ಹಂಸಲೇಖರ “ಜೈ ಭೀಮ್” ಅದ್ಭುತ ಹಾಡು | ಓದುತ್ತಿರುವ ಮಂಜುಳಳಿಗೆ ಮದುವೆಯ ಕಿರಿಕಿರಿ | ಬಾಲ ಭೀಮ ಸವಾಲನ್ನು ಹೇಗೆ ಎದುರಿಸುತ್ತಾನೆ? - Mahanayaka

ಹಂಸಲೇಖರ “ಜೈ ಭೀಮ್” ಅದ್ಭುತ ಹಾಡು | ಓದುತ್ತಿರುವ ಮಂಜುಳಳಿಗೆ ಮದುವೆಯ ಕಿರಿಕಿರಿ | ಬಾಲ ಭೀಮ ಸವಾಲನ್ನು ಹೇಗೆ ಎದುರಿಸುತ್ತಾನೆ?

03/11/2020

ಮಹಾನಾಯಕ ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:


Provided by

ಸಂಚಿಕೆ(ಎಪಿಸೋಡ್):34

ವಾರ : ರವಿವಾರ

ಹೋದ ಶನಿವಾರ ಜೀ ವಾಹಿನಿಯಲ್ಲಿ ಮಹಾನಾಯಕ ಧಾರಾವಾಹಿ ಪ್ರಸಾರವಾಗಲಿಲ್ಲ. ಇದರಿಂದ ರಾಜ್ಯದ ಅನೇಕರು  “ನಮ್ಮ ರಾಷ್ಟ್ರನಾಯಕ ಭೀಮರಾವ್  ಅಂಬೇಡ್ಕರ ಸಾಹೇಬ್ರ ಕುರಿತಾದ “ಮಹಾನಾಯಕ” ಧಾರಾವಾಹಿಯನ್ನು ನಿಲ್ಲಿಸಿದ್ರೇನೋ ಎಂಬ ಹತಾಶೆಯಲ್ಲಿ ನಮ್ಮ ಪ್ರೇಕ್ಷಕರ ಎದೆ ಒಂದು ಸಲ ಜಲ್ ಎಂದು ನಡುಗಿದ್ದುಂಟು.

ಇವತ್ತು ಮಹಾನಾಯಕ ಧಾರಾವಾಹಿ ಪ್ರಸಾರವಾಗುವುದಿಲ್ಲ.ಆದರೆ ಸೇಮ್ ಅದೇ ಸಂಜೆ ಸಮಯದಲ್ಲಿ ಇವತ್ತು ಜೀ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ಇರುತ್ತದೆ. ಬಾಬಾಸಾಹೇಬ ಧಾರಾವಾಹಿಗೆ ಅತ್ಯುತ್ತಮ ಡಬ್ಬಿಂಗ್ ಅವಾರ್ಡ್ ಬಂದಿರುವುದನ್ನು ನೋಡಿ ಕಣ್ತುಂಬಿಕೊಳ್ಳಿ ಎಂಬ ಮಾಹಿತಿ ಸಿಕ್ಕಿತು. ಇದರಿಂದ ಎಲ್ಲ ಪ್ರೇಕ್ಷಕರೂ ಫುಲ್ ಖುಷಿಯಾದರು.


ಮತ್ತೂ ಜೀ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ಶುರುವಾಯಿತು. ಮಹಾನಾಯಕ್ ಡಬ್ಬಿಂಗ್ ಅವಾರ್ಡ ಕೊಡುವ ಸಮಯ ಬಂದಾಗ ಎಲ್ಲ ಪ್ರೇಕ್ಷಕರು, ವಾಹಿನಿಯೊಳಗೂ ಮತ್ತೂ  ಹೊರಗೂ ಇಲ್ಲಿ ಮನೆಯೊಳಗೂ ಚಪ್ಪಾಳೆ, ಸಿಳ್ಳೆಗಳ  ಸುರಿಮಳೆ..

ಮತ್ತೂ ಹಂಸಲೇಖರೆ ರಚಿಸಿದ ಬಾಬಾಸಾಹೇಬರ ಕುರಿತಾದ ಹಾಡು, ಪ್ರಕಾಶ ರವರ ಸುಂದರ ಕಂಠಸಿರಿಯಲ್ಲಿ ಅದ್ಬುತವಾಗಿ ಮೂಡಿ ಬಂದಿದ್ದು, ಹುಚ್ಚೆದ್ದು, ಆನಂದಭರಿತವಾಗಿ ಕುಣಿದಾಡಿದರು.


 

 ಜೈ ಜೈ ಭೀಮ್ ಜೈಜೈ ಭೀಮ

ಜೈ…ಭೀಮ್.. ಜೈ.. ಭೀಮ್…

ಉತ್ತುಂಗದಲಿ ಉರಿಯೋ ಸೂರ್ಯನೋ..,

ನೀನು ದನಿಯಿಲ್ಲದವರ ಧೈರ್ಯವೋ..,

ನೀಲಿ ಅಂದ್ರೇ ನೀತಿಯೋ..,

ಜೈಭೀಮ್ ಅಂದ್ರೇ ನಿರ್ಭಿತಿಯೋ..,

ಕಾನೂನಿನ ಮಾನ ಮುಚ್ಚೋ ಬಟ್ಟೆ ನೇಯ್ದವ…

ಜಾತಿ ಜ್ವಾಲೆ ಹಾರಿಸಲು ಹಾಲು ಸುರಿದವ…

ಮನೆ ಒಡೆಯುವ ಕುತಂತ್ರಿಗಳ ಕಾಲು ಮುರಿದವ…

ಗುಳ್ಳೆ ನರಿಗಳ ಚರ್ಮ ಸುಲಿದವ…

ಜೈ ಜೈ ಭೀಮ ಜೈ ಜೈಭೀಮ್..

ಖಡ್ಗ ಹಿಡಿದು ಬಿಸಲಿಲ್ಲ..

ಬಡತನಕ್ಕಂಜೀ ಕೂರಲಿಲ್ಲ..

ನೀನು ಓದಿ ಸಾಣೆ ಹಿಡಿದ ಶಸ್ತ್ರಗಳು..

ಅವು ಕಳಚಿಕೊಂಡವಯ್ಯ ಎಲ್ಲ ಮುಸುಕುಗಳು..

ಯೋಗವೆಂದು ಯೋಗ್ಯವೆಂದು ಅಸ್ಪೃಶ್ಯತೆ ಸಹಜವೆಂದು…

ವಾದಿಸುವ ವೇಧಿಗಳ ಕೂಟ …

ನಿನ್ನ ವಾದಕ್ಕಂಜಿ ಕಿತ್ತವಯ್ಯ ಓಟ..,

ನಿನ್ನ ವಾದಕ್ಕಂಜಿ ಕಿತ್ತವಯ್ಯ ಓಟ..,

ಜಾತಿ ಮತಗಳೆಲ್ಲ ಹೇಯ…

ಸಮತೆಯೊಂದ ನಮ್ಮ ದ್ಯೇಯ…

ಎಂದು ನೀನು ಹೇಳಿಕೊಟ್ಟ ನ್ಯಾಯ…

ಅದೂ ಅಳಿಸಿತಯ್ಯ ಅಹಮ್ಮಿನ ಹಳೆಯ ಅದ್ಯಾಯ…

ಈ ಅದ್ಭುತ ಹಾಡಿನೊಂದಿಗೆ ಹಂಸಲೇಖರವರ ಅದ್ಬುತವಾದ ಮಾತುಗಳು

“ಬುದ್ಧ ದೊಡ್ಡ ಕ್ರೀಡಾಂಗಣ ಆರಂಭಿಸಿದರು, ಬಸವಣ್ಣ ಆಟ ತೋರಿಸಿಕೊಟ್ಟರು ಮತ್ತೂ

ಅಂಬೇಡ್ಕರವರು ಬಂದು ಆಟದ ಬಗ್ಗೆ ಕಾನೂನು ಬರೆದುಕೊಟ್ಟರು”.

