ಬಡತನ ಓದಲು ಬಿಡಲಿಲ್ಲ | ಶಿಕ್ಷಣವಿಲ್ಲದೇ ಬದುಕಳು ಅವಳು ತಯಾರಿರಲಿಲ್ಲ | ಲಾಕ್ ಡೌನ್ ಗೆ ಇನ್ನೆಷ್ಟು ಬಲಿಬೇಕು? - Mahanayaka

ಬಡತನ ಓದಲು ಬಿಡಲಿಲ್ಲ | ಶಿಕ್ಷಣವಿಲ್ಲದೇ ಬದುಕಳು ಅವಳು ತಯಾರಿರಲಿಲ್ಲ | ಲಾಕ್ ಡೌನ್ ಗೆ ಇನ್ನೆಷ್ಟು ಬಲಿಬೇಕು?

09/11/2020

ಹೈದರಾಬಾದ್: ಓದಲು ಆರ್ಥಿಕತೆ ಅಡ್ಡಿಯಾದ ಕಾರಣ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಶಿಕ್ಷಣವಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ತನ್ನ ಅಪ್ಪ-ಅಮ್ಮನಿಗೆ ಡೆತ್ ನೋಟ್ ನಲ್ಲಿ ತಿಳಿಸಿದ್ದಾಳೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಧ್‍ನಗರದಲ್ಲಿ ಈ ಘಟನೆ ನಡೆದಿದೆ. ಇಷ್ಟಲ್ಲಕ್ಕೂ ಕಾರಣವಾಗಿರುವುದು ಲಾಕ್ ಡೌನ್ ಎಂಬ ಮಹಾಮಾರಿ.  ನವೆಂಬರ್ 2ರಂದು 19 ವರ್ಷದ ಯುವತಿ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಲಾಕ್‍ಡೌನ್ ನಿಂದಾಗಿ ಐಶ್ವರ್ಯಾ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. 12ನೇ ತರಗತಿಯಲ್ಲಿ ಶೇ.98.5 ಅಂಕ ಗಳಿಸಿದ್ದ ಐಶ್ವರ್ಯಾ ಮೆರಿಟ್ ಆಧಾರದ ಮೇಲೆ ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದಳು.  ಐಶ್ವರ್ಯ ತಂದೆ ಮೋಟರ್ ಸೈಕಲ್ ಮೆಕಾನಿಕ್ ಆಗಿದ್ದಾರೆ. ತಾಯಿ ಟೈಲರ್ ಆಗಿದ್ದರು. ಲಾಕ್ ಡೌನ್ ಗೂ ಮೊದಲು ಇವರ ಕುಟುಂಬ ಸರಿಯಾಗಿ ನಿರ್ವಹಣೆಯಾಗುತ್ತಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಇವರ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಯಿತು.

ತನಗೆ 80 ಸಾವಿರ ಶಿಷ್ಯವೇತನ ಸಿಗಲಿದೆ ಎಂದು ಐಶ್ವರ್ಯ ಅಂದುಕೊಂಡಿದ್ದಳು. ಆದರೆ, ಅದೂ ಬರಲಿಲ್ಲ.  ಐಶ್ವರ್ಯಗಳಿಗೆ ಮೊಬೈಲ್ ನಲ್ಲಿ ಆನ್ ಲೈನ್ ಕ್ಲಾಸ್ ಕೂಡ ಸರಿಯಾಗಿ ಆಗುತ್ತಿರಲಿಲ್ಲ. ಹೀಗಾಗಿ ಲಾಪ್ ಟಾಪ್ ತೆಗೆದುಕೊಡಲು ತಂದೆಯ ಬಳಿ ಒಂದು ಬಾರಿ ಮಾತ್ರವೇ ಹೇಳಿದ್ದಳಂತೆ. ಆದರೆ, ಆ ಬಳಿಕ ಕೆಲವು ಸಮಯದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಶಿಕ್ಷಣಕ್ಕಾಗಿ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತಿದೆ. ಆದರೆ ನಾನು ಓದದೇ ಬದುಕಲು ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ಪದವಿ ಶಿಕ್ಷಣ ಪಡೆದ ಬಳಿಕ, ಐಎಎಸ್ ಪರೀಕ್ಷೆ ಬರೆಯಬೇಕು ಎಂದು ಐಶ್ವರ್ಯ ಅಂದುಕೊಂಡಿದ್ದಳಂತೆ, ಆದರೆ ಕೇಂದ್ರ ಸರ್ಕಾರದ ಲಾಕ್ ಡೌನ್, ಇವರ ಕನಸುಗಳನ್ನು ಭಗ್ನ ಮಾಡಿದೆ.

ಇತ್ತೀಚಿನ ಸುದ್ದಿ