ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ 5.49 ಕೋಟಿ ದಂಡ - Mahanayaka

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ 5.49 ಕೋಟಿ ದಂಡ

01/03/2024

ಮನಿ ಲಾಂಡರಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಣಕಾಸು ಗುಪ್ತಚರ ಘಟಕ-ಇಂಡಿಯಾ (ಎಫ್ಐಯು-ಐಎನ್ ಡಿ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ 5.49 ಕೋಟಿ ರೂ.ಗಳ ದಂಡ ವಿಧಿಸಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ. ಆನ್ ಲೈನ್ ಜೂಜಾಟದಂತಹ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕೆಲವು ಘಟಕಗಳು ಮತ್ತು ಅವರ ವ್ಯವಹಾರಗಳ ಜಾಲದ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಿಂದ ನಿರ್ದಿಷ್ಟ ಮಾಹಿತಿ ಪಡೆದ ನಂತರ ಎಫ್ಐಯು-ಐಎನ್ ಡಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನ ಪರಿಶೀಲನೆಯನ್ನು ಪ್ರಾರಂಭಿಸಿತ್ತು.


Provided by

ಈ ಕಾನೂನುಬಾಹಿರ ಕಾರ್ಯಾಚರಣೆಗಳಿಂದ ಗಳಿಸಿದ ಹಣವನ್ನು ಅಂದರೆ ಅಪರಾಧದ ಆದಾಯವನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಈ ಘಟಕಗಳು ಹೊಂದಿರುವ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಮತ್ತು ಜಮಾ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್ಐಯು-ಐಎನ್ಡಿ), ಪಿಎಂಎಲ್ಎ (ಮನಿ ಲಾಂಡರಿಂಗ್ ತಡೆ ಕಾಯ್ದೆ) ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ 5.49 ಕೋಟಿ ರೂ.ಗಳ ವಿತ್ತೀಯ ದಂಡವನ್ನು ವಿಧಿಸಿದೆ ಎಂದು ಸಚಿವಾಲಯ ತಿಳಿಸಿದೆ.

ದಂಡ ವಿಧಿಸಿ ಎಫ್ಐಯು ಫೆಬ್ರವರಿ 15 ರಂದು ಆದೇಶ ಹೊರಡಿಸಿದೆ. ಫೆಬ್ರವರಿ 29 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳಲ್ಲಿ ಹೊಸ ಠೇವಣಿ ಅಥವಾ ಕ್ರೆಡಿಟ್ ಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಿದ ಆರ್ ಬಿಐನ ಜನವರಿ 31 ರ ನಿರ್ದೇಶನದ ನಂತರ ಎಫ್ಐಯು ಈ ಕ್ರಮ ಕೈಗೊಂಡಿದೆ. ನಂತರ ಗಡುವನ್ನು ಮಾರ್ಚ್ 15ರವರೆಗೆ ವಿಸ್ತರಿಸಲಾಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