ಆದರೆ ಅಂಬೇಡ್ಕರ್ ಸಾಹೇಬರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದು ಸಾಕು ಆ ಹಣೆ ಪಟ್ಟಿನ ಕಳಚಿ ಬಾಬಾ ಸಾಹೇಬರನ್ನು ಸ್ವತಂತ್ರವಾಗಿ ಬಿಡಿ ಎಂದು ಎಂದು ತೋರಿಸಿಕೊಟ್ಟಿದೆ…”.

ಇದೇ ಹಾಡಿನ ಹಾಗೂ ಹಂಸಲೇಖ ಸರವರ ಅದ್ಬುತ ಮಾತುಗಳ ಗುಂಗಿನಲ್ಲಿ ನಮ್ಮ ಪ್ರೇಕ್ಷಕರೂ ಭಾನುವಾರದ ಮಹಾನಾಯಕ ಧಾರಾವಾಹಿಯನ್ನು ಇನ್ನೂ ಉತ್ಸಾಹದಿಂದ ನೋಡತೊಡಗಿದರು.


33ನೇ ಸಂಚಿಕೆಯಲ್ಲಿ ಈಗಾಗಲೇ ಶೇಡಜಿ ಬೆಂಬಲದೊಂದಿಗೆ ಮನುವಾದಿಗಳು ಭೀಮರಾವ್ ಹಾಗೂ ಮನೆಯ ಎಲ್ಲ ಸದಸ್ಯರ ಕುತ್ತಿಗೆಗೆ ಮಡಿಕೆ ಹಾಗೂ ಸೊಂಟಕ್ಕೆ ಪೊರಕೆ ಕಟ್ಟಿ ಊರಿನಲ್ಲಿ ತಿರುಗಾಡಿಸಿ ಅವಮಾನ ಮಾಡುವ ದುರುದ್ದೇಶದಿಂದ ಅವರ ಸ್ವಾಭಿಮಾನಕ್ಕೆ ದಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಕಾಡಿನಲ್ಲಿ ಭೀಮನನ್ನು ಹುಡುಕಿಕೊಂಡು ಹೊರಟ ಆನಂದನನ್ನು ಹಿಡಿದು ಪೊರಕೆ ಹಾಗೂ ಮಡಿಕೆ ಕಟ್ಟಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಇದ್ದಕ್ಕೆ ಸಾಕ್ಷಿಯಾಗಿ ಭೀಮನ ಸ್ನೇಹಿತ ದ್ರುವ ಕೂಡ ಇದ್ದು ಪ್ರತಭಟನೆ ಮಾಡಿದರೂ ಜಗ್ಗದ ಮನುವಾದಿಗಳು ಇನ್ನೇನೂ ಆನಂದನ ಕೊರಳಿಗೆ ಮಡಿಕೆ ಹಾಕಲು ಮುಂದಾದಾಗ, ಅದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ರಾಮಜೀಯವರ ಆಪ್ತಮಿತ್ರ ಪುರಂಜನ ಅಲ್ಲಿಗೆ ಬಂದು ಆನಂದ್ ಹಾಗೂ ದ್ರುವನನ್ನು ಆ ಮನುವಾದಿಗಳ ಕಪಿ ಮುಷ್ಟಿಯಿಂದ ಬಿಡುಗಡೆ ಮಾಡುತ್ತಾನೆ. ಆದ್ರೆ ಆ ಮನುವಾದಿಗಳು, ಈಗ ಪುರಂಜನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ. ಮುಂದುವರೆದು ಆನಂದ ಹಾಗೂ ದ್ರುವ ಅಲ್ಲಿಂದ ತಪ್ಪಿಸಿಕೊಂಡು ಪುರಂಜನ, ಜನಾಂಗದವರ ಬಳಿ ಬರುತ್ತಾರೆ. ಮತ್ತೂ ಅದೇ ಸಮಯದಲ್ಲಿ ಅಲ್ಲಿ ಭೀಮರಾವ್ ಕೂಡ ಆ ಜನಾಂಗದವರ ಬಳಿ ಇರುತ್ತಾನೆ. ನಡೆದ ವಿಷಯವನ್ನು, ಆನಂದ ಹೇಳುವಲ್ಲಿಗೆ 33 ನೇ ಸಂಚಿಕೆಯ ಮುಗಿದಿತ್ತು.


ಇವತ್ತು 34ನೇ ಸಂಚಿಕೆಯಲ್ಲಿ ಮತ್ತದೇ ಜಾತಿವಾದಿಗಳ ದೌರ್ಜನ್ಯ ಮುಂದುವರೆದಿದೆ. ಆನಂದ್ ಹಾಗೂ ಭೀಮರಾವ ಇವರನ್ನು ಹುಡುಕಿಕೊಂಡು ಪುರಂಜನ ಜನಗಳು ಇರುವ ಕಾಡಿನೆಡೆ ಮನುವಾದಿಗಳು ಕೋಪದಿಂದ  ಹೋಗುತ್ತಾರೆ.  ಮತ್ತೂ ಇವರನ್ನು ನೋಡಿದ ಅಲ್ಲಿನ ಮುಗ್ದ ಜನರು ತುಂಬಾ ಹೆದರುತ್ತಾರೆ. ಅದೇ ಸಮಯಕ್ಕೆ ಅಲ್ಲಿನ ಜನಗಳು ಆನಂದ್, ಭೀಮ ಹಾಗೂ ದ್ರುವನನ್ನು ಒಬ್ಬಾತ ತನ್ನ ಮನೆಯೊಳಗೇ ಬಚ್ಚಿ ಇಡುತ್ತಾನೆ.* ಅಲ್ಲಿಗೆ ದೌಡಾಯಿಸಿ ಬಂದ ಶೇಡಜಿ”ಎ ಇಲ್ಲಿ ಅ ಭೀಮನ ಅಣ್ಣ ಆನಂದ ಹಾಗೂ ನನ್ನ ಮಗ ದ್ರುವ ಬಂದಿದ್ದು ನೋಡಿದ್ದಿರೇನ್ರೋ”. ಎಂದು ಏರು ಧ್ವನಿಯಲ್ಲಿ ಅದೇ ವ್ಯೆಕ್ತಿ ಕಡೆಗೆ ನೋಡಿ ಕೇಳುತ್ತಾನೆ. ಆಗ ಆತನು “ಇಲ್ಲ ಅವರಾರು ಇಲ್ಲಿಗೆ ಬಂದಿಲ್ಲ ” ಎಂದನು. ಸಿಟ್ಟಿಗೆದ್ದ ಚಹ ಮಾರುವ ಮಂಗೇಶ “ನೀವೆಲ್ಲ ಇತ್ತೀಚೆಗೆ ಬುದ್ದಿ ಉಪಯೋಗ ಮಾಡುತ್ತಿದ್ದೀರಿ, ತುಂಬಾ ಹೆಚ್ಚಕೊಂಡು ಬಿಟ್ಟಿದ್ದೀರಿ ನಮಗೆ ಎಲ್ಲ ಗೊತ್ತಾಗುತ್ತದೆ”. ಎಂದು ಹೇರು ಧ್ವನಿಯಲ್ಲಿ ಗದರುತ್ತಾ ಹೇಳುತ್ತಾನೆ. ಆಗ ಈ ಕಾಡಿನ ಜನರು “ನಿಮಗೆ ಸಮಾದಾನವಾಗದಿದ್ದರೆ ನೀವೇ ನಮ್ಮ ಮನೆಯಲ್ಲಿ ಹೋಗಿ ನೋಡಿ ಎನ್ನುತ್ತಾರೆ. ಒಳಗೆ ಬಂದ್ರೆ ನಮ್ಮ ಗತಿ ಏನೂ ಎಂದು ಆನಂದ ಭಯಬೀಳುತ್ತಾನೆ. ಭೀಮ “ಅವರು ನಮ್ಮ ಮನೆಯೊಳಗೆ ಬರುವುದಿಲ್ಲ “ಎಂದು ಹೇಳುತ್ತಾನೆ.


ನೋಡಿ ಆ ಸಣ್ಣ ವಯಸ್ಸಿನಲ್ಲಿಯೇ ಭೀಮರಾವ ಆ ಜನಗಳ ಕೊಳಕು ಮನಸ್ಥಿತಿಯನ್ನು ಎಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅದಿರಲಿ ಬಿಡಿ.

