ಕಿಸ್ಸಿಂಗ್ ಸೀನ್ ನಲ್ಲಿ ನಟಿಸಿದ್ದಕ್ಕೆ ಪತ್ನಿಯನ್ನು ಕೊಂದ | ನಟಿ ಚಿತ್ರಾಳ ಸಾವಿನ ರಹಸ್ಯ ಬಯಲು - Mahanayaka

ಕಿಸ್ಸಿಂಗ್ ಸೀನ್ ನಲ್ಲಿ ನಟಿಸಿದ್ದಕ್ಕೆ ಪತ್ನಿಯನ್ನು ಕೊಂದ | ನಟಿ ಚಿತ್ರಾಳ ಸಾವಿನ ರಹಸ್ಯ ಬಯಲು

20/12/2020

ಹೈದರಾಬಾದ್: ತಮಿಳು ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣದ ರಹಸ್ಯ ಬಯಲಾಗಿದ್ದು, ಕಿಸ್ಸಿಂಗ್ ಸೀನ್ ನಲ್ಲಿ ನಟಿಸಿದ್ದೇ, ಚಿತ್ರಾ ಸಾವಿಗೆ ಕಾರಣ ಎಂದು ಹೇಳಲಾಗಿದೆ.  ಪಾಂಡಿಯನ್ ಸ್ಪೂರ್ಸ್ ಧಾರಾವಾಹಿಯಲ್ಲಿ ಕಿಸ್ಸಿಂಗ್ ಸೀನ್  ನಲ್ಲಿ ನಟಿಸಿದ್ದೇ, ಚಿತ್ರಾ ಸಾವಿಗೆ ಕಾರಣವಾಗಿದೆ.

ಚಿತ್ರೀಕರಣ ದಿನದಂದು ಚಿತ್ರಾಳ ಪತಿ ಹೇಮಂತ್ ಶೂಟಿಂಗ್ ಸ್ಪಾಟ್ ಗೆ ಹೋಗಿದ್ದ. ಅದೇ ದಿನ ಕಿಸ್ಸಿಂಗ್ ಸೀನ್ ಚಿತ್ರೀಕರಣ ಮಾಡಲಾಗಿತ್ತು. ಕಿಸ್ಸಿಂಗ್ ಸೀನ್ ಶೂಟಿಂಗ್ ನೋಡಿದ ಹೇಮಂತ್ ಪತ್ನಿಯ ವಿರುದ್ಧ ಬಹಳ ಕ್ರೋಧಗೊಂಡಿದ್ದ.

ಶೂಟಿಂಗ್ ನಂತರ ಹೊಟೇಲ್ ಗೆ ಇಬ್ಬರೂ ವಾಪಸ್ ಬಂದಿದ್ದು, ಇದೇ ವಿಚಾರವಾಗಿ ಹೇಮಂತ್  ಪತ್ನಿಯ ಜೊತೆಗೆ ಜಗಳವಾಡಿದ್ದಾನೆ. ಪತ್ನಿಯ ಕ್ಯಾರೆಕ್ಟರ್ ಬಗ್ಗೆ ಸಾಕಷ್ಟ ಆರೋಪ ಮಾಡಿ ಜಗಳವಾಡಿದ್ದಾನೆ. ಈ ವೇಳೆ ಇದೊಂದು ರೋಮಾನ್ಸ್ ಸೀನ್ ಮಾತ್ರ ಅದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಚಿತ್ರ ವಿವರಿಸಿದರೂ ಆತ ಸುಮ್ಮನಾಗಿರಲಿಲ್ಲ. ಮರುದಿನ ಅದೇ ಹೊಟೇಲ್ ರೂಮ್ ನಲ್ಲಿ ನಟಿ  ಚಿತ್ರಾಳ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು.

ಧಾರಾವಾಹಿಯಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ನಟಿಸಿದ್ದಕ್ಕಾಗಿ ಹೇಮಂತ್ ಚಿತ್ರಾಳನ್ನು ಕೊಂದಿದ್ದಾನೆ ಎನ್ನುವುದು ಇದೀಗ ತನಿಖೆಯಲ್ಲಿ ಬಯಲಾಗಿದೆ. ಕೇವಲ ನಟನೆಯನ್ನೇ ನಿಜ ಎಂದು ಕೊಂಡು ಪತ್ನಿಯನ್ನು ಕೊಂದು ಇದೀಗ ಹೇಮಂತ್ ಜೈಲು ಪಾಲಾಗಿದ್ದಾನೆ.

ಇತ್ತೀಚಿನ ಸುದ್ದಿ