ಮಗುವಿಗೆ ಜನ್ಮ ನೀಡಿದ ಮೇಘನಾ | ಚಿರು ಕುಟುಂಬಸ್ಥರ ಮೊಗದಲ್ಲಿ ಸಂತಸ - Mahanayaka

ಮಗುವಿಗೆ ಜನ್ಮ ನೀಡಿದ ಮೇಘನಾ | ಚಿರು ಕುಟುಂಬಸ್ಥರ ಮೊಗದಲ್ಲಿ ಸಂತಸ

22/10/2020

ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ದಿ. ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೆ ಜೂನಿಯರ್ ಚಿರು ಮತ್ತೆ ಬಂದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಚಿರು ಪತ್ನಿ ಮೇಘನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಚಿರು ಸಾವಿನಿಂದ ನೋವಿನಲ್ಲಿದ್ದವರಿಗೆ, ಚಿರು ಪುತ್ರನ ಆಗಮನವಾಗುತ್ತಿದ್ದಂತೆಯೇ ಸಂತಸ ಮೂಡಿದೆ. ಜೂನಿಯರ್ ಚಿರು ಎಂದೇ ಮಗು ಹುಟ್ಟುವುದಕ್ಕಿಂತ ಮೊದಲೇ ಚಿರು ಕುಟುಂಬಸ್ಥರು, ಬಂಧುಗಳು ಕರೆಯುತ್ತಿದ್ದರು.

ಚಿರು ಹಾಗೂ ಮೇಘನಾ ಅವರ ನಿಶ್ಚಿತಾರ್ಥದ ದಿನವೇ ಮೇಘನಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಚಿರುನನ್ನು ಕಳೆದುಕೊಂಡ ದುಃಖದಲ್ಲಿದ್ದ ಮೇಘನಾ ಅವರ ದುಃಖವನ್ನು ಮಗು ಕಳೆಯಲಿ ಎಂದು ಎಲ್ಲರೂ ಹಾರೈಸಿದ್ದಾರೆ.

ಇತ್ತೀಚಿನ ಸುದ್ದಿ