ಆಗ ಮತ್ತದೇ ಮಂಗೇಶ “ಆಚಾರ್ಯರಿಗೆ ನಾವು ಇವರ ಮನೆಯೊಳಗೇ ಹೋಗಲು ಆಗದು. ಏಕೆಂದರೆ ಇವರು ಕೀಳು ಜನರು. ಆದರೆ ಇವರ ಮನೆಗೆ ಬೆಂಕಿ ಇಡಬಹುದಲ್ಲವಾ..? ಎಂದು ಹೇಳುತ್ತಾನೆ. ತಕ್ಷಣ ಅಲ್ಲಿನ ಎಲ್ಲರೂ ಭಯಭೀತರಾಗುತ್ತಾರೆ. ಮತ್ತೂ ವರ್ತಕ ಶೇಡಜಿ ಕೂಡ ಮತ್ತ್ಯಾಕೆ ತಡ ಬೆಂಕಿ ಹಚ್ಚಿ ಎಂದು ಆದೇಶ ಕೊಡುತ್ತಾನೆ. ಇನ್ನೇನೂ ಭೀಮ,  ಆನಂದ,  ದ್ರುವ ಇರುವ ಮನೆಗೆ ಬೆಂಕಿ ಹಚ್ಚಬೇಕೆನ್ನುವಷ್ಟರಲ್ಲಿ ಮತ್ತದೇ ಶೇಡಜಿ “ಏ ನಿಲ್ಲಿ, ಅಕಸ್ಮಾತ್ ನನ್ನ ಮಗ ದ್ರುವ ಅವರ ಜೊತೆಗೆ ಇದ್ದರೆ ಅವನು ಸಾಯುತ್ತಾನೆ ಬೆಂಕಿ ಹಚ್ಚೋದು  ಬೇಡ “. ಎಂದು ಹೇಳುತ್ತಾನೆ. ಆಗ ಆ ಮನುವಾದಿಗಳಲ್ಲೊಬ್ಬ “ಹಾಗಾದ್ರೆ ನಿಮ್ಮ ಮಗ ಈ ಕೀಳು ಜಾತಿಯ ಜನರೊಂದಿಗೆ ಸೇರಬಾರದಾಗಿತ್ತು ನಿಮ್ಮ ಮಗ ಅವರ ಜೊತೆಗೆ ಇದ್ದರೆ ನಿಮ್ಮನ್ನು ಸಮಾಜದಿಂದ ಹೊರಗೆ ಹಾಕಬೇಕಾಗುತ್ತದೆ ಹುಷಾರು ಎನ್ನುತ್ತಾne”. ಆದ್ರೆ ಇನ್ನೂ ಚಿಕ್ಕ ಹುಡುಗ ಎಂದು ಶೇಡಜಿ ಸಮರ್ಥನೆ ಮಾಡಿಕೊಂಡು, ಕಾಡಿನ ಎಲ್ಲ ಜನರಿಗೂ ಎಚ್ಚರಿಕೆ ಕೊಟ್ಟು ಹೊರಟು ಹೋಗುತ್ತಾರೆ.


ಇಲ್ಲಿ ನಾವು ಯೋಚಿಸಬೇಕಾದುದು ಏನೆಂದರೆ ಮನುವಾದಿಗಳು ಹೀಗೆ ಒಂದು ಜನಾಂಗದವರ ಮೇಲೆ ದಬ್ಬಾಳಿಕೆ ತೋರಲು ಕೇವಲ ಅವರ ಜಾತಿ ಮಾತ್ರ ಕಾರಣವಾಗುತ್ತದೆಯಾ..? ಜಾತಿಯು ಹೌದಾದ್ರೂ ಅದರ ಜೊತೆಗೆ ಬಡತನ, ಅನಕ್ಷರತೆ, ಅಜ್ಞಾನ, ಭಯ ಇವೆಲ್ಲವೂ ಕಾರಣವಾಗುತ್ತವೆ. ಈ ಕಾರಣದಿಂದಾನೆ ಪ.ಜಾ./ಪ.ಪಂ. ಹಿಂದುಳಿದವರು ಹಾಗೂ ಹೆಣ್ಣುಮಕ್ಕಳು ಈ ಎಲ್ಲ ಜನಾಂಗದವರನ್ನು ಕೂಡ ಶಿಕ್ಷಣವೂ ಸೇರಿದಂತೆ , ಇನ್ನಿತರೇ ಕ್ಷೇತ್ರಗಳಿಂದ ಶತ ಶತಮಾನಗಳಿಂದ ದೂರವಿಟ್ಟಿದ್ದರು.

ಈಗ ಶೇಡಜಿ ಹಾಗೂ ಆತನ ಅಜ್ಞಾನಿ ಬೆಂಬಲಿಗರು ಒಂದು ವೇಳೆ ನಮ್ಮ ಹುಡುಗನನ್ನು ನೀವೇ ಬಚ್ಚಿಟ್ಟಿದ್ದು ಅಂತಾ ಗೊತ್ತಾದ್ರೆ ನಿಮ್ಮನ್ನು ಸಾಯಿಸಿ ಬೀದಿಗೆ ಬಿಸಾಕ್ತಿವಿ ಎಂದು ಎಚ್ಚರಿಕೆ ಕೊಟ್ಟು ಹೊರಟು ಹೋದ,  ತಕ್ಷಣ ಭೀಮರಾವ ಹಾಗೂ ಆನಂದ, ದ್ರುವ ಎಲ್ಲರೂ ಅಲ್ಲಿನ ಸಂಭಾವಿತ ಜನಗಳಿಗೆ ಧನ್ಯವಾದಗಳನ್ನು ಸಲ್ಲಿಸಿ ಮತ್ತೂ ಪುರಂಜನನನ್ನು ನೋಡಲು ಅಲ್ಲಿನ ಕೆಲವರೊಂದಿಗೆ ಓಡಿ ಹೋಗುತ್ತಾರೆ.


