ಹಳೆ ಮನೆಯಲ್ಲಿ ಕೂಡಿ ಹಾಕಿ 13 ವರ್ಷದ ಬಾಲಕಿಯ ಅತ್ಯಾಚಾರ - Mahanayaka

ಹಳೆ ಮನೆಯಲ್ಲಿ ಕೂಡಿ ಹಾಕಿ 13 ವರ್ಷದ ಬಾಲಕಿಯ ಅತ್ಯಾಚಾರ

18/11/2020

ಕೋಲಾರ: 13 ವರ್ಷದ ಬಾಲಕಿಯನ್ನು ಹಳೆಯ ಮನೆಯೊಂದರಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


Provided by

ಆರೋಪಿಗಳಾದ ಹಂಗಳ ಗ್ರಾಮದ ಹರೀಶ್, ರಘು, ಸುಹೇಲ್ ಮತ್ತು ಜಗದೀಶ್ ಈ ದುಷ್ಕೃತ್ಯ ಎಸಗಿದ್ದಾರೆ. ಭಾನುವಾರ ರಾತ್ರಿ ಬಾಲಕಿಯು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಈ ನಾಲ್ವರು ಬಾಲಕಿಯನ್ನು ಅಪಹರಿಸಿದ್ದರು ಎಂದು ಹೇಳಲಾಗಿದೆ.

ಬಾಲಕಿಯನ್ನು ಅಪಹರಿಸಿದ ಬಳಿಕ ಹಳೆಯ ಮನೆಯೊಂದರಲ್ಲಿ ಕೂಡಿ ಹಾಕಿ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