ಹಿಂದೂ ಯುವತಿ, ಮುಸ್ಲಿಮ್ ಯುವಕನ ಮದುವೆ ನಿಲ್ಲಿಸಲು ಹೋದ ಬಿಜೆಪಿಗೆ ತಿರುಗೇಟು ನೀಡಿದ ಹಿಂದೂ ಯುವತಿಯ ತಂದೆ - Mahanayaka

ಹಿಂದೂ ಯುವತಿ, ಮುಸ್ಲಿಮ್ ಯುವಕನ ಮದುವೆ ನಿಲ್ಲಿಸಲು ಹೋದ ಬಿಜೆಪಿಗೆ ತಿರುಗೇಟು ನೀಡಿದ ಹಿಂದೂ ಯುವತಿಯ ತಂದೆ

29/12/2020

ಉತ್ತರಪ್ರದೇಶ: ಲವ್ ಜಿಹಾದ್ ಹೆಸರಿನಲ್ಲಿ ಬಿಜೆಪಿ ಸದ್ಯ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಬಿಜೆಪಿಯ ಪ್ರಯತ್ನಕ್ಕೆ ಹಿಂದೂ ಯುವತಿಯ ತಂದೆ ತಿರುಗೇಟು ನೀಡಿದ್ದು, ಬಿಜೆಪಿಯ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಹಿಂದೂ ಯುವತಿ ಹಾಗೂ ಮುಸ್ಲಿಮ್ ಯುವನ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಯುವತಿಯ ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಲು ಪ್ರಯತ್ನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಪ್ರಯತ್ನಕ್ಕೆ ತಿರುಗೇಟು ನೀಡಿರುವ ಹಿಂದೂ ಯುವತಿಯ ತಂದೆ, ಈ ಮದುವೆಗೆ ಜಿಲ್ಲಾಡಳಿತದ ಅನುಮತಿ ಪಡೆದುಕೊಂಡಿದ್ದೇವೆ. ಯುವಕ ಹಾಗೂ ಯುವತಿ ಇಬ್ಬರು ಕೂಡ ವಿದ್ಯಾವಂತರಾಗಿದ್ದಾರೆ. ಇಬ್ಬರು ಕೂಡ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಎರಡೂ ಕುಟುಂಬಗಳು ಪರಸ್ಪರ ಅನುಮತಿಯೊಂದಿಗೆ ವಿವಾಹ ಮಾಡಿಸುತ್ತಿದ್ದೇವೆ. ಯುವಕ ಸಪ್ತಪದಿ ತುಳಿದು ಹಿಂದೂ ಧರ್ಮೀಯ ಸಂಪ್ರದಾಯದಂತೆ ಮದುವೆಯಾಗಲು ಕೂಡ ಸಿದ್ಧನಿದ್ದ. ಆದರೆ ಸರಳ ವಿವಾಹದ ಹಿನ್ನೆಲೆಯಲ್ಲಿ ಯಾವುದರ ಅಗತ್ಯ ಬರಲಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯವರು ಯಾವಾಗಲೂ ಸುದ್ದಿಯಲ್ಲಿರಬೇಕು ಎನ್ನುವ ಕಾರಣಕ್ಕೆ ಅವರಿವರ ವೈಯಕ್ತಿಕ ಜೀವನಕ್ಕೆ ಮೂಗು ತೂರಿಸುತ್ತಿದ್ದಾರೆ. ಈ ಆಟದಲ್ಲಿ ತನ್ನನ್ನು ದಾಳವಾಗಿ ಬಳಸಿಕೊಳ್ಳಲು ಅವರು ನೋಡುತ್ತಿದ್ದಾರೆ. ಅವರಿಗೆ ನಮ್ಮ ಜೀವನ ಒಂದು ಸರಕು, ಅಥವಾ ಒಂದು ಘಟನೆ ಅಷ್ಟೆ ಎಂದು ವಧುವಿನ ತಂದೆ ಹೇಳಿದ್ದಾರೆ.

ಬಿಜೆಪಿಯ ಘಾಜಿಯಾಬಾದ್ ಜಿಲ್ಲಾಧ್ಯಕ್ಷ ಅಜಯ್ ಶರ್ಮಾ ನೇತೃತ್ವದಲ್ಲಿ 100ಕ್ಕೂ ಅಧಿಕ ಪ್ರತಿಭಟನಾಕಾರರು ಯುವತಿಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದು, ಮಾನಸಿಕ ಹಿಂಸೆ ನೀಡಿದ್ದು, ಅನಾಗರಿಕರಂತೆ ವರ್ತಿಸಿದ್ದಾರೆ. ವಿವಾಹ ಸಂಬಂಧಕ್ಕೂ ಜಿಲ್ಲಾಡಳಿತದಿಂದ ಅನುಮತಿ ಪಡೆಯುವಂತಹ ಪರಿಸ್ಥಿತಿ ಉತ್ತರಪ್ರದೇಶದಲ್ಲಿದೆ. ಮದುವೆಯನ್ನು ನಿಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರು ಪೊಲೀಸರ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾರೆ. ಇವರ ಉಪಟಳ ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನೂ ಈ ಸಂಬಂಧ 100 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿಯ ವರ್ತನೆ ಇದೇ ರೀತಿಯಾಗಿ ಮುಂದುವರಿದರೆ, ಸಾಮಾಜಿಕ ಅಶಾಂತಿ ಉಂಟಾಗುತ್ತದೆ ಎಂಬ ಅಭಿಪ್ರಾಯಗಳು ಸಾರ್ವಜನಿಕವಾಗಿ ಮೂಡಿದೆ.

ಇತ್ತೀಚಿನ ಸುದ್ದಿ