ಜೋಬಿಡೆನ್ ರನ್ನು ಭಾರತೀಯರು ಸುಮ್ಮನೆ ಆಯ್ಕೆ ಮಾಡಿಲ್ಲ | ಅಮೆರಿಕ ಚುನಾವಣೆ ಮತ್ತು ಭಾರತೀಯರು ಕಲಿಯಬೇಕಿರುವ ಪಾಠ - Mahanayaka

ಜೋಬಿಡೆನ್ ರನ್ನು ಭಾರತೀಯರು ಸುಮ್ಮನೆ ಆಯ್ಕೆ ಮಾಡಿಲ್ಲ | ಅಮೆರಿಕ ಚುನಾವಣೆ ಮತ್ತು ಭಾರತೀಯರು ಕಲಿಯಬೇಕಿರುವ ಪಾಠ

08/11/2020

ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ  ಡೊನಾಲ್ಡ್ ಟ್ರಂಪ್ ಪರ ಪ್ರಧಾನಿ ನರೇಂದ್ರ ಮೋದಿ ನಿಂತರೂ, ಅಮೆರಿಕದ ಭಾರತೀಯರು ಜೋಬಿಡೆನ್ ಅವರನ್ನು ಯಾಕೆ ಆಯ್ಕೆ ಮಾಡಿದ್ದಾರೆ ಗೊತ್ತಾ? ಇಲ್ಲಿ ಭಾವನಾತ್ಮಕ ವಿಚಾರಕ್ಕಿಂತಲೂ ವಾಸ್ತವ ಬದುಕಿನ ವಿಚಾರಗಳಿದ್ದವು. ಭಾರತದ ಜನರು ಧರ್ಮ, ಜಾತಿಗಳೆಂಬ ಭಾವನಾತ್ಮಕ ವಿಚಾರಗಳಿಗೆ ಬೆಲೆ ನೀಡಿದರೆ, ಅಮೆರಿಕದಲ್ಲಿದ್ದ ಭಾರತೀಯರು ತಮ್ಮ ಭವಿಷ್ಯವನ್ನು ನೋಡಿ ಜೋಬಿಡೆನ್ ಗೆ ಮತ ಚಲಾಯಿಸಿದ್ದಾರೆ.

ಹೌದು..! ಜೋ ಬಿಡೆನ್ ಅಮೆರಿಕ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಟ್ರಂಪ್ ಆಡಳಿತ ಅವಧಿಯಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರುವ ಸ್ಥಿತಿಯಲ್ಲಿದ್ದ ಭಾರತೀಯರು ಸ್ವಲ್ಪ ನಿಟ್ಟುಸಿರುವ ಬಿಟ್ಟಿದ್ದಾರೆ. ಇದೀಗ ಜೋಬಿಡೆನ್ ಗೆದ್ದ ತಕ್ಷಣವೇ ಭಾರತದ ಐದು ಲಕ್ಷ ಜನರಿಗೆ ಯು ಎಸ್ ಪೌರತ್ವ ನೀಡಲು ಮುಂದಾಗಿದ್ದು ಜೊತೆಗೆ ಎಚ್ 1 ಬಿ ವೀಸಾ ಮಿತಿಯನ್ನು ಹೆಚ್ಚಿಸಲು ಮುಂದಾಗಿದ್ದಾರೆ.

ಟ್ರಂಪ್ ಆಡಳಿತ ಅವಧಿಯಲ್ಲಿ ಎಚ್ -1 ಬಿ ವೀಸಾಗಳಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದಾಗಿ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಂಡು ಬೀದಿಗೆ ಬರುವಂತಾಗಿತ್ತು.  ಇದೀಗ ಜೋ ಬಿಡೆನ್ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಭಾರತೀಯರು ಸ್ವಾಂತ್ವನ ಪಡೆಯುವಂತಾಗಿದೆ.

ಅಮೆರಿಕದ ಭಾರತೀಯರಿಂದ ಭಾರತದ ಪ್ರಜೆಗಳು ಕಲಿಯಬೇಕಿರುವುದು ಬಹಳಷ್ಟಿದೆ. ಅಮೆರಿಕದ ಭಾರತೀಯರು, ಅದರಲ್ಲೂ ಬಲಪಂಥೀಯ ಧೋರಣೆಯುಳ್ಳವರು ಕೂಡ ಟ್ರಂಪ್ ಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಯಾಕೆಂದರೆ, ಅವರಿಗೆ ಅಮೆರಿದಲ್ಲಿ ಸ್ವಚ್ಛಂದವಾಗಿ ಬದುಕಬೇಕಿತ್ತು. ಆದರೆ ಭಾರತದಲ್ಲಿ ಜನರು ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಮತ ಚಲಾಯಿಸುವುದೇ ಹೆಚ್ಚು. ಹೀಗಾಗಿಯೇ ಭಾರತ ದಿನದಿಂದ ದಿನಕ್ಕೆ ಉದ್ಯೋಗ, ಆರ್ಥಿಕ, ಸಾಮಾಜಿಕ ವಿಚಾರಗಳಲ್ಲಿ ಪಾತಾಳಕ್ಕೆ ಕುಸಿಸುತ್ತಿದೆ. ಜನರು ಅಭಿವೃದ್ಧಿಯ ದೃಷ್ಟಿಯಿಟ್ಟುಕೊಂಡು ಯಾವಾಗ ಭಾರತದಲ್ಲಿ ಮತದಾನ ಮಾಡುವಷ್ಟು ಪ್ರಬುದ್ಧರಾಗುತ್ತಾರೋ, ಅಲ್ಲಿಯವರೆಗೆ ಭಾರತದಲ್ಲಿ ಬದಲಾವಣೆ ಸಾಧ್ಯವಿಲ್ಲ ಎನ್ನುವುದಕ್ಕೆ ಅಮೆರಿಕದ  ಚುನಾವಣೆಯೇ ಒಂದು ದರ್ಪಣವಾಗಿದೆ. ಭಾರತದಲ್ಲಿ ಬಲಪಂಥೀಯ ಪಕ್ಷಗಳನ್ನು ಫಾಲೋ ಮಾಡುವ ಕುಟುಂಬದ ಸದಸ್ಯರು ಅಮೆರಿಕದಲ್ಲಿ ಟ್ರಂಪ್ ವಿರುದ್ಧ ಮತ ಚಲಾಯಿಸಿದ್ದಾರೆಂದರೆ,  ಅವರು ಸುಖವಾಗಿ ಬದುಕಲು ಪ್ರಯತ್ನಿಸುತ್ತಾರೆ ಅಷ್ಟೆ ಎನ್ನುವುದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕಿದೆ.

ಇತ್ತೀಚಿನ ಸುದ್ದಿ