ಅವತಾರ್—2 ಚಿತ್ರ ವೀಕ್ಷಣೆ ವೇಳೆ ವ್ಯಕ್ತಿ ಹೃದಯಾಘಾತದಿಂದ ಸಾವು
18/12/2022
ಆಂಧ್ರಪ್ರದೇಶ: ಅವತಾರ್-2 ಚಿತ್ರ ವೀಕ್ಷಣೆಯ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂನಲ್ಲಿ ನಡೆದಿದೆ.
ಲಕ್ಷ್ಮಿರೆಡ್ಡಿ ಶ್ರೀನು ಎಂಬವರು ಮೃತಪಟ್ಟವರಾಗಿದ್ದು, ಇವರು ಅವತಾರ್ ಚಿತ್ರ ವೀಕ್ಷಿಸಲು ತಮ್ಮ ಸಹೋದರ ರಾಜು ಜೊತೆಗೆ ಆಗಮಿಸಿದ್ದರು. ಚಿತ್ರ ವೀಕ್ಷಿಸುತ್ತಿದ್ದ ವೇಳೆ ರಕ್ತದ ಒತ್ತಡ ಅಧಿಕವಾಗಿ ಹೃದಯಾಘಾತವಾಗಿದೆ ಎನ್ನಲಾಗಿದೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಅವತಾರ್ -2 ಚಿತ್ರದಲ್ಲಿ ಭಯ ಹುಟ್ಟಿಸುವಂತಹ ದೃಶ್ಯಗಳಿಲ್ಲ. ಚಿತ್ರ ವೀಕ್ಷಣೆಯ ವೇಳೆ ಅಧಿಕ ರಕ್ತದೊತ್ತಡವಾಗಿರೋದ್ರಿಂದ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.