ಕೃಷಿ ಕಾನೂನು ನಡುವೆಯೇ ಕೇಂದ್ರ ಸರ್ಕಾರದ ಕೊರಳು ಬಿಗಿದ ಪೆಟ್ರೋಲ್ ಬೆಲೆ ಏರಿಕೆ | ಪೆಟ್ರೋಲ್ ಬಂಕ್ ‘ನರೇಂದ್ರ ಮೋದಿ ವಸೂಲಿ ಕೇಂದ್ರ’ ಎಂದ ಕಾಂಗ್ರೆಸ್ ನಾಯಕ
ನವದೆಹಲಿ: ಒಂದೆಡೆ ನೂತನ ಕೃಷಿ ಕಾನೂನಿನ ವಿರುದ್ಧ ರೈತರ ಹೋರಾಟ ಕೇಂದ್ರ ಸರ್ಕಾರದ ಕೊರಳಪಟ್ಟಿ ಬಿಗಿದ್ದಿದ್ದರೆ, ಇನ್ನೊಂದು ಕಡೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧವೂ ದೇಶದಲ್ಲಿ ಪ್ರತಿಭಟನೆ ಆರಂಭವಾಗುವ ಸೂಚನೆ ಕಂಡು ಬಂದಿದೆ.
ನಿನ್ನೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ ಪೆಟ್ರೋಲ್ ಬೆಲೆ ಏರಿಕೆ ಐತಿಹಾಸಿಕ ಶೋಷಣೆ” ಎಂದು ಹೇಳಿದ್ದರು. ಇದರ ಬೆನ್ನಿಗೆ ಇಂದು ಕಾಂಗ್ರೆಸ್ ನಾಯಕ ಶ್ರೀವತ್ಸ ಕೂಡ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ಪೆಟ್ರೋಲ್ ಬೆಲೆ ಏರಿಕೆ ವಿಚಾರವಾಗಿ ತರಾಟೆಗೆತ್ತಿಕೊಂಡಿದ್ದಾರೆ.
Petrol Rate : ₹90
Real Cost : ₹30
Modi Tax : ₹60All Petrol Bunks should be renamed as ‘Narendra Modi Vasooli Kendra’ pic.twitter.com/l38jpsucwx
— Srivatsa (@srivatsayb) December 9, 2020
ಪೆಟ್ರೋಲ್ ದರ: 90 ರೂ.. ನೈಜ ವೆಚ್ಚ: 30 ರೂ. ಮೋದಿ ತೆರಿಗೆ: 60 ರೂ . ಎಲ್ಲ ಪೆಟ್ರೋಲ್ ಬಂಕ್ ಗಳನ್ನು ‘ನರೇಂದ್ರ ಮೋದಿ ವಸೂಲಿ ಕೇಂದ್ರ’ ಎಂದು ಮರುನಾಮಕರಣ ಮಾಡಬೇಕು’ ಎಂದು ಕಾಂಗ್ರೆಸ್ ನಾಯಕ ಶ್ರೀವತ್ಸ ಅವರು ಟ್ವೀಟ್ ಮಾಡಿದ್ದಾರೆ.
ಇನ್ನೆ ಈ ಬಗ್ಗೆ ಟ್ವೀಟ್ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ, ಸಂಸ್ಕರಣೆಗೊಂಡ ಬಳಿ ಪೆಟ್ರೋಲ್ ಪ್ರತಿ ಲೀಟರ್ ಗೆ 30ರೂ.ನಷ್ಟು ಬೆಲೆಗೆ ಸಿಗುತ್ತದೆ. ಎಲ್ಲ ತೆರಿಗೆಗಳು ಸೇರಿದ ಬಳಿ ಇದರ ಬೆಲೆ 60 ರೂಪಾಯಿಗಳಷ್ಟಾಗುತ್ತದೆ. ನನ್ನ ಪ್ರಕಾರ ಪೆಟ್ರೋಲ್ ನ್ನು ಪ್ರತಿ ಲೀಟರ್ ಗೆ 40 ರೂಪಾಯಿಗಳಂತೆ ಮಾರಾಟ ಮಾಡಬೇಕು ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದರು.