ಕೇಂದ್ರ ಸರ್ಕಾರವು ರೈತರನ್ನು ಗೌರವಿಸುವುದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ - Mahanayaka

ಕೇಂದ್ರ ಸರ್ಕಾರವು ರೈತರನ್ನು ಗೌರವಿಸುವುದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ

23/12/2020

ತಿರುವನಂತಪುರ: ದೆಹಲಿಯಲ್ಲಿ  ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಿರುವನಂತಪುರನಲ್ಲಿ ನಡೆದ ಕೃಷಿ ವಿರೋಧಿ ಕಾನೂನು ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ  ಅವರು , ಕೇಂದ್ರ ಸರ್ಕಾರವು ರೈತರನ್ನು ಗೌರವಿಸುವುದಿಲ್ಲ ರೈತರನ್ನು ಗೌರವಿಸುವುದಿಲ್ಲ ಎಂದಿದ್ದು, ಹಿಂದಿನ ಸರ್ಕಾರಗಳು ರೈತರಿಗೆ ಸ್ಪಂದಿಸುವಂತೆ ಈಗಿನ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿದ್ದಾರೆ.

ನಮ್ಮ ದೇಶದಲ್ಲಿ ಅನೇಕ ಪ್ರತಿಭಟನೆಗಳು ನಡೆದ್ದಿದ್ದು,  ಕೇರಳದಲ್ಲಿಯೂ ಇಂತಹ ಅನೇಕ ಪ್ರತಿಭಟನೆಗಳು ನಡೆದಿವೆ. ಭಾರತದಲ್ಲಿ ಈಗ ರೈತರ ದೊಡ್ಡ ಮಟ್ಟದ  ಪ್ರತಿಭಟನೆ ನಡೆಯುತ್ತಿದೆ. ಆದರೆ, ಕೇಂದ್ರದಲ್ಲಿರುವ ಈಗಿನ ಸರ್ಕಾರ ಅವರನ್ನು ಗೌರವಿಸುವುದಿಲ್ಲ ಎಂದು  ಪಿಣರಾಯಿ ವಿಜಯನ್  ಹೇಳಿದರು.


Provided by

ಇತ್ತೀಚಿನ ಸುದ್ದಿ