ದೇಹದ ತೂಕ ಇಳಿಕೆ ಹಾಗೂ ಹೃದಯದ ಆರೋಗ್ಯ ಕಾಪಾಡಲು ಇಲ್ಲಿದೆ ಸುಲಭ ಪರಿಹಾರ
08/11/2020
ದೇಹದ ಅಧಿಕ ತೂಕ ಹಾಗೂ ಹೃದಯದ ಆರೋಗ್ಯ ಸದ್ಯ ಜನರನ್ನು ಚಿಂತೆಗೀಡು ಮಾಡುತ್ತಿರುವ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ದಡೂತಿ ದೇಹ ಹೊಂದಿ, ಮುಜುಗರಕ್ಕೀಡಾಗುವುದು ಮತ್ತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳಿಗೆ ಸುಲಭವಾದ ಪರಿಹಾರ ಇಲ್ಲಿದೆ.
ತೂಕ ಇಳಿಕೆಗೆ ಸೌತೆ ಕಾಯಿ ತಿನ್ನುವುದು ಬಹಳ ಉತ್ತಮ ಎಂದು ಹೇಳುತ್ತಾರೆ. ಅದರಲ್ಲೂ ಕುಂಬಳ ಕಾಯಿಯನ್ನು ಹೋಲುವ ಚೀನೀಕಾಯಿಯ ಜ್ಯೂಸ್ ಕುಡಿದರೆ, ಆರೋಗ್ಯಕ್ಕೆ ಬಹಳ ಉತ್ತಮ. ಸೂರೆ ಕಾಯಿ ಎಂದೂ ಕರೆಯಲ್ಪಡುವ ಕಾಯಿಯಲ್ಲಿ ವಿಟಮಿನ್ ಸಿ, ಬಿ, ಕೆ, ಎ, ಇ. ಐರನ್, ಫೋಲೇಟ್, ಮೆಗ್ನಿಶಿಯಮ್ ಮತ್ತು ಮೊಟ್ಯಾಶಿಯಮ್ ಪೋಷಕಾಂಶಗಳು ಯತೇಚ್ಚವಾಗಿರುತ್ತದೆ.
ಚೀನೀಕಾಯಿ ಅಥವಾ ಸೂರೆ ಕಾಯಿಯನ್ನು ಕತ್ತರಿಸಿ ಸ್ವಲ್ಪ ಮೆಣಸಿನ ಪುಡಿ, ಒಂದು ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಸಣ್ಣ ತುಂಡು ನಿಂಬೆ ರಸವನ್ನು ಸೇರಿಸಿ ಜ್ಯೂಸ್ ಮಾಡಿ ಕುಡಿದರೆ, ದೇಹದ ಆಯಾಸ, ಶರೀರದ ತೂಕ, ಹೃದಯದ ಆರೋಗ್ಯ, ಉತ್ತಮ ನಿದ್ರೆ ಮತ್ತು ಚರ್ಮದ ಆರೈಕೆಗೂ ಇದು ಬಹಳ ಪ್ರಯೋಜನಕಾರಿಯಾಗಿದೆ.