ಕರ್ನಾಟಕಕ್ಕೆ ಕನ್ನಡದಲ್ಲಿಯೇ ಧನ್ಯವಾದ ಹೇಳಿದ ಕೆ.ಎಲ್.ರಾಹುಲ್ - Mahanayaka

ಕರ್ನಾಟಕಕ್ಕೆ ಕನ್ನಡದಲ್ಲಿಯೇ ಧನ್ಯವಾದ ಹೇಳಿದ ಕೆ.ಎಲ್.ರಾಹುಲ್

03/11/2020

ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಸಾಧನೆಯಲ್ಲಿ ಮುನ್ನುಗ್ಗುತ್ತಿರುವ ಕೆ.ಎಲ್.ರಾಹುಲ್ ಅವರು ಏಕಲವ್ಯ ಪ್ರಶಸ್ತಿಗೆ  ಭಾಜನರಾಗಿದ್ದು, ಕರ್ನಾಟಕಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.


 ಕೆ.ಎಲ್. ರಾಹುಲ್ ಈ ಬಾರಿಯ ಐಪಿಎಲ್ ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಕ್ರೀಡಾ ಕ್ಷೇತ್ರ, ಕ್ರಿಕೆಟ್ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕೆ.ಎಲ್.ರಾಹುಲ್ ಅವರಿಗೆ ಏಕಲವ್ಯ ಪ್ರಶಸ್ತಿ ಘೋಷಿಸಿದ್ದು, ಇದಕ್ಕೆ ಅವರು ಹರ್ಷ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.Provided by

ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು ಎಂದು ಕೆ.ಎಲ್.ರಾಹುಲ್ ಅವರು ಕನ್ನಡದಲ್ಲಿಯೇ ಕರ್ನಾಟಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ.


ಇತ್ತೀಚಿನ ಸುದ್ದಿ