ಅರವಿಂದ ಲಿಂಬಾವಳಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಕಿಡಿಗೇಡಿಗಳು ಮಾಡಿದ್ದೇನು ಗೊತ್ತಾ? - Mahanayaka

ಅರವಿಂದ ಲಿಂಬಾವಳಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಕಿಡಿಗೇಡಿಗಳು ಮಾಡಿದ್ದೇನು ಗೊತ್ತಾ?

02/12/2020

ಬೆಂಗಳೂರು: ಮಾಜಿ ಸಚಿವ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ತೆರೆದು ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟ ಘಟನೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಲಿಂಬಾವಳಿ ಅವರು, ಬುಧವಾರ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

:ನನ್ನ ಸ್ನೇಹಿತರೇ, ಕಾರ್ಯಕರ್ತರೇ. ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ಈ ಖಾತೆಯನ್ನು ರಿಪೋರ್ಟ್ ಮಾಡಿ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಾನು ದೂರು ನೀಡಲಿದ್ದೇನೆ: ಎಂದು ಅರವಿಂದ ಲಿಂಬಾವಳಿ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ಅರವಿಂದ ಲಿಂಬಾವಳಿ ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಯನ್ನಿಟ್ಟಿರುವ ಕಿಡಿಗೇಡಿಗಳ ಸಂದೇಶದ ಸ್ಕ್ರೀನ್ ಶಾಟ್ ನ್ನು ಶಾಸಕರು ಕೂಡ ಶೇರ್ ಮಾಡಿದ್ದು,  ಫೋನ್ ಪೇ ಮೂಲಕ 12 ಸಾವಿರ ಕಳುಹಿಸುವಂತೆ ಬೇಡಿಕೆ ಇಡಲಾಗಿದೆ.

ಇತ್ತೀಚಿನ ಸುದ್ದಿ