಧ್ಯಕ್ಷರ ಅಂತ್ಯಸಂಸ್ಕಾರದಲ್ಲಿ ಹಮಾಸ್ ನಾಯಕ ಭಾಗಿ - Mahanayaka

ಹೆಲಿಕಾಪ್ಟರ್ ದುರಂತ: ಮೃತ ಇರಾನಿನ ಅಧ್ಯಕ್ಷರ ಅಂತ್ಯಸಂಸ್ಕಾರದಲ್ಲಿ ಹಮಾಸ್ ನಾಯಕ ಭಾಗಿ

23/05/2024

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನಿನ ಅಧ್ಯಕ್ಷ ಡಾ. ಇಬ್ರಾಹಿಂ ರಈಸಿ ಅವರ ಅಂತ್ಯಸಂಸ್ಕಾರದಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ ಭಾಗಿಯಾಗಿದ್ದಾರೆ. ಫೆಲೆಸ್ತೀನಿಯರ ಪ್ರತಿನಿಧಿಯಾಗಿ ತಾನಿಲ್ಲಿಗೆ ಬಂದಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಇರಾನಿನ ಪರಮೋನ್ನತ ನಾಯಕ ಆಯತುಲ್ಲ ಅಲಿ ಕಾಮಿನೈ ಅವರ ಜೊತೆ ಅವರು ಮಾತುಕತೆಯನ್ನೂ ನಡೆಸಿದ್ದಾರೆ.


Provided by

ರಈಸಿಯವರ ನಿಧನಕ್ಕೆ ಹಮಾಸ್ ಈ ಮೊದಲೇ ಸಂತಾಪ ಸೂಚಿಸಿತ್ತು. ನಮ್ಮ ಬೆಂಬಲಿಗರಾದ ಗೌರವಾನ್ವಿ ತ ರಇಸಿ ಎಂದೇ ಹಮಾಸ್ ಅವರನ್ನು ಸಂಬೋಧಿಸಿತ್ತು. ಹಾಗೆಯೇ ಲಬನಾನಿನ ಹಿಸ್ಬುಲ್ಲಾದ ಡೆಪ್ಯೂಟಿ ಸೆಕ್ರೆಟರಿ ಜನರಲ್ ನಯೀಮ್ ಖಾಸಿಮಿ ಅವರು ಕೂಡ ಟೆಹರಾನಿಗೆ ಬಂದು ರಈಸಿಯವರ ಅಂತಿಮ ದರ್ಶನ ಪಡೆದರು ತೆಹರಾ ನ್ ಯುನಿವರ್ಸಿಟಿಯಲ್ಲಿ ಅವರ ಮೃತ ದೇಹವನ್ನು ಇರಿಸಲಾಗಿದ್ದು ಸಾವಿರಾರು ಮಂದಿ ಅವರ ಅಂತಿಮ ದರ್ಶನ ಪಡೆದರು.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