ಮುನಿರತ್ನ ಗೆದ್ದ ಕೂಡಲೇ ಸಚಿವ ಸ್ಥಾನ ನೀಡುತ್ತೇನೆ | ಯಡಿಯೂರಪ್ಪ
31/10/2020
ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಮುನಿರತ್ನ ಗೆದ್ದ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಿಎಂ, ಉಪ ಚುನಾವಣೆ ಮುಗಿದ ಬಳಿಕ ಮುನಿರತ್ನ ಅವರನ್ನು ನೂರಕ್ಕೆ ನೂರರಷ್ಟು ಸಚಿವರನ್ನಾಗಿ ಮಾಡುತ್ತೇನೆ ಎಂದ ಅವರು, ಚುನಾವಣೆ ಮುಗಿದ ತಕ್ಷಣವೇ ದೆಹಲಿಗೆ ಹೋಗುತ್ತೇನೆ ಎಂದು ಹೇಳಿದರು.
ಈಗಾಗಲೇ ಸಂಪುಟ ವಿಸ್ತರಣೆ ಮಾಡಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಉಪ ಚುನಾವಣೆ ಮುಗಿದ ಕೂಡಲೇ ದಿಲ್ಲಿಗೆ ಹೋಗುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.