ಲೋಕಸಭೆಯಲ್ಲಿ 5 ವರ್ಷಗಳಲ್ಲಿ ಒಂದಕ್ಷರವೂ ಮಾತನಾಡದ ಸಂಸದರು ಇವರೇ ನೋಡಿ
ನವದೆಹಲಿ: 17ನೇ ಲೋಕಸಭೆಯಲ್ಲಿ ಐದು ವರ್ಷಗಳಲ್ಲಿ ಕರ್ನಾಟಕದ ನಾಲ್ವರು ಸಂಸದರು ಸೇರಿದಂತೆ 9 ಸದಸ್ಯರು ಒಂದಕ್ಷರ ಮಾತೂ ಆಡಿಲ್ಲ, ಯಾವುದೇ ಚರ್ಚೆಯಲ್ಲಿ ಕೂಡ ಭಾಗಿಯಾಗಿಲ್ಲ. ಆದ್ರೆ ಅಚ್ಚರಿಯ ವಿಚಾರ ಏನಂದ್ರೆ, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಾರೋಷವಾಗಿ ಮಾತನಾಡುತ್ತ, ಸವಾಲು ಹಾಕುತ್ತಾ ಬೊಬ್ಬಿರಿಯುವ ಅನಂತ್ ಕುಮಾರ್ ಹೆಗಡೆ ಕೂಡ ಈ ಲಿಸ್ಟ್ ನಲ್ಲಿದ್ದಾರೆ. ಇವರು ಸಂಸತ್ ನಲ್ಲಿ ಈವರೆಗೆ ಒಂದಕ್ಷರ ಮಾತೂ ಆಡಿಲ್ಲ.
ಅನಂತ್ ಕುಮಾರ್ ಹೆಗಡೆ, ಬಿ.ಎನ್.ಬಚ್ಚೇಗೌಡ, ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ರಮೇಶ್ ಜಿಗಜಿಣಗಿ ಸಂಸತ್ ನಲ್ಲಿ ಒಂದಕ್ಷರವೂ ಮಾತನಾಡದ ಸಂಸದರಾಗಿದ್ದಾರೆ.
ಐದು ವರ್ಷಗಳಲ್ಲಿ 1,354 ಗಂಟೆಗಳ ಕಾಲ ಕಲಾಪ ನಡೆದರೂ, ಈ ಸಂಸದರು ಒಂದಕ್ಷರ ಮಾತನಾಡಿಲ್ಲ ಎಂದರೆ ಅಚ್ಚರಿಯೇ ಸರಿ. ಇವರನ್ನು ಮತ ಹಾಕಿ ಗೆಲ್ಲಿಸಿ, ಸಂಸತ್ ಗೆ ಕಳುಹಿಸಿದ ಜಿಲ್ಲೆಗಳ ಜನರ ಯಾವುದೇ ಸಮಸ್ಯೆಗಳನ್ನು ಇವರು ಹೇಗೆ ಪರಿಹರಿಸಿದ್ದಾರೋ ತಿಳಿದಿಲ್ಲ.
ಇನ್ನುಳಿದ ಸಂಸರೆಂದರೆ, ಶತ್ರುಘ್ನ ಸಿನ್ಹಾ, ಸನ್ನಿ ಡಿಯೋಲ್, ಅತುಲ್ ರೈ, ಪ್ರಧಾನ್ ಬರುಅ ಮತ್ತು ದಿಬ್ಯೇಂದು ಅಧಿಕಾರಿ. ಒಂದೂ ಪ್ರಶ್ನೆಗಳನ್ನು ಕೇಳದ 9 ಸಂಸದರ ಪೈಕಿ 6 ಮಂದಿ ಬಿಜೆಪಿ ಪಕ್ಷದವರಾಗಿದ್ದಾರೆ. ಉಳಿದಂತೆ ಇಬ್ಬರು ತೃಣಮೂಲ ಕಾಂಗ್ರೆಸ್ ಸಂಸದರು, ಮತ್ತು ಒಬ್ಬರು ಬಿಎಸ್ ಪಿ ಪಕ್ಷದ ಸದಸ್ಯರಾಗಿದ್ದಾರೆ.