ಈ ವರ್ಷ ಶಾಲೆ ಪ್ರಾರಂಭ ಆಗುತ್ತಾ, ಇಲ್ವಾ? | ಸಚಿವ ಸುರೇಶ್ ಕುಮಾರ್ ಏನಂದ್ರು ಗೊತ್ತಾ? - Mahanayaka

ಈ ವರ್ಷ ಶಾಲೆ ಪ್ರಾರಂಭ ಆಗುತ್ತಾ, ಇಲ್ವಾ? | ಸಚಿವ ಸುರೇಶ್ ಕುಮಾರ್ ಏನಂದ್ರು ಗೊತ್ತಾ?

20/11/2020

ದಾವಣಗೆರೆ: ಮಕ್ಕಳ ಯೋಗಕ್ಷೇಮ ಭವಿಷ್ಯ ನೋಡಿಕೊಂಡು ಶಾಲೆ ಆರಂಭಿಸಬೇಕೇ ಬೇಡವೇ? ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಶಾಲೆ ಆರಂಭಿಸಲು ವಿಫಲವಾಗಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಪೋಷಕರು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಈ ನಡುವೆ ಸುರೇಶ್ ಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ.

ಎಲ್ಲ ಶಾಲಾಭಿವೃದ್ಧ ಸಮಿತಿಯವರು, ಮುಖ್ಯಶಿಕ್ಷಕರು ಹಾಗೂ ಪೋಷಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಮಕ್ಕಳ ಹಿತ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಿಸಬೇಕೋ, ಬೇಡವೋ ಎನ್ನುವುದನ್ನು ನಿರ್ಧರಿಸುತ್ತೇವೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