ಇತ್ತ ಭೀಮಾಬಾಯಿ ಇವತ್ತು ಕೂಡ ಆ ಶ್ರೀಮಂತನ ಮನೆಯ ಹೊರಗೆ ದನಗಳ ಸೆಗಣಿ ತುಂಬಿ ದೂರದ ಜಮೀನಿನಲ್ಲಿ ಹಾಕಿ ಬರುತ್ತಾರೆ. ಮಾತು ಆ ಮನೆಯ ಯಜಮಾನ ಈಗ ಭೀಮಾಬಾಯಿಯವರಿಗೆ ಒಂದೆರಡು ಚಿಲ್ಲರೆ ನಾಣ್ಯೇಗಳನ್ನು ಕೊಟ್ಟು ಮತ್ತೆ ಸಂಜೆ ಕೆಲಸಕ್ಕೆ ಬರುವಂತೆ ಹೇಳಿ ಕಳಿಸುತ್ತಾನೆ. ಈಗ ತುಂಬಾ ಸುಸ್ತಾಗಿದ್ದ ಭೀಮಾಬಾಯಿಯವರು ಮನೆಯ ಕಡೆ ಹೊರಡುತ್ತಾರೆ.  ಹೋಗುವಾಗ ದಾರಿಯಲ್ಲಿ ಆಗಿನ ಪದ್ದತಿಯಂತೆ ಮಧುವನಗಿತ್ತಿಯನ್ನು ಎತ್ತಿನ ಬಂಡೆಯೊಳಗೆ ಕರೆದುಕೊಂಡು ಕೆಲವರು ಹೋಗುತ್ತಿರುತ್ತಾರೆ. ಅದೇ ಸಮಯಕ್ಕೆ ಇಬ್ಬರೂ ಪುರುಷರು ಭೀಮಾಬಾಯಿಯವರಿಗೆ ಇಲ್ಲಿ ನಮಗೆ ಕುಡಿಯಲು ನೀರು ಎಲ್ಲಿ ಸಿಗುತ್ತದೆ ಹೇಳಿ..? ಮತ್ತೂ ಮೇಲ್ಜಾತಿಯವರ ನೀರು ಬೇಡ ನಮ್ಮ ಜನಾಂಗದವರು ಕುಡಿಯುವ ನೀರು ಎಲ್ಲಿ ಸಿಗುತ್ತದೆ ಹೇಳಿ ಎನ್ನುತ್ತಾರೆ. ನೋಡಿ ಈ ಮಾತುಗಳು ಅಲ್ಲಿನ ಈಗಿನ ನಮ್ಮ ಮಕ್ಕಳುಗಳಿಗೆ ಬಹುಷಃ ಗೊತ್ತಾಗಲಿಲ್ಲ ಅನ್ನಿಸುತ್ತದೆ ಒಬ್ಬರ ಮುಖವನ್ನೂ ಒಬ್ಬರು ನೋಡಿಕೊಳ್ಳುತ್ತಿದ್ದರು. ಅದೇ ಅವಾಗ ದಲಿತರು ಎಲ್ಲೆಂದರಲ್ಲಿ ನೀರು ಕುಡಿಯುವದನ್ನು ಸವರ್ಣಿಯರು ನಿರ್ಬಂಧ ಹೇರಿದ್ದರು. ಎಲ್ಲೋ ಕೆಲವೇ ಕೆಲವು ಕಡೆ ಮಾತ್ರ ಅದೂ ಗಲೀಜು ಇರುವ ಕಡೆ ದಲಿತರಿಗೆ ಕುಡಿಯುವ ಕಲಕು ನೀರು ಸಿಗ್ತಿತ್ತು. ಎಷ್ಟೋ ದಲಿತರು ಅವಾಗ ಕುಡಿಯಲು ನೀರು ಸಿಗದೇ ನರಳಾಡಿ ಸತ್ತು ಹೋಗಿದ್ದು ಉಧಾಹರಣೆಗಳಿವೆ. ಇದು ನಮ್ಮ ಈಗಿನ ಪೀಳಿಗೆಗೆ ಗೊತ್ತಿಲ್ಲ. ಏಕೆಂದರೆ ಅಂಬೇಡ್ಕರ್ ಸಾಹೇಬ್ರು ನಮನ್ನು ಅಂತಾ ಕೆಟ್ಟ ಪರಿಸ್ಥಿತಿಯಿಂದ ಯಾವತ್ತೋ ಪಾರು ಮಾಡಿ ಹೋಗಿದ್ದಾರೆ. ಆದರೆ ಬಹುತೇಕ ಹಳ್ಳಿಗಳಲ್ಲಿ ಕಾನೂನಿಗೆ ಮಣ್ಣೆರಚಿ ಕುಡಿಯುವ ನೀರಿಗೂ ಭೇದಭಾವ ತೋರುವ ಪದ್ಧತಿ ಇನ್ನೂ ಜೀವಂತವಾಗಿರುವುದು ದುರದೃಷ್ಟ.


ಸರಿ ಭೀಮಾಬಾಯಿಯವರು ಅವರಿಗೆ ತಮ್ಮ ಜನಾಂಗದವರಿಗಾಗಿ ಇದ್ದ ಕುಡಿಯುವ ನೀರಿನ ಜಾಗವನ್ನು ತೋರಿಸುತ್ತಾರೆ. ಮತ್ತೂ ಆ ಬಂಡೆಯಲ್ಲಿರುವ ಮಧುವನಗಿತ್ತಿ ಗೆ ಮಾಡಿರುವ ಬಾಹ್ಯ ಅಲಂಕಾರ ನೋಡಿ. ಅದರೊಳಗೆ ತಮ್ಮ ಮಗಳು ತಮಂಜುಳಾ  ಇರುವಂತೆಯೂ ಮತ್ತೂ ಮದುಮಗಳಾಗಿದ್ದ ಮಂಜುಳಾ  ತಮ್ಮನ್ನು “ಅಮ್ಮ” ಎಂದು ಸಡಗರದಿಂದ ಕೂಗಿದಂತೆಯೂ ಭಾವಿಸಿಕೊಂಡು ಖುಷಿ ಪಡುತ್ತಾರೆ. ಯಾವ ತಾಯಿಗೆ, ಬೆಳೆಯುತ್ತಿರುವ ತಮ್ಮ ಹೆಣ್ಣುಮಕ್ಕಳ ಮದುವೆ ಬಗ್ಗೆ ಚಿಂತೆ ಇರುವುದಿಲ್ಲ ನೀವೇ ಹೇಳಿ..? ಆದ್ರೆ ಒಂದು ಕ್ಷಣ ಭೀಮಾಬಾಯಿಯವರು ಮತ್ತೆ ಭ್ರಮೆಯಿಂದ ಹೊರಗೆ ಬರುತ್ತಾರೆ. ಮತ್ತೂ ನಾನು ಬದುಕುವದು ಇನ್ನೂ ತುಸು ದಿನ ಮಾತ್ರ ಅಷ್ಟರಲ್ಲಿ ಹೆಣ್ಣುಮಕ್ಕಳ ಮದುವೆ ಮಾಡಿ ಕಣ್ಣತುಂಬಿಕೊಳ್ಳಬೇಕು ಎಂದು ಬಯಸುತ್ತಾರೆ. ಆದ್ರೆ ಕೆಲಸ ಮಾಡಿ ಅವರು ಧಣಿದಿದ್ದರಿಂದ ಸುಸ್ತಾಗಿ ಮರದ ಕೆಳಗೆ ಕೂತುಕೊಳ್ಳುತ್ತಾರೆ. ಅದೇ ಸಮಯಕ್ಕೆ ಭೀಮ, ಆನಂದ್ ಹಾಗೂ ಕಾಡಿನ ತಮ್ಮ ಜನರು ಅಲ್ಲಿಗೆ ಬರುತ್ತಾರೆ. ಭೀಮ್ “ಅಮ್ಮ ನೀನು ಇಲ್ಲಿ ಯಾಕೆ ಬಂದಿದ್ದು” ಎಂದು ಕೇಳಿದಾಗ, ವೈದ್ಯೆರ ಹೇಳಿಕೆಯಂತೆ ಸುತ್ತಾಡಲು ಎಂದು ಸುಳ್ಳು ಹೇಳುತ್ತಾರೆ. ಆಗ ನಡೆದ ವಿಷಯ ಭೀಮ ಹೇಳಿ ಅವರನ್ನು ಕರೆದುಕೊಂಡು ಪುರಂಜನ ಕಡೆ ಹೊರಡುತ್ತಾರೆ.


