ಕೃಷಿ ಕಾಯ್ದೆ ವಿರುದ್ಧದ ನಿರ್ಣಯಕ್ಕೆ ಕೇರಳದ ಏಕೈಕ ಬಿಜೆಪಿ ಶಾಸಕ ಬೆಂಬಲ - Mahanayaka

ಕೃಷಿ ಕಾಯ್ದೆ ವಿರುದ್ಧದ ನಿರ್ಣಯಕ್ಕೆ ಕೇರಳದ ಏಕೈಕ ಬಿಜೆಪಿ ಶಾಸಕ ಬೆಂಬಲ

01/01/2021

ತಿರುವನಂತಪುರಂ: ಕೇರಳದ ಏಕೈಕ ಬಿಜೆಪಿ ಶಾಸಕ ಓ.ರಾಜಗೋಪಾಲ್ ಕೇರಳ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿ ನಿರ್ಣಯವನ್ನು ಬೆಂಬಲಿಸಿದ್ದಾರೆ. ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೃಷಿ ಕಾಯ್ದೆ ವಿರೋಧಿ ಮಸೂದೆಯನ್ನು ಮಂಡಿಸಿದರು.


Provided by

ಅಧಿವೇಶನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಓ.ರಾಜಗೋಪಾಲ್, ಕೇರಳ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರಲ್ಲದೇ, ಈ ನಿರ್ಣಯದಲ್ಲಿಕೃಷಿ ಕಾಯ್ದೆಯನ್ನು ತಿರುಚಿ ವಿಶ್ಲೇಷಣೆ ನಡೆಸಿರುವ ಬಗ್ಗೆ ನನ್ನ ವಿರೋಧವಿದೆ ಎಂದು ತಿಳಿಸಿದರು.

ಅಧಿವೇಶನದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜೊತೆಗೆ ಅಭಿಪ್ರಾಯ ಬೇಧವಿದ್ದರೂ, ರಾಜ್ಯದ ಒಗ್ಗಟ್ಟಿಗಾಗಿ ನಾನು ಕೃಷಿ ಕಾಯ್ದೆ ವಿರೋಧಿ ನಿರ್ಣಯದ ಪರವಾಗಿದ್ದೇನೆ. ಕೃಷಿ ವಿರೋಧಿ ಕಾಯ್ದೆಯನ್ನು ನಾನು ಬೆಂಬಲಿಸಿದ್ದರೂ, ಬಿಜೆಪಿಗೆ ವಿರುದ್ಧವಾಗಿ ನಡೆದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯಗಳಿಗೂ ಮಹತ್ವವಿದೆ ಎಂದು ಹೇಳಿದರು.


Provided by

ಇತ್ತೀಚಿನ ಸುದ್ದಿ