ಹಳದಿ ಬಣ್ಣದ ಆಮೆ ಪತ್ತೆ | ಯಾವ ಊರಿನಲ್ಲಿ ಗೊತ್ತಾ? | ವಿಡಿಯೋ ನೋಡಿ - Mahanayaka
3:07 PM Thursday 12 - September 2024

ಹಳದಿ ಬಣ್ಣದ ಆಮೆ ಪತ್ತೆ | ಯಾವ ಊರಿನಲ್ಲಿ ಗೊತ್ತಾ? | ವಿಡಿಯೋ ನೋಡಿ

30/10/2020

ಪ್ರಕೃತಿ ಅಂದರೆ ಅದೊಂದು ವಿಸ್ಮಯದ ಬೃಹತ್ ಗೂಡು. ಇಲ್ಲಿ ಜೀವಿಗಳ ಜೀವ ವೈವಿಧ್ಯತೆಯೇ ಬಹಳ ಚೆಂದ. ಇದೀಗ ಅಪರೂಪದ ಘಟನೆಯೊಂದಕ್ಕೆ ಈ ಪ್ರಕೃತಿ ಸಾಕ್ಷಿಯಾಗಿದೆ. ನೀವು ಕಪ್ಪು-ಬಿಳಿ ಆಮೆಯನ್ನು ನೀವು ನೋಡಿರ ಬಹುದು. ಆದರೆ, ಹಳದಿ ಆಮೆಯನ್ನು ನೀವು   ಎಂದಾದರೂ ನೊಡಿದ್ದೀರಾ? ಇಲ್ಲವಾದರೆ, ಈ ಸ್ಟೋರಿ ನೀವು ತಪ್ಪದೇ ಓದಿ..


ಹಳದಿ ಬಣ್ಣದ ಆಮೆಯೊಂದರ ಚಿತ್ರ ವ್ಯಾಪಕವಾಗಿ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಇದು ಫೋಟೋ ಎಡಿಟ್ ಮಾಡಿರಬಹುದು ಎಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ ಆ ಬಳಿಕ ಇದು ನಿಜವಾದ ಜೀವಂತ ಆಮೆ ಎನ್ನುವುದು ತಿಳಿಯಿತು.


ಈ ಆಮೆ ಪತ್ತೆಯಾಗಿರುವುದು ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿರುವ ಕೊಳವೊಂದರಲ್ಲಿ. ಈ ಆಮೆಯನ್ನು ರಕ್ಷಿಸಿ ಫಾರೆಸ್ಟ್ ಸರ್ವಿಸ್ ಅಧಿಕಾರಿ ದೇಬಾಶಿಶ್ ಶರ್ಮಾ ಅವರು ಇದರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.  ಜೊತೆಗೆ ಈ ಆಮೆಯ ವಿವರಗಳನ್ನೂ ನೀಡಿದ್ದಾರೆ.



Provided by

ಇದು ಪ್ಲಾಫ್ ಸೇಲ್ ಆಮೆಯಾಗಿದೆ. ಇದು ಬಹಳ ಹಳದಿ ಬಣ್ಣದಲ್ಲಿರುತ್ತದೆ. ಇಂತಹ ಆಮೆಗಳು ಬಹಳ ಅಪರೂಪಕ್ಕೆ ಕಾಣಸಿಗುತ್ತವೆ. ಇದು ಹುಟ್ಟಿನಿಂದ ಬರುವ ಕಾಯಿಲೆಯಿಂದಾಗಿ ಈ ರೀತಿಯಾಗಿ ಬಣ್ಣ ಪಡೆದುಕೊಳ್ಳುತ್ತವೆ.  ಅಥವಾ ಅನುವಂಶೀಯ ರೂಪಾಂತರದ ಪ್ರಕ್ರಿಯೆಯೂ ಆಗಿರಬಹುದು ಎಂದು ಶರ್ಮಾ ವಿವರಿಸಿದ್ದಾರೆ. ಅಂದ ಹಾಗೆ ಈ ಹಿಂದೆ ಒಡಿಶಾದಲ್ಲಿಯೂ ಇಂತಹದ್ದೇ ಒಂದು ಆಮೆ ಪತ್ತೆಯಾಗಿತ್ತು.




ಇತ್ತೀಚಿನ ಸುದ್ದಿ