ಇಲ್ಲಿ ರಾಮಜೀಯವರು ಕೆಲಸ ಮಾಡುವಲ್ಲಿ ಸ್ವಂತಂತ್ರ ಹೋರಾಟಗಾರರು ಮಾಲೀಕರಿಗೆ “ನೋಡಿ ಸಾಹುಕಾರೆ, ಪರಂಗಿಗಳ ವಿರುದ್ಧ ನಮ್ಮ ಹೋರಾಟ ಮತ್ತಷ್ಟು ಪ್ರಬಲವಾಗಿದೆ. ಬ್ರಿಟಿಷರ ಪರವಾಗಿ ಕೆಲಸ ಮಾಡುವವರನ್ನು ಮತ್ತು ಮಾಡಿದವರನ್ನು ಹುಡುಕಿ ಕೊಲ್ಲುತ್ತೇವೆ” ಎಂದು ಆವೇಶ ಭರಿತವಾಗಿ  ಹೇಳುತ್ತಾನೆ. ಅಲ್ಲಿಯೇ ಇದ್ದ ರಾಮಜೀಯವರು ಇದು ತಪ್ಪು ಕೆಲಸ ಅಲ್ವಾ..? ಅಂದ್ರೇ ಜೀವ ತೆಗೆಯೋ ಕೆಲಸ ತಪ್ಪಲ್ವಾ..? ಎಂದಾಗ ಆ ಕ್ರಾಂತಿಕಾರಿ ” ಪರಂಗಿಗಳ ಜೊತೆ ಕೆಲಸ ಮಾಡುವವರು ದೇಶದ್ರೋಹಿಗಳು ಎಂದು ಸಮರ್ಥನೆ ಮಾಡಿಕೊಳ್ಳುವಾಗ, ರಾಮಜೀಯವರು ಈಗಾಗಲೇ ಅವರ ಕೈ ಕೆಳಗೆ ಕೆಲಸ ಮಾಡಿದ್ದವರು ಕೂಡ ಈಗ ಬ್ರಿಟಿಷರನ್ನು ವಿರೋದಿಸಬಹುದಲ್ಲವೇ.. ” ಎಂದು ಹೇಳುವಾಗ  ಮಾಲಿಕ ರಾಮಜಿಯವರನ್ನು ತಡೆಯಲು ಹೋಗುತ್ತಾರೆ. ಆಗ ಆ ಕ್ರಾಂತಿಕಾರಿ ಇರಿ ಸಾಹುಕಾರ್ರೇ ಇಂತಹ ಯೋಚನೆ ಬದಲಾಯಿಸಬೇಕು ಎನ್ನುತ್ತಾ “ಪರಂಗಿ ಕೈ ಕೆಳಗೆ ಕೆಲಸ ಮಾಡೋರು ದೇಶ ದ್ರೋಹಿಗಳು ಅಲ್ಲವೆಂದು ಹೇಗೆ ಹೇಳುತ್ತೀರಾ..?” ಕೇಳುತ್ತಾನೆ. ರಾಮಜೀಯವರು “ತಮ್ಮ ಹೆಂಡತಿ ಮಕ್ಕಳು ಮತ್ತೂ ಸಂಸಾರ ನಡೆಸುವ ಸಲುವಾಗಿ ಕೆಲಸ ಮಾಡಿದ್ದರೆ ತಪ್ಪೇನು ಎಂದು ಕೇಳುತ್ತಾರೆ. ಆಗ ಆ ಕ್ರಾಂತಿಕಾರಿ ಹೆಂಡತಿ ಮಕ್ಕಳ ಸಲುವಾಗಿ ಅವರ ಗುಲಾಮರಾಗಿ ಕೆಲಸ ಮಾಡುವುದಕ್ಕಿಂತ ಅವರನ್ನು ಸಾಯಿಸುವುದೇ ಮೇಲೂ ಎಂದು ಕೋಪಗೊಳ್ಳುತ್ತಾನೆ. ಈಗ  ಚಿಕ್ಕೆಜಮಾನ್ರು ಹೇಗೋ ಸಮಾಧಾನಿಸಿ ಕ್ರಾಂತಿಕಾರಿಗೆ ಸಮಾಧಾನ ಮಾಡಿ ವಂದೇ ಮಾತರಂ ಹೇಳಿ ಕಳಿಸುತ್ತಾರೆ. ಮತ್ತೂ ರಾಮಜೀಯವರಿಗೂ ಕೂಡ ವಂದೇ ಮಾತರಂ ಹೇಳುವಂತೆ ಆ ಕ್ರಾಂತಿಕಾರಿ ಹೇಳಿದಾಗ ರಾಮಜೀಯವರು ತುಂಬಾ ಗಟ್ಟಿಯಾಗಿ ಮತ್ತೂ ಖುಷಿಯಾಗಿ ವಂದೇ ಮಾತರಂ ಎಂದು ಹೇಳುತ್ತಾರೆ. ಏಕೆಂದ್ರೆ ಅವರಿಗೆ ದೇಶ ಪ್ರೇಮ ರಕ್ತಗತವಾಗಿ, ಹುಟ್ಟಿನಿಂದಲೇ ಬಂದಿರುತ್ತದೆ. ಈ ಕ್ರಾಂತಿಕಾರಿಗಳ ಹೋರಾಟ ಇನ್ನೂ ಪ್ರಬಲವಾಗಬೇಕು ಎಂಬುದು ರಾಮಜೀ ಸಕ್ಪಾಲರ ಅಭಿಮತವಾಗಿತ್ತು.


ಇತ್ತ ಭೀಮ ಹಾಗೂ ಎಲ್ಲರೂ  ಪುರಂಜ ಇರುವೆಡೆ ಬರುತ್ತಾರೆ.   ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುರಂಜನನನ್ನು ಎತ್ತಿಕೊಂಡು ಕರೆದೊಯುತ್ತಾರೆ.

ಗಂಡನ ಮನೆಯಲ್ಲಿರುವ ಗಂಗಾಳ ಮನೆಯ ಪಕ್ಕದ ಮನೆಗೆ ಹೋಗುತ್ತಿರುವ ಒಬ್ಬರು ಭೀಮಾಬಾಯಿಯವರ ಬಳಿ ಬಂದು ನಿಮ್ಮ ಗಂಗಕ್ಕಳಿಗೆ ಏನಾದ್ರೂ ಹೇಳಬೇಕಾಗಿತ್ತಾ..? ಎಂದು ಕೇಳಿದಾಗ ಭೀಮಾಬಾಯಿಯವರು ಹೌದು ನಮ್ಮ ಮಂಜುಳಾಗೆ ಒಂದು ಗಂಡು ನೋಡೋಕೆ ಹೇಳಿ ಎಂದು ಹೇಳಿ ಕಳಿಸುತ್ತಾರೆ.

ಇಲ್ಲಿ ಪುರಂಜನ ಹಾಸಿಗೆಯಲ್ಲಿ ಮಲಗಿದ್ದಾನೆ. ಈಗ ತುಸು ಸುಧಾರಿಸಿಕೊಂಡಿದ್ದಾರೆ ಮತ್ತೂ ಅಲ್ಲಿ ರಾಮಜೀ ಸಕ್ಪಾಲರು ಭೀಮ ಎಲ್ಲರೂ ಇದ್ದಾರೆ. ಅಲ್ಲಿ ರಾಮಜೀಯವರು ಪುರಂಜನ ಆರೋಗ್ಯವನ್ನು ವಿಚಾರಿಸುತ್ತಾರೆ. ಮತ್ತೂ ನನ್ನ ಮಗ ಮತ್ತೂ ನನ್ನ ಮನೆತನದ ಗೌರವ ಕಾಪಾಡಿದ್ದೀಯ, ಜಗತ್ತಿನಲ್ಲಿ ನಿನ್ನಂತ ಗೆಳೆಯ ಎಲ್ಲೂ ಸಿಗಲಾರ ಎನ್ನುತ್ತಾರೆ. ಆಗ ಪುರಂಜನ “ನಾನು ಗೆಳೆಯನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಹಾಗೂ ನಾವು ಹೀಗೆಯೇ ಭಯದಿಂದ ದಿನಕ್ಕೆ ನೂರು ಸಲ ಈ ಮನುವಾದಿ ಸವರ್ಣಿಯರಿಗೆ ಹೆದರಿ ಬದುಕಿದ್ದೇವೆ. ಇನ್ನೂ ಮುಂದೆ ನಮ್ಮ ಮುಂದಿನ ಪೀಳಿಗೆ ಇದನ್ನು ಎದುರಿಸಿ ಬಾಳೋದನ್ನು ಕಲಿಸೋಣ” ಎನ್ನುತ್ತಾರೆ ಆಗ ಭೀಮರಾವ ಪೊಲೀಸ್ ಕ್ಯಾಪ್ಟನಗೆ ಮಾಹಿತಿ ಕೊಡೋಣ ಎಂದಾಗ ಪುರಂಜನ ಇದು ಎರಡು ಮೂರು ಹಳ್ಳಿಗಳ ನೋವು ಸಹಿಸಿ ಕೊಳ್ಳೋಣ ಈ ವಿಷಯ ಇಲ್ಲಿಗೆ ಬಿಡೋಣ ಎನ್ನುತ್ತಾರೆ. ಆಗ ರಾಮಜೀಯವರು ಆನಂದನಿಗೆ ಇನ್ನೂ ಮುಂದೆ ಆ ಕೇರಿಕಡೆಗೆ ಹೋಗಬೇಡ ಎಂದು ಹೇಳಿದಾಗ ಆ ಪುರಂಜನನ ಕಾಡಿನ ಜನರು ಕೂಡ ನಾವು ಹೋಗುವುದಿಲ್ಲ ಎನ್ನುತ್ತಾ, ಭೀಮ ಅವತ್ತು ಅವರಿಗೆ ಹೇಳಿದ ಸ್ವಾಭಿಮಾನದ ಮಾತುಗಳನ್ನು ರಾಮಜೀಯವರಿಗೆ ಹೇಳುತ್ತಾರೆ. ಆದ್ರೆ ರಾಮಜೀಯವರು “ಆದ್ರೆ ನೀವೂ ಆ ಕೇರಿಗೆ ಹೋಗದೇ ನೀವೂ ನಿಮ್ಮ ಹೆಂಡತಿ ಮಕ್ಕಳ ಹೊಟ್ಟೆ ಅದೇಗೆ ತುಂಬಿಸಿಕೊಳ್ತೀರಾ ” ಆಗವರ ಬಳಿ ಉತ್ತರ ಇರುವುದಿಲ್ಲ. ರಾಮಜೀಯವರು ಇದಕ್ಕೆ ಪರಿಹಾರ ಹೇಳಬೇಕೆಂದು ಭೀಮನಿಗೆ ಆದೇಶ ಮಾಡುತ್ತಾರೆ. ಭೀಮ್ ಒಂದೇ ದಾರಿಯಲ್ಲಿ ಹೋದ್ರೆ ಬೇರೆ ದಾರಿ ಸಿಗಲಾರದು. ಅದಕ್ಕಾಗಿ ಬೇರೆ ದಾರಿ ಹುಡುಕೋಣ ಎನ್ನತ್ತಾನೆ. ರಾಮಜೀಯವರಿಗೆ ಈ ಉತ್ತರ ಸಮರ್ಪಕ ಅನ್ನಿಸುವುದಿಲ್ಲ. ಹಾಗಾಗಿ ಭಾಷಣ ಮಾಡುವುದು ಸುಲಭ ಆದ್ರೆ ಮಾಡಿ ತೋರಿಸುವುದು ತುಂಬಾ ಕಷ್ಟ ಎಂದು ಬೇಸರದಿಂದ ಹೊರಗೆ ಹೋಗಿ ನಿಲ್ಲುತ್ತಾರೆ. ಮತ್ತೂ ನಾನು ಭೀಮನಿಗೆ ಗದರಬಾರದಿತ್ತು ಎಂದುಕೊಳ್ಳುವಾಗ, ಭೀಮ್ ಬಂದು ಅಪ್ಪನಿಗೆ ಸಮಾಧಾನ ಹೇಳಿ ನನಗೆ ಒಂದು ಪರಿಹಾರ ಹೊಳೆದಿದೆ ಎಂದು ಅಲ್ಲಿನ ಜನಗಳಿಗೆ  “ಆ ನೀವೂ ಯಾರಿಗೂ ಗೊತ್ತಾಗದ ಹಾಗೆ ಅತೀ ಬೇಗನೆ ಎದ್ದು ಬೇರೆ ಊರಿಗೆ ಕೆಲಸಕ್ಕೆ ಹೋಗಿ ಕೆಲಸ ಮಾಡಿರಿ  ಮತ್ತೂ ಅಲ್ಲಿ ನಿಮ್ಮ ಜಾತಿ ಬಾಯಿ ಬಿಡಬೇಡಿ. ನಿಮ್ಮನ್ನು ಗುರುತು ಹಿಡಿಯದ ಕಡೆ ಹೋಗಿ ಕೆಲಸ ಮಾಡಿ. ನೀವೂ ಬೇರೆಯವರ ಹಂಗಿಲ್ಲದೇ ಬದುಕುತ್ತಿದ್ದೀರಾ  ನಿಮ್ಮ ಶ್ರಮದಿಂದ ಬದುಕುತ್ತಿರುವುದು”. ಎಂದು ಹೇಳುತ್ತಾನೆ.


