ನಾಡಲ್ಲಿ ಚುನಾವಣಾ ಮತಯುದ್ಧ: ಬಂಡೀಪುರ ಕಾಡಲ್ಲಿ ಮದಗಜಗಳ ಕಾದಾಟ
ಚಾಮರಾಜನಗರ: ನಾಡಿನಲ್ಲಿ ಚುನಾವಣಾ ಮತಯುದ್ಧ ದಿನೇದಿನೆ ಹೆಚ್ಚುತ್ತಿದ್ದರೇ ಕಾಡಲ್ಲಿ ಮದಗಜಗಳು ನೀನಾ-ನಾನಾ ಎಂಬಂತೆ ಕಾದಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ರಾಮಾಪುರ ಕಳ್ಳಬೇಟೆ ತಡೆ ಶಿಬಿರ ಬಳಿ ನಡೆದಿದೆ.
ಎರಡು ಮದಗಜಗಳು ಗುದ್ದಾಡಿಕೊಳ್ಳುವ ವೀಡಿಯೋವನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದು ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ. ನೀಳದಂತದ ಎರಡು ಆನೆಗಳು ಭೂಮಿಯೇ ಕಂಪಿಸುವಂತೆ ಗುದ್ದಾಡಿಕೊಂಡಿದ್ದು ನೆಟ್ಟಿಗರನ್ನು ರೋಮಾಂಚನಗೊಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























