“ನೀನು ಡ್ರೈವರ್ ನಿನ್ನ ಮದುವೆಯಾಗಲ್ಲ“ ಎಂದ ಯುವತಿಗೆ ಭಗ್ನ ಪ್ರೇಮಿಯಿಂದ ಚೂರಿ ಇರಿತ! - Mahanayaka

“ನೀನು ಡ್ರೈವರ್ ನಿನ್ನ ಮದುವೆಯಾಗಲ್ಲ“ ಎಂದ ಯುವತಿಗೆ ಭಗ್ನ ಪ್ರೇಮಿಯಿಂದ ಚೂರಿ ಇರಿತ!

16/11/2020

ಮೈಸೂರು: ಐದು ವರ್ಷಗಳಿಂದ ಸತತ ಪ್ರೀತಿಯ ಬಳಿಕ “ನೀನು ಡ್ರೈವರ್, ನಿನ್ನನ್ನು ನಾನು ಮದುವೆಯಾಗುವುದಿಲ್ಲ” ಎಂದು ಪ್ರೇಯಸಿ ಹೇಳಿದ್ದು, ಇದರಿಂದ ಸಿಟ್ಟಿಗೆದ್ದ ಯುವಕ ಯುವತಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ದೀವಾನ್ಸ್ ರಸ್ತೆಯಲ್ಲಿ ಮನೆ ಮುಂದೆ ನಿಂತಿದ್ದ ಯುವತಿಗೆ  ನ.15ರಂದು ಯುವತಿಗೆ ಚಾಕುವಿನಿಂದ ಇರಿದು ಕೊಲೆ ಯುವಕ ಯತ್ನಿಸಿದ್ದಾನೆ.  ಗಾಯಾಳು ಯುವತಿ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಆರೋಪಿ ಗಗನ್ ಪೊಲೀಸರಿಗೆ ಶರಣಾಗಿದ್ದಾನೆ.

ಗಗನ್ ಡ್ರೈವರ್‌ ಕೆಲಸಕ್ಕೆ ಸೇರಿದ್ದ ಕುರಿತು ಸುನೀತಾ ಬೇಸರ ಮಾಡಿಕೊಂಡಿದ್ದಳು ಎನ್ನಲಾಗಿದೆ. ನಾಲ್ಕೈದು ತಿಂಗಳಿಂದ ಇದೇ ವಿಚಾರಕ್ಕೆ ಜಗಳ ಕೂಡ ಆಗಿತ್ತು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಗಗನ್ ಭಾನುವಾರ ಬೆಳಿಗ್ಗೆ ಈ ಕೃತ್ಯ ಎಸಗಿದ್ದಾನೆ.


Provided by

ಆರೋಪಿ ಗಗನ್ ಈ ಹಿಂದೆಯೇ ರೌಡಿಶೀಟರ್ ಆಗಿದ್ದು, ಸಣ್ಣಪುಟ್ಟ ಕೇಸ್ ಗಳಲ್ಲಿ ಈತನ ಮೇಲೆ ಕೇಸ್ ಗಳಿದ್ದವು. ಆಟೋ ಚಾಲಕನಾಗಿ ಆತ ಕೆಲಸ ಮಾಡುತ್ತಿದ್ದ. ಇದೀಗ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  ಈ ಪ್ರಕರಣ ಸಂಬಂಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