ಆಗ ಒಬ್ಬರು “ನಮ್ಮ ಜಾತಿ ಮುಚ್ಚಿಡುವುದು ತಪ್ಪಲ್ವಾ..?  ಎಂದು ಕೇಳಿದಾಗ, ಭೀಮ ಅದು ತಪ್ಪೇ ಆದರೂ  ನಮ್ಮ ಜಾತಿ ಬಗ್ಗೆ ಅಭಿಮಾನ ಇರಬೇಕು ಅವಮಾನವಲ್ಲ. ಆದರೆ ಇದೇ ಜಾತಿಯಿಂದ ನಮಗೆ ಅವಮಾನವಾಗುತ್ತಿದೆಯಂದರೆ ಅದನ್ನು ಮುಚ್ಚಿಡುವುದೇ ಒಳ್ಳೆಯದು. ನಮ್ಮ ಜಾತಿ ಮುಚ್ಚಿಟ್ಟರೆ ಯಾರಿಗೂ ತೊಂದರೆ ಆಗದು. ನಾವು ಗೌರವವಾಗಿ ಬದುಕೋದಕ್ಕೆ ಹಾಗೆ ಮಾಡ್ತಿದ್ದೀವಿ ಅಷ್ಟೇ”. ಅದಕ್ಕೆ ಇನ್ನೊಬ್ಬ ಕುಲಬಾಂಧವ “ಹಾಗಾದ್ರೆ ನಾವು ಹೀಗೆ ದಿನ ಸುಳ್ಳು ಹೇಳೇ ಬದುಕಬೇಕಾ..? ಕೇಳುತ್ತಾನೆ.

ಭೀಮ “ಇಲ್ಲ ಎಲ್ಲೆಲ್ಲಿ ಜಾತಿಯಿಂದ ಮನುಷ್ಯರನ್ನೂ ಕಾಣುತ್ತಾರೋ ಅಲ್ಲಲ್ಲಿ ಮಾತ್ರ ಹೀಗೆ ಮಾಡಬೇಕು. ಇದರಿಂದ ನಾವು ಮನುಷ್ಯರೆಂದು ಅವರಿಗೆ ಗೊತ್ತಾಗುತ್ತದೆ”. ಭೀಮನ ಈ ಅದ್ಬುತ ವಿಚಾರ ಶಕ್ತಿಗೆ ಎಲ್ಲರೂ ಖುಷಿಯಾಗುತ್ತಾರೆ. ಮತ್ತೂ ಅವರೆಲ್ಲಾ ಭೀಮ, ಜೈಭೀಮ್ ಎಂದು ಉದ್ಘೋಷ ಮಾಡುತ್ತಾರೆ.  ರಾಮಜೀಯವರು ಇದು ಭೀಮನ ಮೊದಲ ಗೆಲವು ಹೀಗೆ ಇನ್ನೂ ನಿನ್ನ ಉನ್ನತ ವಿಚಾರಗಳಿಂದ ಇತಿಹಾಸದ ಪುಟದಲ್ಲಿ ಸೇರುತ್ತೀಯ ಎಂದು ಖುಷಿ ಪಡುತ್ತಾರೆ. ಪುರಂಜನ “ನಾವು ನಮ್ಮ ಜಾತಿಯ ಗೌರವ ಉಳಿಸಿಕೊಳ್ಳಬೇಕು ಮತ್ತೂ ಇದು ಸಾಮಾನ್ಯ ವಿಷಯವಲ್ಲ. ಹಾಗೂ ಭೀಮ ನಮಗೆಲ್ಲರಿಗೂ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿ ಕೊಟ್ಟನು. ಇದರಿಂದ ಒಂದು ದಿವಸ ಬದಲಾವಣೆ ಆಗುತ್ತದೆ. ಇಂತಹ ವಿಚಾರ ಹೇಳಿದ ಭೀಮನನ್ನು ಸನ್ಮಾನ ಮಾಡಬೇಕು” ಎಂದು ಹೇಳುತ್ತಾರೆ. ಅಲ್ಲಿ ಮತ್ತೆ ರಾಮಜೀಯವರು “ಭೀಮನಿಗೆ ಸನ್ಮಾನ ಮಾಡೋದು ಬೇಡ ಏಕೆಂದರೆ ಆತ ಸನ್ಮಾನ ಮಾಡಿಸಿಕೊಂಡು ನಾಯಕನಾಗುವುದು ಬೇಡ ಆತನೊಬ್ಬ ಯೋಧ ಆಗಬೇಕು ಏಕೆಂದರೆ ಯೋಧನಿಗೆ ಗೆಲುವಿನ ಬಯಕೆ ಮತ್ತಷ್ಟು ಇರುತ್ತದೆ”. ಭೀಮನ ಕಡೆ ನೋಡಿದಾಗ ಭೀಮ ಅರ್ಥ ಆಯಿತು ಅಪ್ಪ ಎಂದು ಹೇಳುತ್ತಾನೆ. ಮತ್ತೂ ಅಲ್ಲಿನ ಜನರು “ಆದ್ರೆ ನಮಗೆ ದಾರಿ ತೋರಿದ ಭೀಮನಿಗೆ ಜಯ ಘೋಷ ಮಾಡುತ್ತೇವೆ ಎಂದು ಮತ್ತದೇ “ಭೀಮ ಜೈಭೀಮ್, ಜೈಭೀಮ್… ” ಹೀಗೆ ಘೋಷಣೆ ಮಾಡುವಾಗ ಮತ್ತದೇ ಹಾಡು ಮಹಾನಾಯಕ ಹಾಡು


