ಕೊನೆಗೂ ಸಂಚಾರಿ ವಿಜಯ್ ರನ್ನು ಉಳಿಸಲಾಗಲಿಲ್ಲ: ನಾಳೆ ಅಂತಿಮ ದರ್ಶನ, ಅಂತ್ಯಕ್ರಿಯೆಗೆ ಸಿದ್ಧತೆ
14/06/2021
ಬೆಂಗಳೂರು: ವೈದ್ಯರ ನಿರಂತರ ಚಿಕಿತ್ಸೆಯ ಬಳಿಕವೂ ಸಂಚಾರಿ ವಿಜಯ್ ಅವರು ರಿಕವರಿ ಆಗಿಲ್ಲ. ಅವರ ಬ್ರೈನ್ ಡೆಡ್ ಆಗಿದ್ದು, ಹೀಗಾಗಿ ಅವರ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.
ಇನ್ನೂ ಇಂದು ರಾತ್ರಿ 9:30ರಿಂದ ನಟ ಸಂಚಾರಿ ವಿಜಯ್ ಅವರ ಅಂಗಾಂಗವನ್ನು ಬೇರ್ಪಡಿಸಲಾಗುವುದು ಎಂದು ತಿಳಿದು ಬಂದಿದೆ. 1 ಲಿವರ್, 2 ಕಿಡ್ನಿ, 2 ಕಣ್ಣುಗಳನ್ನು ದಾನ ಮಾಡುವ ಮೂಲಕ ಸಂಚಾರಿ ವಿಜಯ್ ಅವರು ಹಲವು ಜೀವಗಳನ್ನುಳಿಸಲು ನೆರವಾಗಲಿದೆ.
ಇನ್ನೂ ನಿರ್ದೇಶಕ ಮನ್ಸೂರೆ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ನಾಳೆ ಬೆಳಗ್ಗೆ 8ಗಂಟೆಯಿಂದ 10 ಗಂಟೆಯ ವರೆಗೆ ರವೀಂದ್ರ ಕಲಾಭವನದಲ್ಲಿ ಸಂಚಾರಿ ವಿಜಯ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನದ ಬಳಿಕ ಸಂಚಾರಿ ವಿಜಯ್ ಅವರ ಊರಾದ ಚಿಕ್ಕಮಗಳೂರಿನ ಪಂಚನ ಹಳ್ಳಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.