ನಿಮಗೆ ಬೆಂಗಳೂರಿನಿಂದ ಕರೆ ಬಂದಿಲ್ವಾ ಎಂದು ಕೇಳಿದ್ದಕ್ಕೆ ಯತ್ನಾಳ್ ಏನಂದ್ರು ಗೊತ್ತಾ? - Mahanayaka
10:04 PM Wednesday 11 - September 2024

ನಿಮಗೆ ಬೆಂಗಳೂರಿನಿಂದ ಕರೆ ಬಂದಿಲ್ವಾ ಎಂದು ಕೇಳಿದ್ದಕ್ಕೆ ಯತ್ನಾಳ್ ಏನಂದ್ರು ಗೊತ್ತಾ?

12/01/2021

ವಿಜಯಪುರ:  ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ನಿಮಗೆ ಬೆಂಗಳೂರಿನಿಂದ ಕರೆ ಬಂದಿಲ್ವಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿರಾಸೆಯ ಉತ್ತರ ನೀಡಿದ್ದಾರೆ.

“ಬೆಂಗಳೂರಿನಲ್ಲಿ ನಮ್ಮದೇನೈತ್ರಿ ಕೆಲ್ಸ… ನಮ್ಮ ಕರೆನ್ಸಿ ಖಾಲಿಯಾಗಿದೆ” ಎಂದು ನಿರಾಸೆ ವ್ಯಕ್ತಪಡಿಸಿದರು. ಸಿಎಂ ಯಡಿಯೂರಪ್ಪನವರ ವಿರುದ್ಧ ತೀವ್ರವಾದ ಹೇಳಿಕೆಗಳನ್ನು ನೀಡಿದ್ದ ಬಸನಗೌಡ ಪಾಟೀಲ ಯತ್ನಾಳ್ ಅವರು ಇದೀಗ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಈ ನಡುವೆ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಯತ್ನಾಳ್ ಅವರು, ಇದೀಗ ಸಚಿವ ಸ್ಥಾನ ಸಂಬಂಧ ಕರೆ ಬಂದಿದೆಯೇ ಎಂದಾಗ, “ಎಲ್ಲಾ ಕರೆನ್ಸಿ ಕಟ್ ಆಗಿದೆ, ಏನ್ ಮಾಡೋದು ಎಂದು ಹೇಳಿದ್ದಾರೆ.

7 ಶಾಸಕರಿಗೆ ಸಿಎಂ ಯಡಿಯೂರಪ್ಪನವರು ಸಚಿವ ಸ್ಥಾನ ನೀಡಲಿದ್ದಾರೆ. ನಾಳೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ, ನೂತನ ಸಚಿವರಿಗೆ ಮಾತ್ರವೇ ಕರೆ ಬರಲಿದ್ದು, ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿರಾಸೆಯ ಉತ್ತರ ನೀಡಿರುವ ಯತ್ನಾಳ್, ಸಂಕ್ರಮಣ ಜಾತ್ರೆ ಇದೆ, ನಾನೀಗ ಆ ಕೆಲಸದಲ್ಲಿದ್ದೇನೆ ಎಂದು ಹೇಳಿದ್ದಾರೆ.


Provided by

ಇತ್ತೀಚಿನ ಸುದ್ದಿ