” ರಾಷ್ಟ್ರ ಸಂವಿಧಾನಕ್ಕೆ ನೀನೇ ಶಿಲ್ಪಿಯೂ..,

ನೀನೇ ಹೇಳಿಕೊಟ್ಟ ಸಮಾನತೆಯು..,

ಮನೆಯಲ್ಲಿ ಮಂಜುಳಾ ಓದುತ್ತಾ ಕುಳಿತಿರುವಾಗ ತಾಯಿ ಭೀಮಾಬಾಯಿ ಬಂದು ಓದಿದ್ದು ಸಾಕು ಮನೆಯಲ್ಲಿ ಕೆಲಸ ಮಾಡು. ಎನ್ನುತ್ತಾರೆ. ಆಗ ಮಂಜುಳಾ ಒಂದೆರಡು ಅದ್ಯಾಯ ಓದಬೇಕು ಎನ್ನುತ್ತಾಳೆ. ಆದ್ರೆ ತಾಯಿ “ಬೇಡ ಮದುವೆಯಾದ ಮೇಲೆ ಕೆಲಸ ಮಾಡೋದೇ ಸಹಾಯಕ್ಕೆ ಬರುತ್ತದೆ. ಎಂದು ಮಗಳನ್ನು ಮನೆಯ ಕೆಲಸಕ್ಕೆ ಹಚ್ಚುತ್ತಾರೆ.

ಭೀಮಾಬಾಯಿಯವರು ತಮ್ಮ ಅರೋಗ್ಯದ ಬಗ್ಗೆ ತುಂಬಾ ಮಾನಸಿಕವಾಗಿದ್ದಾರೆ. ರಾಮಜೀಯವರಿಗೆ ಹೇಳುತ್ತಾರೆ “ನಾನು ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ಈಗಾಗಲೇ ಈ ಕಾಯಿಲೆ ಬಂದು ಒಬ್ಬಳು ಸತ್ತಿದ್ದಾಳೆ” ಹೀಗೆ  ಹೇಳಿ ಅಳುವಾಗ ರಾಮಜೀಯವರು ತುಂಬಾ ದುಃಖ ಹಾಗೂ ಕೋಪದಿಂದ “ಬೇರೆ ಯಾರೋ ಸಾಯಬಹುದು ಆದ್ರೆ ನೀನು ಸಾಯೋದಿಲ್ಲ. ಅದಕ್ಕೆ ನಾನು ಬಿಡೋದಿಲ್ಲ”. ಹೀಗೆ ಹೇಳಿ ಭಾವಾವೇಶಗೊಳ್ಳುತ್ತಾರೆ ಮತ್ತೂ ಮಗುವಿನಂತೆ ಅಳುತ್ತಾರೆ. ಅವಾಗ ಭೀಮಾಬಾಯಿ ನಾನು ಸಾಯೋದಿಲ್ಲ ಎಂದು ಸಮಾಧಾನ ಮಾಡುತ್ತಾರೆ. ಮತ್ತೂ ಮಂಜುಳಾಳ ಮದುವೆ ವಿಷಯ ಮಾತಾಡುತ್ತಾರೆ. ಆಯಿತು ನೋಡೋಣ ಅವಳ ಮದುವೆ ಆಗಬೇಕಿದ್ದರೆ ಆಗುತ್ತದೆ ಎಂದು ಹೇಳಿದರೂ ಕೇಳದೆ ಭೀಮಾಬಾಯಿ ಹಠ ಮಾಡುತ್ತಾರೆ ಅವಾಗ ರಾಮಜೀಯವರು ಆಯಿತು ಮಾಡೋಣ ಎಂದು ಒಪ್ಪುತ್ತಾರೆ. ಇದರಿಂದಾಗಿ ಖುಷಿಯಾಗಿ ಪತ್ನಿಯು  ಸಿಹಿ ಮಾಡಲು ಹೊರಡುತ್ತಾರೆ.


ಮರುದಿವಸ ಓದುತ್ತಾ ಕುಳಿತ ಮಂಜುಳಾಳನ್ನು ನೋಡಿದ ರಾಮಜೀಯವರು ತುಂಬಾ ಸಂತೋಷದಿಂದ “ಮಗಳೇ ನೀನು ಪೂನಾದ ಸಾವಿತ್ರಿ ಬಾಯಿ ಶಾಲೆಗೆ ನೀನೇ  ಮೊದಲು ಬರುತ್ತೀಯ ಬಿಡು ” ಎನ್ನುತ್ತಾರೆ. ಅದೇ ಸಮಯಕ್ಕೆ ಗಂಗಕ್ಕಳ ಗಂಡ ಮನೆಗೆ  ಬರುತ್ತಾನೆ. ಮತ್ತೂ ರಾಮಜೀ ದಂಪತಿಗಳು ಗೌರವದಿಂದ ಮಾತನಾಡಿಸಿ ಕೂಡ್ರಿಸುತ್ತಾರೆ. ಮತ್ತೂ ಚಹ ತಿಂಡಿ ಮಾಡಿ ತರುವಂತೆ ರಾಮಜೀ ಯವರು ಪತ್ನಿಗೆ ಹೇಳಿದಾಗ, ಅಳಿಯಂದಿರು “ಚಹಾದ ಜೊತೆಗೆ ಸಿಹಿನೂ ತಂದು ಕೊಡಿ ಏಕೆಂದರೆ ಮಂಜುಳಾಗೆ ಗಂಡು ನೋಡಿದೀನಿ, ತುಂಬಾ ಒಳ್ಳೆಯ ಮನೆತನ ಹಾಗೂ ನಮ್ಮ ದೂರದ ಸಂಬಂದಿ ಕೂಡ”. ಎಂದು ಹೇಳುತ್ತಾರೆ. ಆಗ ಭೀಮಾಬಾಯಿ ಖುಷಿಯಾಗುತ್ತಾರೆ. ಆದ್ರೆ ರಾಮಜೀಯವರು ಗಲಿಬಿಲಿ ಗೊಳ್ಳುತ್ತಾರೆ. ಏಕೆಂದರೆ ಮಗಳು ಚನ್ನಾಗಿ ಓದಲಿ ಎಂಬುದು ಅವರ ಆಸೆ. ಮಂಜುಳಾಗು ಅಷ್ಟೇ ಓದಬೇಕು ಅನ್ನೋ ಆಸೆ. ಅದಕ್ಕೆ ನನಗೆ ಈಗಲೇ ಮದುವೆ ಬೇಡ ಎನ್ನುತ್ತಾಳೆ. ಅಳಿಯ ಸಪ್ಪೆ ಮುಖ ಮಾಡಿಕೊಂಡಿದ್ದಾರೆ. ಭೀಮಾಬಾಯಿ “ದೊಡ್ಡವರ ಮುಂದೆ ಹೀಗೆಲ್ಲ ಮಾತಾಡಬಾರದು. ಹೋಗಿ ಚಹ ಮಾಡಕೊಂಡು ಬಾ”. ಎಂದು ಹೇಳಿದಾಗ ಮದುವೆ ವಿಷಯದಲ್ಲಿ ಹೀಗೆ ಹೆಣ್ಣು ಮಕ್ಕಳು ಹಠ ಮಾಡಬಾರದು. ಎಂದು ಹೇಳಿದಾಗ, ಮಂಜುಳಾ “ನನ್ನ ಮದುವೆ  ತೀರ್ಮಾನ ನಾನೇ  ತಗೋಬೇಕು” ಎಂದಾಗ, ತಾಯಿ ಗದರುತ್ತಾರೆ. ಮತ್ತೂ ತಂದೆ ಸಮಾಧಾನ ಮಾಡಿ ಒಳಗೆ ಕಳಿಸುತ್ತಾರೆ. ಇದೇ ಸಮಯಕ್ಕೆ ಅಲ್ಲಿ ಬರುವ ಭೀಮ್ ಅಕ್ಕಾ ಚನ್ನಾಗಿ ಓದುತ್ತಾಳೆ ಮತ್ತೂ ಮದುವೆಗೆ ಅಕ್ಕಳ ಒಪ್ಪಿಗೆ ಬೇಕು ಅನ್ನುತ್ತಾನೆ. ಆದ್ರೆ ಭೀಮಾಬಾಯಿ ಈಗ ಭೀಮನಿಗೂ ಗದರುತ್ತಾರೆ. ಮತ್ತೂ ಮಂಜುಳಾ ವಯಸ್ಸಿನ ಎಲ್ಲರೂ ಮದುವೆಯಾಗಿದ್ದಾರೆ. ಜೊತೆಗೆ ತಮ್ಮ ಕಾಯಿಲೆಯ ಭಯ ಅವರಿಗೆ.!  ಹಾಗಾಗಿ ತಾವೂ ಸಾಯುವುದರೊಳಗೆ ಹೆಣ್ಣುಮಕ್ಕಳು ಇಬ್ಬರನ್ನು ಮೆಟ್ಟಿಗೆ ಹಚ್ಚಬೇಕು. ಅವರ ಮದುವೆ ಮಾಡಬೇಕು ಎಂಬ ಹಂಬಲ. ಹೀಗಾಗಿ ಇಡೀ ಕುಟುಂಬ ಹೆದುರು ಹಾಕಿಕೊಂಡರೂ ಸರಿ ನಾನು ಮಂಜುಳಾಳ ಮದುವೆ ಮಾಡುತ್ತೇನೆ ಎಂದು ಹೇಳಿ ಅಳಿಯಂದಿರಿಗೆ ಮುಂದಿನ ಕೆಲಸ ನೆರವೇರಿಸಿ ಎಂದು ಹೇಳುತ್ತಾರೆ ಕೂಡ.


ಮನೆಯಲ್ಲಿ ಮದುವೆ ಬೇಡವೆಂದು ಅಳುತ್ತ ಕುಳಿತ ಮಂಜುಳಾಳಿಗೆ ತಾಯಿ “ಹಠ ಮಾಡಬೇಡ. ನಿನಗೆ ಗೊತ್ತಿಲ್ಲ ತಾಯಿ ಇಲ್ಲದ ಹೆಣ್ಣುಮಕ್ಕಳ ಗೋಳು ಎಂತದ್ದು ಎಂದು” ಪರೋಕ್ಷವಾಗಿ ತಾವೂ ತುಂಬಾ ದಿವಸ ಉಳಿಯುವುದಿಲ್ಲ ಎಂಬ ಅರ್ಥದಲ್ಲಿಯೇ ಮಾತಾಡುತ್ತಾರೆ. ಮಗಳು ಅರ್ಥ ಮಾಡಿಕೊಳ್ಳದಾದಾಗ ತಾಯಿಗೆ ವಿರುದ್ಧ ಮಾತಾಡುತ್ತಿಯ ಮಾತಾಡು ಎನ್ನುತ್ತಾರೆ. ಆದ್ರೆ ಕೊನೆಗೆ ಮಂಜುಳಾ ” ನೀವೂ ಮದುವೆ ಮಾಡಬೇಕು ಅನ್ನೋ ವಿಚಾರ ಇದ್ದಿದ್ದ್ರೆ ನನ್ನೇಕೆ ಶಾಲೆಗೆ ಹಾಕಿದ್ದೀರಿ, ಆಯಿತು ನಾನು ಯಾವತ್ತು ಹೆತ್ತವರ ವಿರುದ್ಧ  ಮಾತಾಡೋ ಮಗಳು ಅಲ್ಲ. ನೀವೂ ಯಾರಿಗೆ ಕೊರಳು ಕೊಡು ಅನ್ನುತ್ತೀರೋ ಅವನಿಗೆ ಕೊರಳು ಒಡ್ಡುತ್ತೇನೆ”. ಎಂದು ಹೇಳಿ ಮನೆಯೊಳಗೇ ಓಡುತ್ತಾಳೆ.

ರಾಮಜೀಯವರು ಈಗ ಭೀಮಾಬಾಯಿಗೆ “ಬೇಡದ ವಿಷಯ ಮಾಡಬೇಕೆಂದಾಗ ನೋವು ಆಗುತ್ತದೆ” ಎಂದು ಹೇಳಲು ಹೋಗುತ್ತಾರೆ. ಆದ್ರೆ ಭೀಮಾಬಾಯಿಯವರು “ಇಲ್ಲಿಯವರೆಗೆ ನಿಮ್ಮ ಯಾವ ಮಾತನ್ನು ಮೀರಿಲ್ಲ ಆದ್ರೆ ಈ ವಿಷಯದಲ್ಲಿ ನೀವೂ ನನ್ನ ಮಾತು ಕೇಳಬೇಕು. ಮಂಜುಳಾ ಹಾಗೂ ತುಳಸಿ  ಮದ್ವೆಯಾಗಿ ಗಂಡನ ಮನೆಗೆ ಹೋಗುವುದನ್ನು ನಾನು ಕಣ್ಣತುಂಬಿಕೊಳ್ಳಬೇಕು ಎನ್ನುತ್ತಾರೆ.


ಭೀಮರಾವ್ ಈಗ ಒಬ್ಬನೇ ಯೋಚಿಸುತ್ತಿದ್ದಾನೆ,

‘ಅಪ್ಪ ಏಕೆ ಏನೂ ಮಾತನಾಡುತ್ತಿಲ್ಲ..?

ಅಮ್ಮ ಏಕೆ ಹೀಗೆ ಹಠ ಮಾಡುತ್ತಿದ್ದಾರೆ..?

ಅಮ್ಮನ ಹಠಕ್ಕೆ ಅಪ್ಪ ಸುಮ್ಮನೆಯಾಗಿದ್ದಾರಲ್ಲ ಏಕೆ..? ಹೀಗೆಲ್ಲ ಯೋಚಿಸುತ್ತಿರುವಾಗ ಇವತ್ತಿನ ಸಂಚಿಕೆಗೆ ತೆರೆ ಬೀಳುತ್ತದೆ.

*ಆದರೆ ಮಂಜುಳಾ ಹಾಗೂ ತುಳಸಿಯ ಇಬ್ಬರೂ ಮದ್ವೆ ಆಗೋತನಕ ಭೀಮಾಬಾಯಿಯವರು ಬದುಕುತ್ತಾರಾ..?

ಇನ್ನೊಂದೆಡೆ ಜಾತಿವಾದಿಗಳು ರಾಮಜೀ ಸಕ್ಪಾಲ್ ರ ಸ್ವಾಭಿಮಾನಕ್ಕೆ ದಕ್ಕೆ ತರಲು ಮತ್ತೇ ಯತ್ನಿಸುತ್ತಾರೆಯೇ..?

ಪುರಂಜನ ಹಾಗೂ ಆತನ ಹಳ್ಳಿಯ ಜನರು ನಿಜಕ್ಕೂ ಆ ಸವರ್ಣಿಯರ ಸಹಾಯ ಇಲ್ಲದೆ ಸ್ವಾಭಿಮಾನದಿಂದ ಬದುಕಿ ತೋರಿಸುತ್ತಾರಾ…? ಇವೆಲ್ಲ ಪ್ರಶ್ನೆಗಳಿಗೂ ಮುಂದಿನ ಸಂಚಿಕೆಗಳಲ್ಲಿಯೇ ನೋಡಿ ತಿಳಿದುಕೊಳ್ಳೋಣ


 

.. ಅಲ್ಲಿಯವರಿಗೂ

… ಜೈಭೀಮ್

… ಮುಂದುವರೆಯುವುದು

 

ಗಣಪತಿ ಚಲವಾದಿ(ಗಗೋಚ), ಬಿಎಂಟಿಸಿ ನಿರ್ವಾಹಕರು , ಕಸಾಪ ಮಯೂರವರ್ಮ, ಸಾಹಿತ್ಯ ಪ್ರಶಸ್ತಿ ಪುರಸ್ಕೃತರು


ಇತ್ತೀಚಿನ ಸುದ್ದಿ